ವಿಜೃಂಬಣೆಯಿಂದ ಜರುಗಿದ ಶ್ರೀ ಕಾಳಿಕಾದೇವಿ ಜಾತ್ರೋತ್ಸವ

ತಾಳಿಕೋಟೆ:ಏ.14: ಪಟ್ಟಣದ ವಿಶ್ವಕರ್ಮ ಸಮಾಜಬಾಂದವರ ಕುಲದೇವತೆಯಾದ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವವು ಹಾಗೂ ಯುಗಾದಿ ಉತ್ಸವವು ಶನಿವಾರರಂದು ಪಟ್ಟಣದಲ್ಲಿ ವಿಜೃಂಬಣೆಯಿಂದ ಜರುಗಿತು.
ಜಾತ್ರೋತ್ಸವ ಅಂಗವಾಗಿ ಬೆಳಿಗ್ಗೆ 8-30 ಗಂಟೆಗೆ ವಿಶ್ವನಾಥಾಚಾರ್ಯ, ಕೊಟ್ರೇಶ ಆಚಾರ್ಯ ಅವರಿಂದ ದುರ್ಗಾ ಹೋಮ, ಕಲಾ ಹೋಮ, ನ್ರವಗ್ರಹ ಹೋಮ ಹವನ ಕಾರ್ಯಕ್ರಮಗಳು ಜರುಗಿದವು. ನಂತರ 9 ಗಂಟೆಗೆ ಶ್ರೀ ಕಾಳಿಕಾದೇವಿಯ ಭಾವಚಿತ್ರದ ಮಹಾ ರಥೋತ್ಸವವು ದೇವಸ್ಥಾನದಿಂದ ಪ್ರಾರಂಭಗೊಂಡು ಭಾವನಮಠದ ಭಾವಿಯಲ್ಲಿ ಗಂಗಸ್ಥಳ ಕಾರ್ಯಕ್ರಮದೊಂದಿಗೆ ಸುಮಂಗಲೆಯರ ಕುಂಭ ಮೇಳ ಫಲ್ಲಕ್ಕಿ ಉತ್ಸವದ ಮೆರವಣಿಗೆಯು ವಿವಿಧ ವಾದ್ಯವೈಭವಗಳೊಂದಿಗೆ ದೇವಸ್ಥಾನದ ವರೆಗೆ ಜರುಗಿತು.
ಮದ್ಯಾಹ್ನ 12 ಗಂಟೆಗೆ ಹೋಮದ ಪೂರ್ಣಾಹುತಿ, ನಂತರ ದೇವಿಗೆ ಗಂಗಾಜಲದಿಂದ ಅಭ್ಯಂಗಸ್ನಾನ, ಅಭಿಷೇಕ, ಅಲಂಕಾರ ಪೂಜೆ, ನೈವೇದ್ಯ ಸಮರ್ಪಣೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ಜರುಗಿತು.
ಮದ್ಯಾಹ್ನ 1 ಗಂಟೆಗೆ ಸಮಸ್ತ ಭಕ್ತಾಧಿಗಳಿಗೆ ಮಹಾ ಪ್ರಸಾದ ಜರುಗಿತ್ತಲ್ಲದೇ ಸಾಯಂಕಾಲ 6 ಗಂಟೆಗೆ ಶ್ರೀ ಕಾಳಿಕಾದೇವಿ ದೇವಸ್ಥಾನದಿಂದ ಸಕಲವಾದ್ಯ ವೈಭವಗಳೊಂದಿಗೆ ಶ್ರೀ ಗ್ರಾಮದೇವತೆ ದೇವಸ್ಥಾನಕ್ಕೆ ಹೋಗಿ ದ್ವಜದೊಂದಿಗೆ ಪುನಃ ಶ್ರೀ ಕಾಳಿಕಾದೇವಿ ದೇವಸ್ಥಾನಕ್ಕೆ ಆಗಮಿಸಿ ದ್ವಜಾರೋಹಣ ನೆರವೇರಿಸಲಾಯಿತು.
ಈ ಜಾತ್ರೋತ್ಸವದ ನೇತೃತ್ವವನ್ನು ಶ್ರೀ ಕಾಳಿಕಾದೇವಿ ದೇವಸ್ಥಾನ ವಿಶ್ವಕರ್ಮ ಸಮಾಜ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ ಸೋನಾರ, ಶ್ರೀನಿವಾಸ ಪತ್ತಾರ, ಪ್ರಭಾಕರ ಹಿಪ್ಪರಗಿ, ರುದ್ರಪ್ಪ ಬಡಿಗೇರ, ಗಂಗಾಧರ ಬಡಿಗೇರ, ಮೋಹನ ಬಡಿಗೇರ, ಸುನೀಲ ವರದಪ್ಪನವರ, ನಾಗರಾಜ ಪತ್ತಾರ, ಶ್ರೀ ಗಾಯತ್ರಿ ಮಹಿಳಾ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಜಗದೇವಿ ಸರಾಫ, ವಿಶ್ವ ವರದಪ್ಪನವರ, ಮೌನೇಶ ಪತ್ತಾರ, ಮಲಕಪ್ಪ ಬಡಿಗೇರ, ನಾಗರಾಜ ಬಡಿಗೇರ, ಮುದಕಣ್ಣ ಬಡಿಗೇರ, ಗಂಗಾಧರ ಬಡಿಗೇರ, ಚಿದಾನಂದ ಬಡಿಗೇರ, ಮಲ್ಲಿಕಾರ್ಜುನ ಬಡಿಗೇರ, ಬಸವರಾಜ ಬಡಿಗೇರ, ವೇಂಕಟೇಶ ಸೋನಾರ, ಸಿದ್ದಪ್ಪ ಬಡಿಗೇರ, ಮುತ್ತು ಸೋಮನಾಳ, ವಿಕಾಸ ಪತ್ತಾರ, ಮಂಜುನಾಥ ಬಡಿಗೇರ, ಮೊದಲಾದವರು ವಹಿಸಿದ್ದರು.