ವಿಜೃಂಭಣೆಯ ಚಾಮರಾಜೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.04:- ರಾಜ್ಯದಲ್ಲೇ ಆμÁಢ ಮಾಸದಲ್ಲಿ ನಡೆಯುವ ಏಕೈಕ ರಥೋತ್ಸವವಾದ ಚಾಮರಾಜನಗರದ ಚಾಮರಾಜೇಶ್ವರ ಸ್ವಾಮಿ ಬ್ರಹ್ಮರಥೋತ್ಸವವು ಇಂದು ವಿಜೃಂಭಣೆಯಿಂದ ಜರುಗಿತು.
ಸಾಮಾನ್ಯವಾಗಿ ಆμÁಢ ಮಾಸದಲ್ಲಿ ಯಾವುದೇ ಹಬ್ಬ ಹರಿದಿನಗಳು ಹಾಗು ಶುಭ ಕಾರ್ಯಗಳು ನಡೆಯುವುದಿಲ್ಲ. ಆದರೂ ಈ ಸಂದರ್ಭದಲ್ಲಿ ಜರುಗುವ ಏಕೈಕ ರಥೋತ್ಸವವು ಇದಾಗಿದ್ದು, ನವಜೋಡಿಗಳ ಜಾತ್ರೆಎಂಥಲೇಖ್ಯಾತಿ ಪಡೆದಿದೆ.
ಪೂರ್ವಾμÁಢ ನಕ್ಷತ್ರದ ಮಧ್ಯಾಹ್ನ 12 ರಿಂದ 1ರ ವರೆಗೆ ಶುಭಕನ್ಯಾ ಲಗ್ನದಲ್ಲಿ ಶ್ರೀ ಚಾಮರಾಜೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನಂತರ ಚಾಮರಾಜೇಶ್ವರ ಸ್ವಾಮಿ ಮೂರ್ತಿಯನ್ನು ಒಳಗೊಂಡ ಬಣ್ಣ ಬಣ್ಣದ ಬಟ್ಟೆಗಳಿಂದ ಅಲಂಕೃತಗೊಂಡರಥವನ್ನು ಮಕ್ಕಳು ಯುವಕರೆನ್ನದೆ ಎಲ್ಲಾ ವಯಸ್ಸಿನವರು ರಥಕ್ಕೆಕಟ್ಟಿದ್ದ ಹಗ್ಗವನ್ನು ಎಳೆಯುತ್ತಾ ಜೈಕಾರ ಹಾಕುತ್ತಾ ಪ್ರಮುಖ ಬೀದಿಗಳಲ್ಲಿ ರಥವನ್ನು ಸಾಗಿಸಿದರು.
ನವ ದಂಪತಿಗಳೇ ಆಕರ್ಷಣೆ:
ಇತ್ತೀಚೆಗೆ ಮದುವೆಯಾಗಿ ಆಷಾಢ ಮಾಸದಕಾರಣ ತಮ್ಮ ತಮ್ಮತವರು ಮನೆಯಲ್ಲಿ ಪ್ರತ್ಯೇಕವಾಗಿರುವ ನವದಂಪತಿಗಳು ಪರಸ್ಪರ ದೂರ ಇದ್ದು, ಒಬ್ಬರ ಮುಖ ಮತ್ತೊಬ್ಬರು ಮುಖಾಮುಖಿ ನೋಡಲಾಗದೆ ಮೊಬೈಲ್ ಸಂಭಾಷಣೆಯಲ್ಲಿಯೇ ಸಂತೋಷ ಪಡುತ್ತಿರುತ್ತಾರೆ. ಆದರೆ ಆಷಾಢ ಮಾಸದ ಮೊದಲ ಹುಣ್ಣಿಮೆಯಲ್ಲಿ ನಡೆದÀ ಈ ರಥೋತ್ಸವದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ನವದಂಪತಿಗಳÀು ಜೋಡಿಯಾಗಿ ಪಾಲ್ಗೊಂಡು ಚಾಮರಾಜೇಶ್ವರಸ್ವಾಮಿ ರಥಕ್ಕೆ ಹಣ್ಣುಧವನ ಎಸೆದು ನಂತರ ಖುಷಿಯಿಂದ ಕೈ ಕೈ ಹಿಡಿದು ಕೊಂಡು ಓಡಾಡುವದೃಶ್ಯವು ಈ ರಥೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು.
ಸಹಸ್ರಾರು ಜನರು ಭಾಗಿ:
ಆರು ವರ್ಷಗಳ ಹಿಂದೆ ಕಿಡಿಗೇಡಿಯೊಬ್ಬ ಹಳೇ ರಥಕ್ಕೆ ಬೆಂಕಿ ಬಿದ್ದು, ಸುಮಾರುಐದು ವರ್ಷಗಳ ಕಾಲ ರಥೋತ್ಸವ ಸ್ಥಗಿತಗೊಂಡಿತ್ತು. ಕಳೆದ ವರ್ಷ ಹೊಸದಾಗಿ ನಿರ್ಮಾಣಗೊಂಡು ಪುನರಾರಂಭಗೊಂಡಿರುವ ಆಷಾಢ ಮಾಸದಲ್ಲಿ ನಡೆಯುವ ಈ ರಥೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದಲೂ ಆಗಮಿಸುತ್ತಾರೆ. ಈ ರಥೋತ್ಸವದಲ್ಲಿ ಮಕ್ಕಳು, ವೃದ್ಧರಾದಿಯಾಗಿ ಸಹಸ್ರಾರುಜನರು ಪಾಲ್ಗೊಂಡು ಜಾತ್ರೆಯ ಸಂಭ್ರಮವನ್ನು ಹೆಚ್ಚಿಸಿದ್ದಾರೆ,
ಈ ರಥೋತ್ಸವದಲ್ಲಿ ಗಾಡಿಗೊಂಬೆ, ಕಂಸಾಳೆ, ಗೊರವರಕುಣಿತ, ಡೊಳ್ಳುಕುಣಿತ, ವೀರಗಾಸೆ ಸೇರಿದಂತೆ ಹಲವಾರು ಜಾನಪದ ತಂಡಗಳು ಭಾಗವಹಿಸಿದ್ದವು.
ಹಣ್ಣುದವನ ಎಸೆದ ನವ ದಂಪತಿಗಳು:
ಆದರೆ ನವಜೋಡಿಗಳಿಗೆ ಪರಸ್ಪರ ಭೇಟಿಯಾಗಲು ಅಪೂರ್ವ ಸದಾವಕಾಶವನ್ನು ಈ ಜಾತ್ರೆ ಕಲ್ಪಿಸುವುದರಿಂದ ಜಾತ್ರೆಯಲ್ಲಿ ನವದಂಪತಿಗಳ ಕಲರವ ಹೆಚ್ಚಿರುವುದು ಈ ರಥೋತ್ಸವದ ವಿಶೇಷತೆ ಎಂದು ಹೇಳಲಾಗುತ್ತದೆ.
ರಥೋತ್ಸವಕ್ಕೆ ಬರುವ ನವದಂಪತಿಗಳು ತಮ್ಮ ತಮ್ಮ ಊರಿನಿಂದ ಬೇರೆ ಬೇರೆಯಾಗಿ ಬಂದು ಇಲ್ಲಿನ ನೆಂಟರಿಷ್ಟರ ಮನೆಯಲ್ಲಿ ಅಥವಾ ಪ್ರತ್ಯೇಕವಾಗಿ ಭೇಟಿಯಾಗುತ್ತಾರೆ. ಬಳಿಕ ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಹಣ್ಣು ಧವನ ಎಸೆಯುತ್ತಾ, ಕೈ ಕೈ ಹಿಡಿದುಕೊಂಡು ಸಂಭ್ರಮದಿಂದ ಓಡಾಡಿದರು.
ಹಾಗು ನವದಂಪತಿಗಳು ಬಂದು ರಥಕ್ಕೆ ಹಣ್ಣು-ದವನಎಸೆದರೆ ಸಂತಾನ ಭಾಗ್ಯ ಹಾಗೂ ಸುಖ ಸಂಸಾರ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಇನ್ನು ರಾಜ್ಯದ ವಿವಿಧ ಮೂಲೆಗಳಿಂದ, ತಮಿಳುನಾಡಿನ ಗಡಿ ಗ್ರಾಮಗಳಿಂದಲೂ ನೂತನ ದಂಪತಿಗಳು, ಚಾಮರಾಜೇಶ್ವರನ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ನೂತನ ದಂಪತಿಗಳಿಗಾಗಿಯೇ ವಿವಿಧ ಸಂಘಟನೆಗಳು ಅನ್ನ ಸಂತರ್ಪಣೆಯನ್ನು ಆಯೋಜಿಸಿದವು.