ವಿಜೃಂಭಣೆಯಿಂದ ಜರುಗಿದ ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ


ಸಂಜೆವಾಣಿ ವಾರ್ತೆ
ಕೊಟ್ಟೂರು, ಡಿ.26: ಪಟ್ಟಣದ ಆರಾಧ್ಯ ದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವ ಸೋಮವಾರ ಸಂಜೆ 6-ಗಂಟೆ ಸಾವಿರಾರು ಭಕ್ತಸ್ತೋಮದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಕೊಟ್ಟೂರೇಶ್ವರ ಸ್ವಾಮಿಯ ಕ್ರಿಯಾಮೂರ್ತಿಗಳು
ಅರ್ ಎಂ ಶಿವಪ್ರಕಾಶ್ ಸ್ವಾಮಿಗಳು ಕೊಟ್ಟೂರು ದೇವರು, ಮಹಲ್ ಮಠ ಅವರು ಶ್ರೀ ಸ್ವಾಮಿಯ ಮಠದ ಮುಂಭಾಗದಲ್ಲಿ ದೀಪ ಹಚ್ಚಿ, ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು.
ಕಾರ್ತಿಕೋತ್ಸವ ಚಾಲನೆ ವೇಳೆ ಶಾಸಕರು ಕೆ. ನೇಮಿರಾಜ್ ನಾಯ್ಕ್  ಧಾರ್ಮಿಕ ದತ್ತಿ ಇಲಾಖೆ ಆಡಳಿತ ಅಧಿಕಾರಿಗಳು ಕೃಷ್ಣಪ್ಪ, ಎಂ ಎಂ ಜೆ ಹರ್ಷವರ್ಧನ್ ಮಾಜಿ ಜಿ ಪಂ ಸದಸ್ಯರು.ಧರ್ಮಕರ್ತರು ಸಿಎಚ್ಎಂ ಗಂಗಾಧರ ಸೇರಿದಂತೆ ಕಟ್ಟೀಮನಿ ದೈವಸ್ಥರು, ಆಯಗಾರರು ಹಾಗೂ ಅರ್ಚಕರು ಕಾರ್ತಿಕೋತ್ಸವ ಚಾಲನೆ ವೇಳೆ ಹಾಜರಿದ್ದರು.
ದೀಪೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆ ಕಾರ್ತಿಕೋತ್ಸವಕ್ಕೆ ಆಗಮಿಸಿದ ಭಕ್ತರು ಎಣ್ಣೆ ಬತ್ತಿ ಹಾಕಿ ದೀಪ ಬೆಳಗಿಸಿ ಭಕ್ತಿ ಸಮರ್ಪಿಸಿದರು , ಇನ್ನೂ ಕೆಲ ಭಕ್ತರು ಶ್ರೀ ಕೊಟ್ಟೂರೇಶ್ವರ ಸ್ವಾಮಿಯ ಗುಡಿಯ ಮುಂಭಾಗದಲ್ಲಿ ಟನ್ ಗಿಂತ ಹೆಚ್ಚು ಕೊಬ್ಬರಿಯನ್ನು ಸುಟ್ಟು ಭಕ್ತಿ ಸಮರ್ಪಿಸಿದರು.
ಹಿರೇಮಠ, ಗಚ್ಚಿನ ಮಠ,ತೊಟ್ಟಿಲು ಮಠಗಳು ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೀಪಗಳು ಜಗಮಗಿಸಿದವು.ಹರಪನಹಳ್ಳಿ, ದಾವಣಗೆರೆ,ರಾಣಿಬೆನ್ನೂರು ,ಹುಬ್ಬಳ್ಳಿ, ಧಾರವಾಡ, ಗದಗ ,ಚಿತ್ರದುರ್ಗ, ತುಮಕೂರು, ಬೆಂಗಳೂರು, ಕೂಡ್ಲಿಗಿ ಬಳ್ಳಾರಿ, ವಿಜಯ ನಗರಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ಶ್ರೀ ಸ್ವಾಮಿಯ ದರ್ಶನ ಪಡೆದರು.