ವಿಜೃಂಭಣೆಯ ವೈರಮುಡಿ ಜಾತ್ರಾ ಮಹೋತ್ಸವ

ಮೇಲುಕೋಟೆ:ಮಾ:27: ವೈರಮುಡಿ ಜಾತ್ರಾ ಮಹೋತ್ಸವದ ಏಳನೇ ತಿರುನಾಳ್ ದಿನವಾದ ಚೆಲುವನಾರಾಯಣಸ್ವಾಮಿಯವರ ಬ್ರಹ್ಮರ ಥೋತ್ಸವ ಚತುರ್ವೀದಿಗಳಲ್ಲಿ ಸಡಗರ ಸಂಭ್ರಮದೊಂದಿಗೆ ವೈಭವಯುತವಾಗಿ ನೆರವೇರಿತು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ರಥಾರೂಢನಾದ ಚೆಲುವನಾರಾಯಣನ ದರ್ಶನಪಡೆದು ಪುನೀತರಾದರು.
ದ್ವಾರಪಾಲಕರು, ಸಾರಥಿ ಹಾಗೂ ತಳಿರು ತೋರಣಗಳಿಂದ ಭವ್ಯವಾಗಿ ಅಲಂಕೃತವಾದ ಮಹಾರಥಕ್ಕೆ ಆಕರ್ಷಕ ಪುಷ್ಪಾಲಂಕಾರ ಮಾಡಲಾಗಿತ್ತು. ಬೆಳಿಗ್ಗೆ 7-30ರವೇಳೆಗೆ ಯಾತ್ರಾದಾನ, ರಥಬಲಿ ನೆರವೇರಿಸಲಾಯಿತು. ನಂತರ 8-00ಕ್ಕೆ ವಜ್ರಖಚಿತ ರಾಜಮುಡಿ ಕಿರೀಟಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವ ರಥಮಂಟಪಕ್ಕೆ ತಲುಪಿತು. ಮೂರು ಪ್ರದಕ್ಷಿಣೆಯ ನಂತರ ಮಹೂರ್ತಪಠನ ಮಾಡಿ ರಥಾರೋಹಣ ಕೈಗೊಳ್ಳಲಾಯಿತು.
ನಂತರ ವೇದ ಮತ್ತು ದಿವ್ಯಪ್ರಬಂಧ ಪಾರಾಯಣದೊಂದಿಗೆ ರಥಮಂಟಪದಲ್ಲಿ ಪೂಜಾಕೈಂಕರ್ಯಗಳು ನೆರವೇ ರಿದವು. ಈ ವೇಳೆ ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ನಾಗಮ್ಮ ದಂಪತಿಗಳು ಕುಟುಂಬ ಸಮೇತ ಉಪಸ್ಥಿತರಿದ್ದು ರಥಮಂಟಪದಲ್ಲೇ ವಿಶೇ ಷ ಪೂಜೆ ಸಲ್ಲಿಸಿದರು. ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಮತ್ತು ಧನಲಕ್ಷ್ಮಿ ದಂಪತಿಗಳು ಕುಟುಂಬಸಮೇತರಾಗಿ ರಥೋತ್ಸವದಲ್ಲಿ ಭಾಗಿಯಾಗಿ ಸ್ವಾಮಿಯ ಉತ್ಸವಕ್ಕೆ ರೇಷ್ಮೆ ವಸ್ತ್ರ ಸಮರ್ಪಿದ್ದರಲ್ಲದೆ, ದೇವಾಲಯದ ಮುಂಭಾಗ ವಿಶೇಷಪೂಜೆ ಸಲ್ಲಿಸಿದರು. ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗ ಳಮ್ಮ, ತಹಶೀಲ್ದಾರ್ ಪ್ರಮೋದ್‍ಪಾಟೀಲ್, ಗ್ರಾ.ಪಂ ಅಧ್ಯಕ್ಷ ಅವ್ವಗಂಗಾಧರ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಮ್ಮೇಗೌಡ ಭಾಗವಹಿಸಿದ್ದರು.
ಬೆಳಿಗ್ಗೆ 9-45ರವೇಳೆಗೆ ಆರಂಭವಾದ ಮಹಾರಥ, ಮಾರೀಗುಡಿಬೀದಿ, ರಾಜಬೀದಿ ಹಾಗೂ ವಾನಮಾಮಲೆ ಮಠದ ಬೀದಿಗಳಲ್ಲಿ ಸಡಗರ ಸಂಭ್ರಮದೊಂದಿಗೆ ಸಂಚರಿಸಿ ಭಕ್ತರಿಗೆದರ್ಶನ ನೀಡಿದ ಮಹಾರಥ ಮದ್ಯಾಹ್ನ 11-30ರವೇಳೆಗೆ ಮತ್ತೆ ಸಾಂಗವಾಗಿ ರಥಮಂಟಪ ಸೇರಿತು. ಶ್ರೀದೇವಿ, ಭೂದೇವಿ ಮತ್ತು ಭಗವದ್ರಾಮಾನುಜರೊಂದಿಗೆ ರಥಾರೂಢನಾಗಿದ್ದ ಶ್ರೀಚೆಲುವನಾರಾಯಣಸ್ವಾಮಿಯ ದರ್ಶನ ಮಾಡಿದ ಭಕ್ತರು, ತೇರಿಗೆ ಹಣ್ಣುಜವನ ಎಸೆದು ಮೆಣಸು, ಉಪ್ಪನ್ನು ಸಮರ್ಪಿಸಿ ಭಕ್ತಿಭಾವ ಮೆರೆದರು. ಸುಪುತ್ರ ಅಪೇಕ್ಷಿತ ದಂಪತಿಗಳು ಸಹ ರಥನಿವೇದನದÀ ಪಿಂಡಪ್ರಸಾದವನ್ನು ಸ್ವೀಕರಿಸಿ ಪ್ರಾರ್ಥನೆ ಸಲ್ಲಿಸಿದರು,
ಕೋವಿಡ್ ನಿಯಮದಿಉಂದಾಗಿ ವೈರಮುಡಿ ಉತ್ಸವಕ್ಕೆ ಭಕ್ತರ ಪ್ರವೇಶ ನಿರ್ಭಂದಿಸಿತ್ತಾದರೂ ಇಂದು ರಥೋತ್ಸವದಲ್ಲಿ ಭಾಗಿಯಾಗಲು ಮುಕ್ತ ಅವಕಾಶ ನೀಡಲಾಗಿತ್ತು ಬೆಳಿಗ್ಗೆ 10 ಗಂಟೆಯವರೆಗೆ ತೀರ ವಿರಳ ಸಂಖ್ಯೆಯಲ್ಲಿದ್ದ ಭಕ್ತರ ದಟ್ಟಣೆ ಮದ್ಯಾಹ್ನದವೇಳೆಗೆ ಸ್ವಲ್ಪಮಟ್ಟಿಗೆ ಹೆಚ್ಚಾಯಿತು. ಮಾಸ್ಕ್ ಬಳಸಿದ ಭಕ್ತರು ಸುಗಮವಾಗಿ ದೇವರದರ್ಶನ ಮಾಡಿದರು. ಪಾಂಡವಪುರ ಸರ್ಕಲ್ ಇನ್ಸ್‍ಪೆಕ್ಟರ್, ಪ್ರಭಾಕರ್ ಮತ್ತು ಮೇಲುಕೋಟೆ ಎಸ್.ಐ ಗಣೇಶ್ ಮಾರ್ಗದರ್ಶನಲ್ಲಿ ಪೊಲೀಸ್ ಭದ್ರತೆಮಾಡಲಾಗಿತ್ತು.