ವಿಜೃಂಭಣೆಯ ಕರಗ ಉತ್ಸವ

ಕೆ.ಆರ್.ಪುರ,ಫೆ.೨೦-ಮಹದೇವಪುರ ಕ್ಷೇತ್ರದ ವರ್ತೂರಿನಲ್ಲಿ ಶ್ರೀ ದ್ರೌಪದಮ್ಮ ಮತ್ತು ಧರ್ಮರಾಯ ಸ್ವಾಮಿ ಕರಗ ಮಹೋತ್ಸವ ಭಾವ ಭಕ್ತಿ ಪೂರ್ವಕವಾಗಿ ವಿಜೃಂಭಣೆಯಿಂದ ನಡೆಯಿತು.
ಭೂನಿಳಾ ಚನ್ನರಾಯಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಶ್ರೀ ಧರ್ಮ ರಾಯ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಕರಗ ಮಹೋತ್ಸವ ಆಯೋಜಿಸಲಾಗಿತ್ತು.ವರ್ತೂರಿನ ವೇಣು ೨೦ ನೇ ಬಾರಿಗೆ ಕರಗವನ್ನು ಹೋರುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಕರಗ ಉತ್ಸವದ ಪ್ರಯುಕ್ತ ದೇವರಿಗೆ ವಿಶೇಷ ಹೂವಿನ ಅಲಂಕಾರ, ಪೂಜಾ ಕೈಂಕರ್ಯಗಳು ನಡೆದವು, ವಾದ್ಯ ಮೇಳ ಮೂಲಕ ವರ್ತೂರು ಗ್ರಾಮದ ಮಸೀದಿ ದರ್ಗಾ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕರಗ ವಿಜೃಂಭಸಾಗಿತು.
ಕರಗ ಉತ್ಸವಕ್ಕೆ ವೈಟ್ ಫೀಲ್ಡ್, ವರ್ತೂರು , ವರ್ತೂರು ಕೂಡಿ, ಮಧುರ ನಗರ, ರಾಮಗೊಂಡನಹಳ್ಳಿ, ಗುಂಜೂರು, ಸೊರುಹುಣಸೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಬಡಾವಣೆಗಳ ಸಾವಿರಾರು ಭಕ್ತರು ಪಾಲ್ಗೋಂಡಿದ್ದರು. ಪ್ರತಿವರ್ಷದಂತೆ ಈ ಬಾರಿಯೂ ಕರಗ ಮಹೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಹಿತ ಶ್ರೀ ವರ್ತಕರ ಬಳಗ ಹಾಗೂ ಶ್ರೀ ರಾಮ ಸೇವಾ ಸಮಿತಿ ವತಿಯಿಂದ ಅನ್ನದಾನ ಏರ್ಪಡಿಸಲಾಗಿತ್ತು.
ಟ್ರಸ್ಟ್ ಅಧ್ಯಕ್ಷ ಪರಮೇಶ್ವರಪ್ಪ, ಈ ಸಂದರ್ಭದಲ್ಲಿ ಹಿರಿಯಮುಖಂಡರಾದ ಕುಪ್ಪಿ ಮಂಜುನಾಥ್ ,ವರ್ತೂರು ಬಿ.ಎಸ್.ಶ್ರೀಧರ್, ರಾಜಾರೆಡ್ಡಿ ರವೀಶ್ ಸುನೀಲ್, ದೀಪಕ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.