ವಿಜೃಂಭಣೆಯಿಂದ ಜರುಗಿದ  ಕಣಿವೆ ಮಾರಮ್ಮ ರಥೋತ್ಸವ 

ಹಿರಿಯೂರು.ಏ. 29 – ಹಿರಿಯೂರು ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ವಾಣಿವಿಲಾಸ ಸಾಗರ ದಲ್ಲಿ ನೆಲೆಸಿರುವ ಶ್ರೀ ಕಣಿವೆ ಮಾರಮ್ಮ ದೇವತೆಯ ಬ್ರಹ್ಮ ರಥೋತ್ಸವ ಶುಕ್ರವಾರ ಮಧ್ಯಾನ ಭಕ್ತ ಜನ ಸಾಗರದ ನಡುವೆ ಉದುರು ವಿಜೃಂಭಣೆಯಿಂದ  ನೆರವೇರಿತು ಮಾತೆಗೆ ವಿವಿಧ ಪುಷ್ಪಾಲಂಕಾರ ಮಾಡಿ ದೇವಸ್ಥಾನದಿಂದ ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ  ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ ನಡೆಯಿತು. ನೆರೆದಿದ್ದ ಸಾವಿರಾರು ಜನಭಕ್ತರು ಹರ್ಷೋದ್ಗಾರಗಳಿಂದ ತೇರನ್ನು ಎಳೆಯುವ ಮೂಲಕ ಭಕ್ತಿ ಭಾವದಿಂದ ಕಣಿವೆ ಮಾರಮ್ಮ ರಥೋತ್ಸವ ಜರಗಿತು. ವಿ ವಿ ಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಶ್ರೀ ಕಣಿವೆ ಮಾರಮ್ಮ ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡಿದ್ದರು .