
ತಾಳಿಕೋಟೆ :ಮಾ.13: ಪಟ್ಟಣದ ಆರಾದ್ಯದೈವ ಶ್ರೀ ಸಾಂಭಪ್ರಭು ಶರಣಮುತ್ಯಾರವರ ಜಾತ್ರೋತ್ಸವ ಅಂಗವಾಗಿ ಮಹಾರಥೋತ್ಸವವು ರವಿವಾರರಂದು ಸಹಸ್ರಾರು ಭಕ್ತಸಮೂಹದ ಮಧ್ಯೆ ವಿಜೃಂಬಣೆಯಿಂದ ಜರುಗಿತು.
ರಥೋತ್ಸವ ಅಂಗವಾಗಿ ಬೆಳಗಿನ ಜಾವ ಶ್ರೀ ಶರಣಮುತ್ಯಾರವರ ಕತೃಗದ್ದುಗೆಗೆ ಮಹಾಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಲಿವೆ ಅಲ್ಲದೇ ಕರಿಭಾವಿ ಸದ್ಭಕ್ತರಿಂದ ನಂದಿಕೋಲ ಆಗಮಿಸಿತು. ನಂತರ ಫಲ್ಲಕ್ಕಿ ಉತ್ಸವದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿ ಶ್ರೀಮಠಕ್ಕೆ ತಲುಪಿತು.
ನಂತರ ಸಾಯಂಕಾಲ 6 ಘಂಟೆಗೆ ಶ್ರೀ ಶರಣಮುತ್ಯಾರವರ ಮಹಾರಥೋತ್ಸವವು ಸಹಸ್ರಾರು ಭಕ್ತಸಮೂಹದ ಮಧ್ಯ ವಿಜೃಂಬಣೆಯಿಂದ ಜರುಗಿತು.
ಜಾತ್ರೋತ್ಸವಕ್ಕೆ ರಾಜ್ಯದ ವಿವಿಧ ಕಡೆಗಳಿಂದ ಅಸಂಖ್ಯಾತ ಭಕ್ತ ಸಮೂಹ ಆಗಮಿಸಿ ಶರಣರ ಕೃಪೆಗೆ ಪಾತ್ರರಾದರಲ್ಲದೇ ರಥೋತ್ಸವಕ್ಕೆ ಕಾಯಿ, ಉತ್ತತ್ತಿ, ಬಾಳೆ ಹಣ್ಣುಗಳನ್ನು ಅರ್ಪಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಕೋರೋನಾದಿಂದ ಎರಡು ವರ್ಷ ಜಾತ್ರೋತ್ಸವ, ಹಬ್ಬ ಹರಿದಿನಗಳು ಇಲ್ಲದೇ ಹತಾಷಗೊಂಡಿದ್ದ ಭಕ್ತಸಮೂಹಕ್ಕೆ ಶ್ರೀ ಶರಣಮುತ್ಯಾರ ಜಾತ್ರೋತ್ಸವ ಮತ್ತು ರಥೋತ್ಸವದಲ್ಲಿ ಜನರು ಹುರುಪಿನಿಂದ ಭಾಗಿಯಾಗಿದ್ದು ಕಂಡುಬಂದಿತು.
ಈ ರಥೋತ್ಸವದ ನೇತೃತ್ವವನ್ನು ಶರಣರ ಮಠದ ಶ್ರೀ ಬಸ್ಸಣ್ಣ ಶರಣರು, ಶರಣಪ್ಪ ಶರಣರು, ವಹಿಸಿದ್ದರು.