ವಿಜಿ ಮಹಿಳಾ ಕಾಲೇಜನಲ್ಲಿ ವಿಶ್ವ ಸಂಗೀತ ದಿನಾಚರಣೆ

ಕಲಬುರಗಿ:ಜೂ.22: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಕಲಬುರಗಿಯ ಹಿಂದೂಸ್ತಾನಿ ಸಂಗೀತ ವಿಭಾಗದಿಂದ ವಿಶ್ವ ಸಂಗೀತ ದಿನಾಚರಣೆಯನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಗುರುರಾಜ. ಎಸ್. ದಂಡಾಪುರ ಮುಖ್ಯಸ್ಥರು ಸ್ನಾತಕೋತ್ತರ ಸಂಗೀತ ವಿಭಾಗ ನೂತನ ವಿದ್ಯಾಲಯ ಕಲಬುರಗಿ, ಡಾ. ರಾಘವೇಂದ್ರ. ಕುಲಕರ್ಣಿ ಉಪನ್ಯಾಸಕರು ಸಂಗೀತ ವಿಭಾಗ ನೂತನ ವಿದ್ಯಾಲಯ ಕಲಬುರಗಿ ಅವರು ವಹಿಸಿಕೊಂಡಿದ್ದರು ಅಧ್ಯಕ್ಷಸ್ಥಾನವನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಂದ್ರ. ಕೊಂಡಾ ಅವರು ವಹಿಸಿದ್ದರು. ತಬಲಾ ವಾದ್ಯ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಗೀತ ವಿಭಾಗದ ಮಕ್ಕಳು ತಮ್ಮ ಸುಮಧುರ ಕಂಠದಿಂದ ಸರಸ್ವತಿ ವಂದನ ಹಾಡಿದರು. ಸಂಗೀತ ವಿಭಾಗದ ಮುಖ್ಯಸ್ಥೆ ಡಾ. ರೇಣುಕಾ. ಹಾಗರಗುಂಡಗಿ ಅವರು ಪ್ರಸ್ತಾವಿಕ ನುಡಿ ಹಾಗೂ ಸ್ವಾಗತವನ್ನು ಕೋರಿದರು. ಕುಮಾರಿ ಅಂಕಿತಾ ಪಾಟೀಲ ಅತಿಥಿಗಳನ್ನ ಪರಿಚಯಿಸಿದಳು. ಕಾರ್ಯಕ್ರಮ ಕುರಿತು ಡಾ. ದಂಡಾಪುರ ಅವರು ಹಾಗೂ ಡಾ. ರಾಘವೇಂದ್ರ ಕುಲಕರ್ಣಿ ಅವರು ಸಂಗೀತ ಕುರಿತು ಮಾತನಾಡಿದರು. ಅದರಂತೆ ಕಾಲೇಜಿನ ಪ್ರಾಚಾರ್ಯರು ತಮ್ಮ ಅಧ್ಯಕ್ಷಿಯ ಮಾತುಗಳನ್ನು ಆಡುತ್ತಾ ಸಂಗೀತಕ್ಕೆ ಇರುವ ಶಕ್ತಿಯನ್ನು ವಿವರಿಸಿದರು. ಕುಮಾರಿ ಅಂಜಲಿ ಕುಮಾರಿ ಇಡಿಯಾದ ಕಾರ್ಯಕ್ರಮದ ನಿರೂಪಣೆ ಅಚ್ಚುಕಟ್ಟಾಗಿ ನಿರ್ವಹಿಸಿದರೆ ಕುಮಾರಿ. ಕಾವ್ಯ ವಂದನಾರ್ಪಣೆ ಮಾಡಿದಳು. ಕಾರ್ಯಕ್ರಮದಲ್ಲಿ ಕಾಲೇಜಿನ ಭೋಧಕ ಭೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡು ವಿಶ್ವ ಸಂಗೀತ ದಿನಾಚರಣೆಯನ್ನು ಯಶಸ್ವಿಗೊಳಿಸಿದರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ತಿಳಿಸಿದ್ದಾರೆ.