
ಬೇತಮಂಗಲ.ಮೇ೧೭: ಸುಂದರಪಾಳ್ಯ ಗ್ರಾಪಂಯ ಸುವರ್ಣಹಳ್ಳಿ ಹಾಗೂ ಕುಪ್ಪಂಪಾಳ್ಯ ಗ್ರಾಮದಲ್ಲಿ ಶ್ರೀ ಗಂಗಮಾಂಭ ಮತ್ತು ಮಾರಿಕಾಂಭ ಜಾತ್ರೆಯ ಪ್ರಯುಕ್ತ ವಿಜೃಂಭಣೆ ಕರಗ ಮಹೋತ್ಸವ ನಡೆಯಿತು.
ಸುವರ್ಣಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ದೇವಿ ಭೂದೇವಿ ಸಮೇತ ಶ್ರೀರಂಗನಾಥಸ್ವಾಮಿ ಹಾಗೂ ಕುಪ್ಪಂಪಾಳ್ಯ ಗ್ರಾಮದಲ್ಲಿ ನೆಲೆಸಿರುವ ಶ್ರೀ ಗಂಗಮಾಂಭ ದೇವಿಯ ೫ನೇ ವರ್ಷದ ಪುಪ್ಪ ಪಲ್ಲಕ್ಕಿ ಹಾಗೂ ಹೂವಿನ ಕರಗ ಮಹೋತ್ಸವ ಶ್ರದ್ಧ ಭಕ್ತಿಯಿಂದ ನಡೆಯಿತು.
ಸುವರ್ಣಹಳ್ಳಿ ಹಾಗೂ ಕುಪ್ಪಂಪಾಳ್ಯ ಗ್ರಾಮದ ಜಾತ್ರ ಮಹೋತ್ಸವದ ಪ್ರಯುಕ್ತ ಗ್ರಾಮಗಳನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು, ಬೃಹತ್ ಗಾತ್ರದ ದೇವರ ಮೂರ್ತಿಗಳನ್ನು ವಿದ್ಯುತ್ ದೀಪಗಳಿಂದ ಬಿಡಿಸಲಾಗಿತ್ತು.
ಗ್ರಾಮ ದೇವತೆಗಳನ್ನು ಪುಪ್ಪ ಪಲ್ಲಕ್ಕಿಯ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗ್ರಾಮಸ್ಥರಿಂದ ಪೂಜೆ ಸ್ವೀಕರಿಸಲಾಯಿತು, ಬೇತಮಂಗಲ ಗ್ರಾಮದ ಕರಗ ಪೂಜಾರಿ ಕೃಷ್ಣಮೂರ್ತಿ ಸುಮಾರು ೧೦ ಗಂಟೆಗೆ ಕರಗವನ್ನು ಹೊತ್ತು ದೇಗುಲದಿಂದ ಹೊರ ಬಂದರು.
ಗ್ರಾಮಸ್ಥರಿಂದ ಆಯೋಜನೆ ಮಾಡಿದ್ದ ವೇದಿಕೆಯ ಮೇಲೆ ೧ ಗಂಟೆಗೂ ಹೆಚ್ಚು ಕಾಲ ಕರಗ ಪೂಜಾರಿ ಕೃಷ್ಣ ಮೂರ್ತಿ ತಮಟೆ ಶಬ್ದಕ್ಕೆ ತಕ್ಕಂತೆ ನೃತ್ಯ ಮಾಡುವ ಮೂಲಕ ನೆರೆದಿದ್ದ ಭಕ್ತರನ್ನು ರಂಜಿಸಿದರು.
ಈ ಜಾತ್ರ ಮಹೋತ್ಸವವನ್ನು ಗ್ರಾಪಂ ಸದಸ್ಯರಾದ ರಾಧಕೃಷ್ಣಪ್ಪ, ಗ್ರಾಪಂ ಸದಸ್ಯ ರೆಡ್ಡಮ್ಮ, ಗಿರೀಶ್, ಗ್ರಾಮಾಂತರ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಉದಯ್ ಕುಮಾರ್ ಸೇರಿದಂತೆ ಯುವಕರ ತಂಡ ಹಾಗೂ ಗ್ರಾಮಸ್ಥರು ಶ್ರದ್ಧ ಭಕ್ತರಿಂದ ಯಶಸ್ವಿಯಾಗಿ ನಡೆಸಿದರು.