ವಿಜೃಂಬಣೆಯಿಂದ ಜರುಗಿದ ಶ್ರೀ ನಿಮಿಷಾಂಬಾದೇವಿ ಜಯಂತ್ಯೋತ್ಸವ

ತಾಳಿಕೋಟೆ:ಮಾ.27: ಪಟ್ಟಣದ ಶ್ರೀ ಸೋಮವಂಶ ಆರ್ಯ ಕ್ಷತ್ರೀಯ ಸಮಾಜ ಬಾಂದವರ ಕುಲದೇವತೆಯಾದ ಶ್ರೀ ನಿಮಿಷಾಂಬಾದೇವಿ 67ನೇ ಜಯಂತ್ಯೋತ್ಸವವು ದಿ.26 ರವಿವಾರರಂದು ವಿಜೃಂಬಣೆಯಿಂದ ಜರುಗಿತು.

ಜಯಂತ್ಯೋತ್ಸವ ಅಂಗವಾಗಿ ಮಧುವೆ, ಉಪನಯನ ಹಾಗೂ ಸಹಸ್ರ ದೀಪೋತ್ಸವ ಕಾರ್ಯಕ್ರಮಗಳು ಜರುಗಿದವಲ್ಲದೇ ಬೆಳಿಗ್ಗೆ 6 ಗಂಟೆಯಿಂದ 7 ಗಂಟೆಯವರೆಗೆ ಪಂಚಾಮೃತ ಅಭಿಷೇಕ, 7-30 ರಿಂದ ಉತ್ಸವ ಮೂರ್ತಿ ಹಾಗೂ ಕಳಸ, ಗಂಗಸ್ಥಳ ಮತ್ತು ನವಗೃಹ ಚಂಡಿ ಹೋಮ, ಮಧುವೆ ಮತ್ತು ಉಪನಯನ ಕಾರ್ಯಕ್ರಮಗಳನ್ನು ವೇ.ವೆಂಕಟೇಶ ಗ್ರಾಂಪುರೋಹಿತ, ಶ್ರೀಧರ ಗ್ರಾಂಪೊರೊಹಿತ, ವೇ.ಸಂತೋಷ ಜೋಶಿ, ವೇ.ಗುಂಡು ಜೋಶಿ, ಯಲಗೂರೇಶ್ವರ ಚಬನೂರ ಅವರು ನಡೆಸಿಕೊಟ್ಟರು.

 ಮದ್ಯಾಹ್ನ 2 ಗಂಟೆಗೆ ಸಮಸ್ತ ಭಕ್ತಾಧಿಗಳಿಗೆ ಮಹಾಪ್ರಸಾದ ಜರುಗಿತ್ತಲ್ಲದೇ 5 ಗಂಟೆಗೆ ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಸಕಲ ವಾದ್ಯ ವೈಭವಗಳೊಂದಿಗೆ ರಾಜವಾಡೆಯ ಶ್ರೀ ಮಹಾದೇವರ ದೇವಾಲಯ ತಲುಪಿ ಮರಳಿ ದೇವಸ್ಥಾನ ತಲುಪಿತು.

ರಾತ್ರಿ 8 ಗಂಟೆಗೆ ಸಹಸ್ರ ದೀಪೋತ್ಸವ, ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ನಡೆಯಿತ್ತಲ್ಲದೇ ನಂತರ ಮಹಾಮಂಗಳಾರತಿ ಕಾರ್ಯಕ್ರಮದೊಂದಿಗೆ ಜಯಂತ್ಯೋತ್ಸವ ಮಂಗಲಗೊಂಡಿತು.

ಜಯಂತ್ಯೋತ್ಸವ ನೇತೃತ್ವವನ್ನು ಸಮಾಜದ ಅಧ್ಯಕ್ಷರಾದ ಬಾಬುರಾವ್ ಚಿತಾಪೂರ, ಉಪಾಧ್ಯಕ್ಷ ರಮೇಶ ಚವ್ಹಾಣ, ಪ್ರದೀಪ ಬುಸಾರೆ, ಅರವಿಂದ ಚವ್ಹಾಣ, ಮಾರುತಿ ಚವ್ಹಾಣ, ಗಣಪತಿ ಚವ್ಹಾಣ, ತುಳಸಿರಾಮ್ ಚವ್ಹಾಣ, ಧರ್ಮಾಜಿ ಉಭಾಳೆ, ಘನಶಾಮ ಚವ್ಹಾಣ, ಶಂಕರ ಉಭಾಳೆ, ಪ್ರಕಾಶ ಉಭಾಳೆ, ಮಲ್ಲಿಕಾರ್ಜುನ ಬುಸಾರೆ, ಕಾಶಿನಾಥ ಚಿತಾಪೂರ, ವಿಶ್ವನಾಥ ಉಭಾಳೆ, ರಾಘವೇಂದ್ರ ಚವ್ಹಾಣ, ತುಳಸಿರಾಮ್ ಪಿಂಪಳೆ, ದೊಂಡಿರಾಮ ಮಿರೆಜಕರ, ನಾಗೇಶ ಚವ್ಹಾಣ, ಸಚೀನ ಭುಸಾರೆ, ಸಂಜು ಭುಸಾರೆ, ಗೋವಿಂದ ಚೌದ್ರಿ, ಶಂಕರ ಭುಸಾರೆ, ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ಸೀಮಾ ಚವ್ಹಾಣ, ಅಕ್ಕುಬಾಯಿ ಚವ್ಹಾಣ, ದೀಪಿಕಾ ಚವ್ಹಾಣ ಸುನಿತಾ ಚವ್ಹಾಣ, ಕವಿತಾ ಚವ್ಹಾಣ, ಪಿತಾಂಬರಿ ಪಿಂಪಳೆ, ಯಶೋದಾ ಚವ್ಹಾಣ, ವಿಮಲಾಬಾಯಿ ಚವ್ಹಾಣ, ಚಂದ್ರಾಬಾಯಿ ಗೋಮಠೆ, ಪದ್ಮಾವತಿ ಸೋನೊವನೆ, ರೋಹಿಣಿ ಚವ್ಹಾಣ, ಭಾರತಿ ಚವ್ಹಾಣ, ಜ್ಯೋತಿ ಘಾಯಕವಾಡ ಮೊದಲಾದವರು ಉಪಸ್ಥಿತರಿದ್ದರು.


ಮೂರ್ತಿಯ ಸಂಪೂರ್ಣ ವೆಚ್ಚ ಬರಿಸುವೆ-ನಡಹಳ್ಳಿ

ತಾಳಿಕೋಟೆ, ಪಟ್ಟಣದ ಶ್ರೀ ನಿಮಿಷಾಂಬಾ ದೇವಿ ದೇವಸ್ಥಾನದ ಮುಂದುಗಡೆ ನಿರ್ಮಿಸಲಾದ ಕ್ಷತ್ರೀಯ ಸಮಾಜದ ಕುಲಗುರುಗಳಾದ ಶ್ರೀ ಆದಿ ಶಂಕರಾಚಾರ್ಯರ ವೃತ್ತವನ್ನು ಉದ್ಘಾಟಿಸಿದ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರು ಕ್ಷತ್ರೀಯ ಸಮಾಜದವರ ಬೇಡಿಕೆಯಂತೆ ನಿರ್ಮಿಸಲಾಗಿರುವ ವೃತ್ತದಲ್ಲಿ ಶ್ರೀ ಆದಿ ಶಂಕರಾಚಾರ್ಯರ ಕಂಚಿನ ಮೂರ್ತಿಯ ಪ್ರತಿಷ್ಠಾಪನೆಗೆ ತಗುಲು ಸಂಪೂರ್ಣವೆಚ್ಚವನ್ನು ತಾವು ಬರೆಸುವದಾಗಿ ಬರವಸೆ ನೀಡಿದರಲ್ಲದೇ ನಂತರ ಜಯಂತ್ಯೋತ್ಸವದ ಅಂಗವಾಗಿ ನಡೆದ ಚಂಡಿಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.