ವಿಜೃಂಭಣೆಯ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವ

ಸರಗೂರು: ಜೂ.02:- ಪಟ್ಟಣದ 7 ನೇ ವಾರ್ಡಿನಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಮಹಾರಥೋತ್ಸವದ ರಥ ಎಳೆದು ಭಕ್ತರು ತಮ್ಮ ಭಕ್ತಿ ಸಮರ್ಪಿಸಿದರು.
ಪಟ್ಟಣದಲ್ಲಿ ಸುಮಾರು ವರ್ಷಗಳಿಂದ ಇರುವ ಪ್ರಸಿದ್ದ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ರಥೋತ್ಸವದ ಅಂಗವಾಗಿ ತಳಿರುತೋರಣಗಳಿಂದ ಸಿಂಗರಿಸಿ, ರಂಗೋಲಿ ಬಿಡಿಸಿ ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಿ ದೇವರ ಉತ್ಸವಮೂರ್ತಿಯನ್ನು ರಥದ ಮೇಲೆ ಇರಿಸಿ ದೇವಸ್ಥಾನದ ಮುಂಭಾಗದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಂಗಳವಾದ್ಯ ಇತರ ವೇದಘೋಷ್ಟಿಗಳೊಂದಿಗೆ ಮೆರವಣಿಗೆ ಮೂಲಕ ಉತ್ಸವ ಮೂರ್ತಿಯನ್ನು ವಿವಿದ ಹೂವಿನಿಂದ ಅಲಂಕೃತ ಗೊಂಡ ರಥೋತ್ಸವದಲ್ಲಿ ಶ್ರೀದೇವಿ ಬೂದೇವಿ ವಾಸುದೇವ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಥ ಎಳೆಯುವ ಮೂಲಕ ಮೆರವಣಿಗೆ ನಡೆಸಲಾಯಿತು.
ದಾರಿ ಉದ್ದಕ್ಕೂ ತೆಂಗಿನಕಾಯಿ ಹೊಡೆದು ಭಕ್ತರು ಹರಕೆ ತೀರಿಸಿದರು, ದೇವಾಲಯಕ್ಕೆ ಬಂದ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು, ದೇವಸ್ಥಾನದ ಪ್ರಧಾನ ಆರ್ಚಕರಾದ ಡಾ ಕಸ್ತೂರಿರಂಗನ್, ಬೆಂಗಳೂರಿನ ಮಲ್ಲೇಶ್ವರಂ ನ ಪ್ರಧಾನ ಅರ್ಚಕರಾದ ಭರತ್ ಭಟ್ಟರು, ಕೇಶವಮೂರ್ತಿ, ಬಾಲಕೃಷ್ಣ, ವೈದೇವಿರಂಗನ್, ಶ್ರೀ ಶರಣ್ಯ, ಎಸ್.ಎಂ. ಶ್ರೀವತ್ಸ, ಚಕ್ರವರ್ತಿ, ಎಸ್.ವರದರಾಜು, ನರಸಿಂಹಚಾರ್, ಮೋಹನ್‍ಚಾರ್, ಲಕ್ಷ್ಮೀ ನರಸಿಂಹ, ಶ್ರೀಕಾಂತ್, ಶ್ರೀನಿವಾಸಚಾರ್, ಆಗಮಿಕರು,ವಾರ್ಡ್ ನ ಪಟ್ಟಣ ಪಂಚಾಯಿತಿ ಸದಸ್ಯ ವೀರೇಶ್(ಶಿವಕುಮಾರ್), ಆರ್ಯ ಈಡಿಗ ಸಮಾಜದವರು,ತೋಗಟವೀರ ಸಮಾಜ ಸೇರಿದಂತೆ ಎಲ್ಲಾ ಸಮಾಜದ ಬಂದುಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಸ್ವಾಮಿಯ ದರ್ಶನ ಪಡೆದರು.
ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ ಕಸ್ತೂರಿರಂಗನ್ ವೈದೇವಿ ರಂಗನ್ ಬೆಂಗಳೂರಿನ ಮಲ್ಲೇಶ್ವರಂ ನ ಪ್ರಧಾನ ಅರ್ಚಕರಾದ ಭರತ್ ಭಟ್ಟರು ದಾಸೋಹದ ರಾಶಿಗೆ ಪೂಜೆ ಸಲ್ಲಿಸಿ ಇವರ ಮುಖಾಂತರ ಅನ್ನದಾನಕ್ಕೆ ಚಾಲನೆ ನೀಡಿದರು ನಂತರ ಇವರುಗಳನ್ನು ಆರ್ಯ ಈಡಿಗರ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಶ್ರೀ ಲಕ್ಷ್ಮಿನರಸಿಂಹಸ್ವಾಮಿ ರಥೋತ್ಸವದ ಪ್ರಯುಕ್ತ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಆರ್ಯ ಈಡಿಗ ಜನಾಂಗದವರು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನದಾನ ಮಾಡಲಾಯಿತು.