ವಿಜೃಂಭಣೆಯ 116ನೇ ಗಂಧೋತ್ಸವ ಆಚರಣೆ

ವಾಡಿ:ನ.7: ಪಟ್ಟಣ ಸಮೀಪದ ರಾವೂರ ಗ್ರಾಮದ ಹಜರತ ಮಹೆಬೂಬ ಸುಭಾನಿ ದರ್ಗಾದ 116ನೇ ಸಂದಲ ಅತ್ಯಂತ ವಿಜೃಂಭಣೆಯಿಂದ ಆಚÀರಿಸಲಾಯಿತ್ತು.

ಪ್ರತಿವರ್ಷದ ಸಂಪ್ರದಾಯದಂತೆ ವಾರ್ಡ ನಂ-3ರ ಪೀರಾವಾಲೇ ಮೊಹಲ್ಲಾದಿಂದ ಸಂದಲ ಮೆರವಣಿಗೆ ಹೊರಟು ಮುಖ್ಯ ರಸ್ತೆಯಿಂದ ಶ್ರೀಸಿದ್ದಲಿಂಗೇಶ್ವರ ಮಠದ ಎದುರಿನಿಂದ ಮೆರವಣಿಗೆಯು ರಾತ್ರಿ ಮಹೆಬೂಬ ಸುಭಾನಿ ದರ್ಗಾ ಬಂದು ತಲುಪಿತ್ತು.

ಹಜರತ ಮಹೆಬೂ¨ ಸುಭಾನಿ ದರ್ಗಾದ ಸಜ್ಜಾದ ನಶೀನ(ಪೀಠಾಧಿಪತಿ) ಸೈಯ್ಯದ ಷಾ ಮೂಸಾ ಖಾದ್ರಿ ದರ್ಗಾದ ಮಜಹಾರಗಳಿಗೆ ಗಂಧ ಲೇಪನ ಮಾಡಿ, ಚಾದರ ಹೋದಿಸಿ, ಅಲಂಕಾರಿತ ಹೂವನ್ನು ಅರ್ಪಿಸಿದರು. ನಂತರ ಫಾತೇಹಾವನ್ನು ಓದಿದರು. ಇದೇ ಸಂದರ್ಭದಲ್ಲಿ ರಜಾಕ ಮಾಸುಲ್ದಾರ್ ಹಾಗೂ ಸಂಗಡಿಗರು ಸಲಾಂ ಓದುವ ಮೂಲಕ ನೇರಿದಿದ್ದ ಜನರನ್ನು ಆಕರ್ಷಿತವನ್ನಾಗಿಸುವ ನಿಟ್ಟಿನಲ್ಲಿ ಸಲಾಂ ಓದಿದರು.

ಈ ಸಂದರ್ಭದಲ್ಲಿ ಮುಖಂಡರಾದ ನಜೀರಮಿಯ್ಯಾ ಕೋತ್ವಾಲ್, ಅಬ್ಬುಮಿಯ್ಯಾ ಪೀರಾವಾಲೇ, ಜಾಫರಮಿಯ್ಯಾ ಕರ್ನೂಲ, ವಕೀಲರಾದ ಮಲಿಕಪಾಶಾ ಮೌಜನ್, ಮಾಜಿ ಗ್ರಾ.ಪಂ ಅಧ್ಯಕ್ಷ ವೆಂಕಟೇಶ ಕಟ್ಟಿಮನಿ, ಜಾಕೀರ ಫತ್ತೇಖಾ, ಇಮಾಮಸಾಬ ಮೂಸಾವಾಲೇ, ಮಲ್ಲಣ್ಣ ಮಾಲಗತ್ತಿ ಅಬ್ದುಲ ನಬೀ ಇನಾಮದಾರ, ಅಂಬರೀಷ ದೇಸಾಯಿ, ರಫೀಕಸೇಠ, ರೀಯಾಜ ಮೌಜನ್, ಖದೀರ ಮೌಜನ್, ಸಾಬಣ್ಣ ಗುದ್ದಗಲ, ಸಾದಿಕ ಮಾಸುಲ್ದಾರ, ಹಾಜೀ ಮಾಸುಲ್ದಾರ, ಮುಕ್ರಮ ಪೀರಾವಾಲೇ, ಗೋಲಾಳಪ್ಪ ಪೂಜಾರಿ, ಹಾಜೀ ಮೂಸಾವಾಲೇ, ನಸೀರ ಫತ್ತೇಖಾ, ಅಬ್ದುಲ ರಹೆಮಾನ, ಅಬ್ದುಲನಬೀ ಸಿಕ್ಕಿಲಗಾರ, ಸಂದೀಪ ಕೆ ಹುಮನಾಬಾದ, ಹಮೀದಬೇಗ ಮೈಸೂರ ಟೇಲರ್, ಕರೀಮ ಗೋಲಾ ಸೇರಿದಂತೆ ಅನೇಕರು ಇದ್ದರು.