ವಿಜೃಂಭಣೆಯ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವ

filter: 0; fileterIntensity: 0.0; filterMask: 0; module: photo; hw-remosaic: false; touch: (-1.0, -1.0); modeInfo: ; sceneMode: 8; cct_value: 5818; AI_Scene: (6, 0); aec_lux: 72.4874; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 39;

ಮುಳಬಾಗಲು,ಮೇ,೨೨- ನಗರದ ಪುರಾಣ ಪ್ರಸಿದ್ಧ ಅರ್ಜುನ ಪ್ರತಿಷ್ಠಾಪಿತ ಆಂಜನೇಯಸ್ವಾಮಿ ದೇವರ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಗ್ರೇಡ್ ೨ ತಹಸೀಲ್ದಾರ್ ಬಿ.ಆರ್.ಮುನಿವೆಂಕಟಪ್ಪ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಭಕ್ತರು ರಥವನ್ನು ಎಳೆದು ತಮ್ಮ ಭಕ್ತಿಯನ್ನು ಪ್ರದರ್ಶಿಸುತ್ತಿದ್ದರೆ, ಹಲವರು ರಥದ ಮೇಲೆ ಹೂ, ಬಾಳೆಹಣ್ಣು, ದವಣ, ಚಿಲ್ಲರೆ ಕಾಸು ಮತ್ತಿತರರ ಪವಿತ್ರವಾದ ವಸ್ತುಗಳನ್ನು ರಥದ ಮೇಲೆ ಚೆಲ್ಲಿ ತಮ್ಮ ಹರಕೆ ಹಾಗೂ ಕೋರಿಕೆಗಳನ್ನು ಸಲ್ಲಿಸುತ್ತಿದ್ದ ದೃಶ್ಯಗಳು ಕಂಡುಬಂದವು.
ದೇವಾಲಯದಲ್ಲಿ ಮೂರು ದಿನಗಳಿಂದ ಸೀತಾರಾಮ ಕಲ್ಯಾಣೋತ್ಸವ, ಅಂಕುರಾರ್ಪಣೆ, ಧ್ವಜಾರೋಹಣ, ಕಳಶಾರಾಧನೆ, ಅಭಿಷೇಕ, ಪಂಚಾಮೃತ , ಹನುಮಂತೋತ್ಸವ , ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು.
ಕೋಲಾರ ಶಾಸಕ ಕೊತ್ತೂರು ಜಿ ಮಂಜುನಾಥ್ ರಥೋತ್ಸವದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು ಹಾಗೂ ನಾನಾ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರಿಗೆ ಸ್ಥಳೀಯರು ಪಾನಕ, ಮಜ್ಜಿಗೆ, ಕೋಸಂಬರಿ ಹಾಗೂ ಅನ್ನದಾನ ಕಾರ್ಯಕ್ರಮಗಳನ್ನು ಮಾಡಿದರು.
ಶಾಸಕ ಸಮೃದ್ಧಿ ಮಂಜುನಾಥ್ ಅವರ ಪತ್ನಿ ಪದ್ಮಸಮೃದ್ಧಿ ಮಂಜುನಾಥ್ ಕುಟುಂಬ ವರ್ಗದವರಿಂದ ಶ್ರೀ ಆಂಜನೇಯ ಸ್ವಾಮಿ, ಗೋವಿಂದರಾಜಸ್ವಾಮಿ, ಶ್ರೀ ವೆಂಕಟೇಶ್ವರಸ್ವಾಮಿ, ವರದರಾಜಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ದೇವಾಲಯ ಆವರಣದಲ್ಲಿ ನಾನಾ ಬಣ್ಣದ ಹೂವುಗಳಿಂದ ವಿಶೇಷ ಅಲಂಕಾರ, ವಿದ್ಯುತ್ ದೀಪಾಲಂಕಾರ, ಪೆಂಡಾಲ್ ವ್ಯವಸ್ಥೆ ಮಾಡಲಾಗಿತ್ತು ಹಾಗೂ ಇತರೆ ಸೇವಾ ಕರ್ತರು ಪ್ರಸಾದ ವಿನಿಯೋಗ ಸೇರಿದಂತೆ ಇತರೆ ಸೇವೆಗಳನ್ನು ಮಾಡಿದ್ದರು.