ವಿಜೃಂಭಣೆಯಿಂದ ಜರುಗಿದ ಜಾತ್ರೆ

ಶಹಾಪುರ : ಜ.17: ವಡಗೇರಾತಾಲೂಕಿನ ಸುಕ್ಷೇತ್ರ ಕೃಷ್ಣವೇಣಿ ಭೀಮಾ ಸಂಗಮದ ಜಾತ್ರಾ ಮಹೋತ್ಸವವೂ ಸುಕ್ಷೇತ್ರ ಸಂಗಮದ ಪೀಠಾಧಿಪತಿಗಳಾದ ಶ್ರೀ ಕರುಣೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಜರಿಗಿದವು. ಶಿವಪುರದ ಬಸಯ್ಯಸ್ವಾಮಿ ಹಿರೇಮಠ ರವರ ಮನೆಯಿಂದ ಕಳಸವು ಸಕಲವಾದ್ಯ ಜಾನಪದ ಕಲಾ ತಂಡಗಳು ಹಾಗೂ ಪುರವಂತರ ಸೇವೆಯೊಂದಿಗೆ ಪಾದಯಾತ್ರೆ ಮೂಲಕ ಅಗ್ನಿಯಾಳ ಗ್ರಾಮಕ್ಕೆ ತಲುಪಿ ಅಲ್ಲಿಂದ ಪಲ್ಲಕ್ಕಿ ಮೆರವಣಿಗೆ ಮೂಲಕ ಸಂಗಮಕ್ಕೆ ತೆರಳಿ ತದನಂತರ ಮಹಿಳೆಯರಿಗೆ ಉಡಿ ತುಂಬಲಾಯಿತು . ಸಾಯಂಕಾಲ ಮಹಿಳೆಯರು ಹುಚ್ಚಾಯಿ ಹೇಳೆದು ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು ಶರಣರು ರಾಜಕೀಯ ಮುಖಂಡರು ಕನ್ನಡಪರ ರೈತಪರ ಹಾಗೂ ಇನ್ನುಳಿದಂತ ಸಂಘಟನೆಗಳ ಸದಸ್ಯರು ಮುಖಂಡರು ಮತ್ತು ಸುತ್ತಮುತ್ತಲು ಭಾಗದ ಗ್ರಾಮಸ್ಥರು ಭಾಗವಹಿಸಿದ್ದರು.