ವಿಜೃಂಭಣೆಯಿಂದ ಜರುಗಿದ ಚಿಕ್ಕಮಜ್ಜಿಗೇರಿ ಬಸವೇಶ್ವರಸ್ವಾಮಿ ರಥೋತ್ಸವ

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಫೆ.20; ತಾಲೂಕಿನ ಚಿಕ್ಕಮಜ್ಜಿಗೆರೆ ಗ್ರಾಮದ ಪ್ರಸಿದ್ಧ ಶ್ರೀ ಮುರಡಬಸವೇಶ್ವರ ಸ್ವಾಮಿಯ ರಥೋತ್ಸವ ಸೋಮವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.ರಥೋತ್ಸವಕ್ಕೂ ಮುನ್ನ ಮುರಡಬಸವೇಶ್ವರ ಸ್ವಾಮಿಗೆ ಬೆಳಗ್ಗೆಯಿಂದ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು, ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು, ಬಳಿಕ ಸಂಜೆ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ರಥದ ಸುತ್ತ ಮೂರು ಬಾರಿ ಪ್ರಧಕ್ಷಣೆ ಹಾಕಿಸಲಾಯಿತು, ನಂತರ ಸ್ವಾಮಿಯ ಪಟವನ್ನು ಹರಾಜು ಮಾಡಲಾಯಿತು, ಗ್ರಾಮ ಪಂಚಾಯ್ತಿ ಸದಸ್ಯ ಕೆ.ಬಿ.ಯಲ್ಲಪ್ಪ 61 ಸಾವಿರಕ್ಕೆ ಕೂಡಿಕೊಂಡು ತಮ್ಮದಾಗಿಸಿಕೊಂಡರು ಬಳಿಕ ಭಕ್ತರ ಜಯಘೋಷದೊಂದಿಗೆ ಅದ್ದೂರಿಯಾಗಿ ರಥೋತ್ಸವ ನಡೆಯಿತು.ವಿಶೇಷ ಎಂದರೆ ಇಲ್ಲಿನ ದೇವರಿಗೆ ಮೂಗಬಸವೇಶ್ವರ, ಮುರುಡಬಸವೇಶ್ವರ, ಬಸವೇಶ್ವರ ಹಾಗೂ ಗುರುಬಸವೇಶ್ವರ ಎನ್ನುವ ಹೆಸರುಗಳಿಂದ ಕರೆಯಲಾಗುತ್ತಿದ್ದು ಇಲ್ಲಿಗೆ ದಾವಣಗೆರೆ, ಹರಿಹರ, ಹರಪನಹಳ್ಳಿ ಭಕ್ತರು ಹೆಚ್ಚಿನ ರೀತಿಯಲ್ಲಿ ಸೇರುವುದು ವಾಡಿಕೆ ಇದೆ.ಚಿಕ್ಕಮಜ್ಜಿಗೇರಿ ಗ್ರಾಮದ ಹೊರಹೊಲಯದಲ್ಲಿದ್ದು, ಅರೇ ಮಜ್ಜಿಗೇರಿ, ಕೆ.ಕಲ್ಲಹಳ್ಳಿ, ವ್ಯಾಸನತಾಂಡ, ತಾಳೆದಹಳ್ಳಿ, ನೀಲಗುಂದ, ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿಯನ್ನು ಸಮರ್ಪಿಸಿದರು.