ವಿಜೃಂಭಣೆಯಿಂದ ನಡೆದ ಬಸವ ಜಯಂತಿ

ಚಾಮರಾಜನಗರ, ಮೇ. 23:- ನಗರದ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಅವರಣದಲ್ಲಿ 2.50 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ದಾಸೋಹ ಭವನಕ್ಕೆ ಸುತ್ತೂರು ಶ್ರೀ ಕ್ಷೇತ್ರದ ಶ್ರೀ ಶಿವರಾತ್ರಿದೇಶಿಕೇಂದ್ರಸ್ವಾಮೀಜಿ ಭೂಮಿ ಪ್ರಜೆ ಮಾಡಿ, ಅದ್ದೂರಿ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮಕ್ಕೆ ಶ್ರೀಗಳು ಚಾಲನೆ ನೀಡಿದರು.
ನಗರದ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಅವರಣದಲ್ಲಿ ಎರಡು ದಿನಗಳ ಕಾಲ ನಡೆದ ಬಸವ ಜಯಂತಿ, ಲಿಂಗೈಕ್ಯ ಶ್ರೀ ಸಿದ್ದಬಸವರಾಜಸ್ವಾಮೀಜಿಗಳ ಸಂಸ್ಮರಣೋತ್ಸವ ಕಾರ್ಯಕ್ರಮವು ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ವಿಜೃಂಭನೆಯಿಂದ ನಡೆಯಿತು. ಎರಡು ದಿನಗಳ ಕಾಲ ಭಕ್ತರಿಗೆ ದಾಸೋಹ ವ್ಯವಸ್ಥೆಯು ಬಹಳ ಅಚ್ಚುಕಟ್ಟು ನಡೆದು ಸುಮಾರು 20 ಸಾವಿರಕ್ಕು ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಳಗ್ಗೆ 8 ಗಂಟೆಗೆ ಶ್ರೀಮಠದ ಅವರಣದಲ್ಲಿರುವ ಲಿಂಗೈಕ್ಯ ಶ್ರೀ ಸಿದ್ದಬಸವರಾಜಸ್ವಾಮೀಜಿಗಳ ಗುದ್ದಗೆಗೆ ಬಿಲ್ವಾರ್ಚನೆ, ಮಹಾಮಂಗಳಾರತಿ ಹಾಗೂ ವಿವಿಧ ಕಾರ್ಯಕ್ರಮಗಳು ಶ್ರೀಮಠದ ಚನ್ನಬಸವಸ್ವಾಮೀಜಿ, ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿಗಳ ನೇತೃತ್ವದಲ್ಲಿ ನಡೆದು, ಮಲ್ಲನಮೂಲೆ ಮಠದ ಶ್ರೀ ಚನ್ನಬಸವಸ್ವಾಮಿಗಳು ಷಟ್‍ಸ್ಥಲ ಧ್ವಜಾರೋಹಣ ಮಾಡಿದರು. ಕನಕಪುರದ ಶ್ರೀ ಮುಮ್ಮಡಿ ನಿರ್ವಾಣಸ್ವಾಮಿಗಳು ಇಷ್ಟ ಲಿಂಗಪೂಜೆ ನೆರವೇರಿಸಿದರು.
ದಾಸೋಹ ಭವನಕ್ಕೆ ಭೂಮಿ ಪೂಜೆ : ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ದಾಸೋಹ ಭವನಕ್ಕೆ ಸುತ್ತೂರು ಶ್ರೀಗಳು ಭೂಮಿ ಪೂಜೆ ನೇರವೇರಿಸಿದರು. ಪಾದಪೂಜೆಯ ಬಳಿಕ ಶ್ರೀಗಳು ಭೂಮಿಪೂಜೆ ನೆರವೇರಿಸಿ, ದಾಸೋಹ ಭವನ ಶ್ರೀಘ್ರ ನಿರ್ಮಾಣಗೊಂಡು ಭಕ್ತರಿಗೆ ಸಮರ್ಪಣೆಯಾಗಲಿ ಎಂದು ಶುಭ ಕೋರಿದರು.
ಬಸವೇಶ್ವರರ ಪುತ್ಥಳಿ ಅದ್ದೂರಿ ಮೆರವಣಿಗೆ: ಪ್ರತಿ ವರ್ಷದಂತೆ ಈ ಬಾರಿಯುವ ಗ್ರಾಮಾಂತರ ಬಸವ ಜಯಂತಿ ಮೆರವಣಿಗೆ ವಿವಿಧ ಜನಪದ ಕಲಾತಂಡಗಳೊಂದಿಗೆ ಬಹಳ ಅದ್ದೂರಿಯಾಗಿ ನಡೆಯಿತು.
ಸುತ್ತೂರು ಶ್ರೀಗಳು ಮಠದ ಅವರಣದಲ್ಲಿ ಬೆಳ್ಳಿ ರಥದಲ್ಲಿರಿಸಿದ್ದ ಶ್ರೀ ಬಸವೇಶ್ವರರ ಪುತ್ಥಳಿಗೆ ಪುಷ್ಪಾರ್ಚನೆಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಶ್ರೀಮಠದ ಚನ್ನಬಸವಸ್ವಾಮೀಜಿ, ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ನಂಧಿದ್ವಜಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಯಲ್ಲಿ ತೆರಳಿದರು.
ಸಹಸ್ರಾರು ಸಂಖ್ಯೆಯಲ್ಲಿದ್ದ ಜನಸ್ತೋಮದೊಂದಿಗೆ ಶ್ರೀಮಠದಿಂದ ಹೊರಟ ಮೆರವಣಿಗೆಯಲ್ಲಿ ನಂದಿಧ್ವಜ , ಗಾರುಡಿ ಗೊಂಬೆ, ವೀರಗಾಸೆ, ಕಂಸಾಳೆ, ನಗಾರಿ, ಮಂಗಳವಾಧ್ಯ, ಬಸವೇಶ್ವರ ಭಾವಚಿತ್ರ ವಿಟ್ಟು ಅಲಂಕೃರಿಸಿದ್ದ ಟ್ರಾಕ್ಟರ್‍ಗಳು ಮೆರವಣಿಗೆ ಮೆರಗು ನೀಡಿದವು. ಅಲ್ಲಿಂದ ಭುವನೇಶ್ವರಿ ವೃತ್ತ, ಡಿವಿಯೋಷನ್ ರಸ್ತೆ, ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಲ್ಳಿ ಸರ್ಕಲ್ ಮಾರ್ಗವಾಗಿ ಶ್ರೀಮಠಕ್ಕೆ ಸಾಯಂಕಾಲ 4 ಗಂಟೆಗೆ ಮುಕ್ತಾಯಗೊಳಿಸಲಾಯಿತು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಮಜ್ಜಿಗೆ, ಪಾನಕಗಳನ್ನು ಭಕ್ತಾಧಿಗಳು ವ್ಯವಸ್ಥೆ ಮಾಡಿದ್ದರು.
ಕಾರ್ಯಕ್ರಮದಲ್ಲಿ ದೇವನೂರು ಮಠದ ಶ್ರೀ ಮಹಾಂತಸ್ವಾಮೀಜಿ, ಸೋಮಹಳ್ಳಿ ಮಠದ ಶ್ರೀ ಸಿದ್ದಮಲ್ಲಸ್ವಾಮೀಜಿ, ಹಂಡ್ರಕಳ್ಳಿ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಹರವೆ ಮಠದ ಶ್ರೀ ಸರ್ಪಭೂಷಣಸ್ವಾಮೀಜಿ, ಮುಡಿಗುಂಡ ಮಠದ ಶ್ರೀ ಕಂಠಸ್ವಾಮೀಜಿ, ಪಡಗೂರಿನ ಶ್ರೀ ಶಿವಲಿಂಗೇಂದ್ರಸ್ವಾಮೀಜಿ, ಕುದೇರು ಮಠದ ಶ್ರೀ ಗುರುಶಾಂತಸ್ವಾಮೀಜಿ, ಅರಕಲವಾಡಿ ಮಠದ ಶ್ರೀ ಬಸವಣ್ಣಸ್ವಾಮಿಜಿ, ಮಡಿವಾಳಸ್ವಾಮಿ ಮಠದ ಶ್ರೀ ಇಮ್ಮಡಿ ಮಡಿವಾಳಸ್ವಾಮೀಜಿ, ಕೊತ್ತಲವಾಡಿ ಮಠದ ಶ್ರೀ ಗುರುಸ್ವಾಮೀಜಿ, ಗೌಡಹಳ್ಳಿ ಮರಿತೋಂಟದಾರ್ಯಸ್ವಾಮೀಜಿ, ಮೂಡುಗೂರು ಶ್ರೀ ಇಮ್ಮಡಿ ಉದ್ದಾನಸ್ವಮೀಜಿ, ಮಾದಪಟ್ಟಣದ ತೋಂಟದಾರ್ಯಸ್ವಾಮೀಜಿ, ಶಿವಕುಮಾರಪುರದ ಶ್ರೀ ಇಮ್ಮಡಿ ಮಹಾಂತಸ್ವಾಮೀಜಿ, ಹಂಚಿಪುರದ ಶ್ರೀ ಚನ್ನಬಸವಸ್ವಾಮೀಜಿ ಸೇರಿದಂತೆ ಹರಗುರುಚರಮೂರ್ತಿಗಳು ಭಾಗವಹಿಸಿದರು.