ವಿಜೃಂಭಣೆಯಿಂದ ಜರುಗಿದ ಹನುಮ ಜಯಂತಿ

oppo_0

ತಾಳಿಕೋಟೆ:ಮೇ.24: ಪಟ್ಟಣದ ಬಜಾರ ಹನುಮಾನ ಮಂದಿರದ ಜಯಂತ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಭಕ್ತಿಭಾವದೊಂದಿಗೆ ಭಕ್ತಸಮೂಹದವರು ಗುರುವಾರರಂದು ಆಚರಿಸಿದರು.
ಜಯಂತ್ಯೋತ್ಸವದ ಅಂಗವಾಗಿ ಶ್ರೀ ಹನುಮಾನ ಮಂದಿರದಲ್ಲಿಯ ಹನುಮಾನ ಮಹಾಮೂರ್ತಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮ ಜರುಗಿತಲ್ಲದೆ ನಂತರ ಸುಮಂಗಲೆಯರಿಂದ ಶ್ರೀ ಹನುಮಾನ ಉತ್ಸವ ಮೂರ್ತಿಯ ತೊಟ್ಟಿಲ ಕಾರ್ಯಕ್ರಮ ಜರುಗಿತು.
ನಂತರ ಪಲ್ಲಕಿ ಉತ್ಸವದೊಂದಿಗೆ ಸುಮಂಗಲೆಯರಿಂದ ಕುಂಭಮೇಳವು ಪ್ರಮುಖ ರಸ್ತೆಗಳಾದ ರಾಜವಾಡೆ, ನಾಗರಕಲ್ಲ ಬಡಾವಣೆ, ಶಿವಾಜಿ ಚೌಕ್, ಶ್ರೀ ವಿಠ್ಠಲ ಮಂದಿರ ರಸ್ತೆಗುಂಟ ಹಾಯ್ದು ಬಾಲಾಜಿ ಮಂದಿರ ರಸ್ತೆ, ಕತ್ರಿ ಬಜಾರ ಮಾರ್ಗವಾಗಿ ಮಂದಿರ ತಲುಪಿತಲ್ಲದೆ ನಂತರ ಮಂದಿರದಲ್ಲಿ ಅಸಂಖ್ಯಾತ ಭಕ್ತಾಧಿಗಳು ಪಾಲ್ಗೋಂಡು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಮಂದಿರದ ಆವರಣದಲ್ಲಿ ಸಮಸ್ತ ಭಕ್ತಾಧಿಗಳಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಯಿತಲ್ಲದೆ ಅಸಂಖ್ಯಾತ ಭಕ್ತಾಧಿಗಳು ಮಹಾ ಪ್ರಸಾದ ಸೇವಿಸಿ ಪುನಿತರಾದರು.
ಜಯಂತ್ಯೋತ್ಸವ ನೇತೃತ್ವವನ್ನು ನಾಗಪ್ಪ ಪೂಜಾರಿ, ಹಣಮಂತ ಪೂಜಾರಿ, ಭೀಮಣ್ಣ ಪೂಜಾರಿ, ದೇವಿಂದ್ರ ಪೂಜಾರಿ, ಸಂತೋಷ ಪೂಜಾರಿ, ಮುತ್ತು ಪೂಜಾರಿ, ಕೃಷ್ಣಾ ಪೂಜಾರಿ, ಬಸವರಾಜ ಪೂಜಾರಿ, ಮೊದಲಾದವರು ವಹಿಸಿದ್ದರು.