ವಿಜೃಂಭಣೆಯಿಂದ ಜರುಗಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಮೆರವಣಿಗೆ

ಸೇಡಂ,ಮಾ,27: ಪಟ್ಟಣದಲ್ಲಿ ಸ್ವಾತಂತ್ರ ಹೋರಾಟಗಾರರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಅನಾವರಣ ಕಾರ್ಯಕ್ರಮ ಮುಂಚಿತವಾಗಿ ಶ್ರೀ ಕೊತ್ತಲ ಬಸವೇಶ್ವರ ದೇವಸ್ಥಾನದಿಂದ ಮುಖ್ಯ ಬೀದಿಗಳಿಂದ ವಿಜೃಂಭಣೆಯಿಂದ ರಾಯಣ್ಣರ ಉದ್ಯಾನವನದ ವರೆಗೆ ಭವ್ಯ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳಲಾಯಿತು.
ಮೆರವಣಿಗೆಯಲ್ಲಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಸಮಿತಿಯ ಅಧ್ಯಕ್ಷರಾದ ಮಂಜುನಾಥ್ ಎನ್ ಪೂಜಾರಿ ಕಾಚೂರ,ರಾಜಕೀಯ ಪಕ್ಷದ ಮುಖಂಡರುಗಳಾದ ಬಿಜೆಪಿ ಪಕ್ಷದ ಹಿರಿಯ ಮುಖಂಡ ಶಿವಕುಮಾರ್ ಪಾಟೀಲ್ ಜಿಕೆ, ಮಾಜಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಜೆಡಿಎಸ್ ಪಕ್ಷದ ಅಶೋಕ್ ಗುತ್ತೇದಾರ್, ರಾಜು ನೀಲಂಗಿ, ಕೆ ಆರ್ ಪಿ ಪಿ ಶಾಸಕ ಅಭ್ಯರ್ಥಿ ಜಿ ಲಲ್ಲೇಶ್ ರೆಡ್ಡಿ, ಮರಪ್ಪ ತಾತ, ಮಾಳಪ್ಪ ಪೂಜಾರಿ, ಶಾಂತಕುಮಾರ್ ಪೂಜಾರಿ, ಸತೀಶ್ ಎನ್ ಪೂಜಾರಿ, ವಸಂತ್ ಕುಮಾರ್, ಹಣಮಂತ ಪೂಜಾರಿ, ನಾಗರಾಜ, ಸೇರದಂತೆ ಸಮಿತಿಯ ಪದಾಧಿಕಾರಿಗಳು ಸಮಾಜದ ಮುಖಂಡರು ಭಾಗವಹಿಸಿದ್ದರು.