ವಿಜೃಂಭಣೆಯಿಂದ ಜರುಗಿದ ಶ್ರೀ ಬಂಡೇ ರಂಗನಾಥೇಶ್ವರ ರಥೋತ್ಸವ


 ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಮಾ.08  ತಾಲೂಕಿನ ಐತಿಹಾಸಿಕ   ತಂಬ್ರಹಳ್ಳಿಯ ಶ್ರೀ ಬಂಡೆರಂಗನಾಥೇಶ್ವರ ಸ್ವಾಮಿಯ ರಥೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ಜರುಗಿತು
ರಥೋತ್ಸವದ ನಿಮಿತ್ತ ಬೆಟ್ಟದಲ್ಲಿ ನೆಲೆಸಿರುವ ಶ್ರೀ ಬಂಡೆರಂಗನಾಥೇಶ್ವರ ಹಾಗೂ ಲಕ್ಷ್ಮಿ ದೇವಿಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು , ಭಕ್ತರು ಕಾಯಿ ಹಣ್ಣುಹೂವು ಸಮರ್ಪಿಸಿದರು. ಸಾಯಂಕಾಲ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪನೆ ಮಾಡಲಾಾಗಿತ್ತು,.
ನಂದಿಪುರದ ಡಾ. ಮಹೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಬೆಟ್ಟದ ಮೇಲಿಂದ ತೇರು ಎಳೆಯುವ ಜಾಗಕ್ಕೆ ಮೆರವಣಿಗೆ ಮೂಲಕ ರಥದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಲಾಯಿತು . ಬಳಿಕ ದೇವಸ್ಥಾನ ಆಡಳಿತ ಮಂಡಳಿಯವರು ಈ ಹಿಂದೆ ದೇವರ ಪಟವನ್ನು ಹರಾಜಿನ ಮೂಲಕ ಪಡೆದಿದ್ದ ಕೊಟ್ಟೂರಿನ ಡಾ.ತಿಪ್ಪೇಸ್ವಾಮಿ ವೆಂಕಟೇಶ್ ಅವರಿಗೆ ಮತ್ತು ದೇವಸ್ಥಾನದ ಅಭಿವೃದ್ಧಿಗೆ ದೇಣಿಗೆ ನೀಡಿದ ಗ್ರಾಮದ ಗೌರಜ್ಜನವರ ತೋಟಪ್ಪ ಇವರುಗಳಿಗೆ ಸನ್ಮಾನಿಸಿ ಗೌರವಿಸಿದರು.
ನಂತರ ನಡೆದ ಈ ವರ್ಷದ ದೇವರ ಪಟಾಕ್ಷಿ ಹರಾಜಿನಲ್ಲಿ 2,.11 ಲಕ್ಷ  ರೂ. ಪುನಃ ಕೊಟ್ಟೂರಿನ ಡಾ. ತಿಪ್ಪೇಸ್ವಾಮಿ ವೆಂಕಟೇಶ್ ಅವರು ಭಕ್ತಿ ಪೂರ್ವಕವಾಗಿ ಪಡೆದರು.
ಭಕ್ತರ ಜಯ ಘೋಷಗಳೊಂದಿಗೆ ಶ್ರೀ ಲಕ್ಷ್ಮೀ ರಮಣಾ …ಗೋವಿಂದ ..ಗೋವಿಂದಾ…. ಎಂದು ಯುವಕರು ಉತ್ಸಾಹದಿಂದ ರಥ ಎಳೆಯುತ್ತಿದ್ದಂತೆ ಭಕ್ತರು ಬಾಳೆ ಹಣ್ಣು, ಉತ್ತುತ್ತಿ ರಥಕ್ಕೆ ಎಸೆದು ಕೃತಾರ್ಥರಾದರು.
ಹಗರಿಬೊಮ್ಮನಹಳ್ಳಿ  ಪಟ್ಟಣದ ವರ್ತಕ ಪುರಸಭೆ ಸದಸ್ಯ ಬಿ.ಗಂಗಾಧರ ಜಾತ್ರಾಮಹೋತ್ಸವಕ್ಕೆ  ಆಗಮಿಸಿದ. ಭಕ್ತರಿಗೆ ನೀರಿನ ಅರವಟ್ಟಿಗೆ ನಿರ್ಮಿಸಿ  ನೀರಿನ ದಾಹ ತಣಿಸಿದರು.ಹಬೊಹಳ್ಳಿ ಪಟ್ಟಣ ಹಾಗೂ ತಬ್ರಹಳ್ಳಿಯ ಪೋಲಿಸ್ ಠಾಣೆಯ ಸಿಬ್ಬಂದಿ ಜಾತ್ರೆಗೆ ಸೂಕ್ತ ಬಂದೋಬಸ್ತ ವ್ಯವಸ್ಥೆ ಕಲ್ಪಿಸಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಪದಾಧಿಕಾರಿಗಳು ಗ್ರಾಮದ ಮುಖಂಡರುಗಳು ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು .