
ತಾಳಿಕೋಟೆ:ಸೆ.19: ಪಟ್ಟಣದ ಕೈಲಾಸ ಪೇಠೆಯಲ್ಲಿರುವ ಗಚ್ಚಿನಮಠದ ಶ್ರೀ ಚನ್ನವೀರೇಶ್ವರ ಮಹಾ ಸ್ವಾಮಿಗಳ ಜಾತ್ರಾ ಮಹೋತ್ಸವವು ರವಿವಾರರಂದು ವಿಜೃಂಬಣೆಯಿಂದ ಜರುಗಿತು.
ಜಾತ್ರೋತ್ಸವ ಅಂಗವಾಗಿ ನಸುಕಿನ ಜಾವ ದೇವಸ್ಥಾನದ ವೇ.ಷಡಕ್ಷರಯ್ಯ ಸ್ವಾಮಿಗಳು ಶ್ರೀ ಚನ್ನವೀರೇಶ್ವರರ ಮಹಾ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾ ಮಂಗಳಾರತಿ ಪೂಜೆ ನೆರವೇರಿಸಿದರು.
ಜಾತ್ರೋತ್ಸವಕ್ಕೆ ಆಗಮಿಸಿದ ಗುಳೇದಗುಡ್ಡದ ಶ್ರೀಗಳಿಗೆ ಶ್ರೀಮಠದ ವತಿಯಿಂದ ಹಾಗೂ ಸದ್ಭಕ್ತರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಜಾತ್ರೋತ್ಸವದ ನೇತೃತ್ವವನ್ನು ಎಂ.ಎಸ್.ಸರಶೆಟ್ಟಿ, ರಾಜಶೇಖರ ಸರಶೆಟ್ಟಿ, ಆರ್.ಎಸ್.ಸರಶೆಟ್ಟಿ, ಮಾಂತು ಸರಶೆಟ್ಟಿ, ಶಶಿಧರ ಸರಶೆಟ್ಟಿ, ಮಹೇಶ ಸರಶೆಟ್ಟಿ, ಚನಬಸ್ಸು ಸರಶೆಟ್ಟಿ, ಸತೀಶ ಸರಶೆಟ್ಟಿ, ಈರಣ್ಣ ಕಲ್ಬುರ್ಗಿ, ರಾಜಶೇಖರ ಹಿರೇಮಠ, ಕೆ.ಸಿ.ಸಜ್ಜನ, ಅಣ್ಣು ಕತ್ತಿ, ಜಿ.ಟಿ.ಘೋರ್ಪಡೆ, ಪ್ರಭು ಕತ್ತಿ, ಕೆ.ಎಂ.ಮಠ, ಈರಣ್ಣ ಜಿಗಜಿನ್ನಿ, ಶ್ರೀಶೈಲ ಜಿಗಜಿನ್ನಿ, ಅಪ್ಪು ಶಟಗಾರ, ಕಿಣಗಿ, ಭಗವಂತ ಸಜ್ಜನ, ಗುಂಡು ಕಿಣಗಿ, ಚೇತನ ಜಿಗಜಿನ್ನಿ, ರಮೇಶ ಸಾಲಂಕಿ, ಜಿನ್ನಪ್ಪ ಪ್ರಥಮಶೆಟ್ಟಿ, ಮೊದಲಾದವರು ವಹಿಸಿದ್ದರು.
ನಂತರ ಸಕಲ ಸದ್ಭಕ್ತರಿಗೆ ಮಾಹಾ ಪ್ರಸಾದ ವಿತರಣೆಯೊಂದಿಗೆ ಜಾತ್ರೋತ್ಸವ ಮಂಗಲಗೊಂಡಿತು.