ವಿಜೃಂಭಣೆಯಿಂದ ನಡೆದ ಮರಗಮ್ಮ ದೇವಿ ಜಾತ್ರಾ ಮಹೋತ್ಸವ

ಶಹಾಬಾದ:ಜು.23:ನಗರದ ಭೋವಿ ವಡ್ಡರ್ ಬಡಾವಣೆಯ ಶ್ರೀ ಮರಗಮ್ಮ ದೇವಿಯ ಜಾತ್ರಾ ಮಹೋತ್ಸವ ಅಪಾರ ಭಕ್ತಾಧಿಗಳ ಮಧ್ಯೆ ವಿಜೃಂಭಣೆಯಿಂದ ನಡೆಯಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಭೋವಿ ಸಮಾಜದ ವತಿಯಿಂದ ಆಯೋಜಿಸಲಾದ ಮೆರವಣಿಗೆ ಭೀಮಶಪ್ಪ ನಗರದಿಂದ ಪ್ರಾರಂಭವಾಗಿ ನಗರದ ಮುಖ್ಯ ಬೀದಿಗಳಿಂದ ಮರಗಮ್ಮ ದೇವಸ್ಥಾನಕ್ಕೆ ತಲುಪಿತು.ಜಾತ್ರೆಯ ನಿಮಿತ್ತ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು.

ಈ ಸಂದರ್ಭದಲ್ಲಿ ಮರಗಮ್ಮ ದೇವಿ ಜಾತ್ರ ಮಹೋತ್ಸವದ ಅಧ್ಯಕ್ಷರಾದ ಭೀಮರಾವ ಸಾಳುಂಕೆ, ಕಾರ್ಯದರ್ಶಿ ದೇವದಾಸ ಜಾಧವ, ಶಂಕರ ಕುಸಾಳೆ, ರಾಮು ಕುಸಾಳೆ,ಸಿದ್ರಾಮ ಕುಸಾಳೆ, ಜೈಕುಮಾರ ಚೌದ್ರಿ,ರಾಜಣ್ಣ ಪವಾರ,ಮೋತಿಲಾಲ ಪವಾರ,ವೆಂಕಟೇಶ ಕುಸಾಳೆ,ತಿಮ್ಮಣ್ಣ ಕುಡೆಕರ್, ರಾಮು ನಿಡಗುಂದಿ,ಯಲ್ಲಪ್ಪ ದಂಡಗುಲಕರ್,ದಶರಥ ದೇಸಾಯಿ,ವಿಜಯಕುಮಾರ ಮಾಣೆ, ದೀಪಕ ಚೌಧರಿ, ಭರಮಣ್ಣ ದಂಡಗುಲಕರ್,ಶ್ರೀನಿವಾಸ ದೇವಕರ್, ಸೇರಿದಂತೆ ಮಹಿಳೆಯರು ಮತ್ತು ಮಕ್ಕಳು ಇದ್ದರು.