ವಿಜೃಂಭಣಿ ಮಾತಾ ಬ್ರಾಹ್ಮಿಣಿ ದೇವಿ ರಥೋತ್ಸವ

ಚಿಕ್ಕಬಳ್ಳಾಪುರ.ಫೆ೨೬: ಭರತ ಹುಣ್ಣಿಮೆ ತಾಲೂಕಿನ ತಿಪ್ಪೇನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹನುಮಂತಪುರದಲ್ಲಿ ಭಾಸ್ಕರ ಸ್ವಾಮಿ ನೇತೃತ್ವದಲ್ಲಿ ಶ್ರೀಮಾತ ಮಹಾದೇವಿ ಭಕ್ತಮಂಡಲಿ ಹನುಮಂತಪುರದಲ್ಲಿ ಶ್ರೀ ಮಾತಾ ಬ್ರಾಹ್ಮಿಣಿದೇವಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಹನುಮಂತಪುರದ ಬೀದಿಗಳಲ್ಲಿ ರಥೋತ್ಸವ ಹೋಗುವ ಸಂದರ್ಭದಲ್ಲಿ ಮಹಿಳೆಯರು ಮನೆಯ ಮುಂದೆ ನೀರನ್ನು ಹಾಕಿ ರಂಗೋಲಿಯನ್ನು ಬಿಡಿಸಿದ್ದರು ಭಾಸ್ಕರ ಸ್ವಾಮಿ ರವರ ಪಾದಪೂಜೆ ಮಾಡಿ ತೆಂಗಿನ ಕಾಯಿಗಳನ್ನು ಹೊಡೆಯುತ್ತಾ ಬಹಳ ಸಂತೋಷದಿಂದ ರಥವನ್ನು ಬರಮಾಡಿಕೊಂಡರು ಈ ಕಾರ್ಯಕ್ರಮದಲ್ಲಿ ಪುರೋಹಿತರು, ಬೇರೆ ಬೇರೆ ರಾಜ್ಯಗಳಿಂದ ಬಂದ ಭಕ್ತರು, ಮತ್ತು ಸುತ್ತಮುತ್ತಲಿನ ಹಳ್ಳಿಯ ಭಕ್ತರು ದೇವಿ ಕೃಪೆಗೆ ಪಾತ್ರರಾದರು. ಎಲ್ಲರೂ ಕುಳಿತುಕೊಂಡು ಮೃಷ್ಟಾನು ಭೋಜನವನ್ನು ಸವಿದರು. ಎಂದು ಭಕ್ತರೊಬ್ಬರು ತಿಳಿಸಿದರು. ಪ್ರತಿ ವರ್ಷ ಈ ರಥೋತ್ಸವವು ವಿಜೃಂಭಣೆಯಿಂದ ಜರುಗುತ್ತದೆ, ೧೪ ವರ್ಷಗಳಿಂದ ಸತತವಾಗಿ ರಥೋತ್ಸವದಲ್ಲಿ ಪಾಲುಗೊಳ್ಳುತ್ತಿರುವುದು ನಮ್ಮ ಸೌಭಾಗ್ಯ, ನಮ್ಮೆಲ್ಲರ ಕಷ್ಟಗಳನ್ನು ಬ್ರಾಹ್ಮಿಣಿ ದೇವಿ ಪರಿಹರಿಸುತ್ತಾ ಬಂದಿದ್ದಾರೆ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದರು ಎಂದು ಮಹಾಂತೇಶ್ ರವರು ತಿಳಿಸಿದರು. ಎಲ್ಲಾ ಜನರು ಈ ರಥೋತ್ಸವದಲ್ಲಿ ಪಾಲ್ಗೊಂಡಿರೋದು ವಿಶೇಷವಾಗಿತ್ತು.