ವಿಜೃಂಭಣೆ ಬ್ರಹ್ಮರಥೋತ್ಸವ

ಕನಕಪುರ, ಮಾ೪: ತಾಲೂಕಿನ ಪ್ರಸಿದ್ಧ ಧಾರ್ಮಿಕಕ್ಷೇತ್ರ ಹಾಗೂ ಚಿಕ್ಕತಿರುಪತಿಯೆಂದೆಖ್ಯಾತಿಯಾದ ಕಲ್ಲಹಳ್ಳಿಲಯ ಶ್ರೀ ವೆಂಕಟರಮಣಸ್ವಾಮಿಯ ಬ್ರಹ್ಮರಥೋತ್ಸವವ ಬಹಳ ವಿಜೃಂಬಣೆಯಿಂದ ನೆರವೇರಿತು.
ಶ್ರೀ ವೆಂಕಟರಮಣಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ತಹಶೀಲ್ದಾರ್ ಸ್ಮಿತಾ ರಾಮು, ಹಾಗೂ ವಿಧಾನ ಪರಿಷತ್ ಸದಸ್ಯಎಸ್.ರವಿ ಚಾಲನೆ ನೀಡಿದರು.
ಶ್ರೀ ವೆಂಕಟರಮಣಸ್ವಾಮಿಗೆ ಬ್ರಹ್ಮರಥೋತ್ಸವದ ಅಂಗವಾಗಿ ಸ್ವಾಮಿಗೆ ಪ್ರಾತಃಕಾಲದಲ್ಲಿದೇವಾಲಯದಅರ್ಚಕರು ಪಂಚಾಮೃತಾಭಿಷೇಕ ಮಾಡಿ ವಜ್ರಾಂಗಿಯನ್ನು ತೊಡಿಸಿ ಹೂವಿನ ಅಲಂಕಾರದಿಂದ ಸಿಂಗಾರ ಮಾಡಿದ್ದರು.ಬ್ರಹ್ಮರಥೋತ್ಸವದ ಅಂಗವಾಗಿ ರಥವನ್ನು ಹೂವಿನಿಂದ ಸಿಂಗಾರ ಮಾಡಲಗಿತ್ತು. ಸುಡು ಬಿಸಿಲಿನಲ್ಲಿದೇವಾಲಯದಲ್ಲಿ ನಡೆದ ಹೂಮ ಹವನಾದಿಗಳನಂತರ ಸ್ವಾಮಿಯನ್ನುರಥದಲ್ಲಿ ಕುಳ್ಳರಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರರಥಕ್ಕೆ ಚಾಲನೆ ನೀಡಲಾಯಲಿತು.
ರಾಜ್ಯದ ನಾನಾ ಭಾಗಗಳಿಂದ ಶ್ರೀ ವೆಂಕಟೇಶ್ವರ ಸ್ವಾಮಿಯ ಭಕ್ತಾಧಿಗಳು ಈ ಶುಭಗಳಿಗೆಯನ್ನು ಕಣ್ಣುತುಂಭಿಕೊಳ್ಳಲು ಆಗಮಿಸಿದ್ದರು. .ಯಾವುದೇಅಹಿತಕರ ಘಟನೆಗಳು ನಡೆದಯದಂತೆ ಸೂಕ್ತ ಪೊಲೀಸ್ ಬಂದೊ ಬಸ್ತ್ ಮಾಡಲಾಗಿತ್ತು.
ತಾಲೂಕು ಪಂಚಾಯತಿ ಮಾಜಿಅಧ್ಯಕ್ಷ ಹೊಸಕೋಟೆ ಪುರುಷೋತ್ತಮ್, ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷ ರಾಯಸಂದ್ರ ರವಿ, ಕಲ್ಲಹಳ್ಳಿಯ ಗ್ರಾಮ ಪಂಚಾಯತಿ ಮಾಜಿಅಧ್ಯಕ್ಷ ಮರಿಯಣ್ಣ, ಸೇರಿದಂತೆಎಲ್ಲಾರಾಜಕೀಯ ಮುಖಂಡರುದೇವಾಲಯಕ್ಕೆ ಆಗಮಿಸಿ ಸ್ವಾಮಿಯದರ್ಶನ ಪಡೆದರು.
ಹಾಗೆಯೇ ಶಿರಸ್ತೆದಾರ್ ಜಗದೀಶ್, ಸೇರಿದಂತೆತಾಲೂಕಿನಎಲ್ಲಾ ಅಧಿಕಾರಿಗಳು ಕೂಡದೇವಾಲಯಕ್ಕೆ ಆಗಮಿಸಿ ವೆಂಕಟರಮಣಸ್ವಾಮಿಯದರ್ಶನ ಪಡೆದರು. ಹಾಗೆಯೇರಾತ್ರಿ ಮುತ್ತಿನ ಪಲ್ಲಕ್ಕಿಉತ್ಸವ ಹಾಗೂ ಜಾತ್ರಾಮಹೋತ್ಸವಕೂಡಇದ್ದು ೫೦ಸಾವಿರಕ್ಕೂ ಹೆಚ್ಚು ಜನರುದೇವಾಲಯಕ್ಕೆ ಆಗಮಿಸಿ ಸ್ವಾಮಿಯದರ್ಶನ ಪಡೆದರು.
ಇದೇ ಸಂದರ್ಭದಲ್ಲಿಅರಕೆ ಹೊತ್ತ ಭಕ್ತಾಧಿಗಳು ನೀರು ಮಜ್ಜಿಗೆ ಪಾನಕ, ಹಾಗೂ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸಿದರು.