ವಿಜಯ ಸಂಕಲ್ಪ ಯಾತ್ರೆ ಯಶ್ವಸಿಗೆ ಸಿದ್ದರಾಗಿ: ಶಾಸಕ ಪರಣ್ಣ ಮುನವಳ್ಳಿ


ಸಂಜೆವಾಣಿ ವಾರ್ತೆ
ಗಂಗಾವತಿ, ಫೆ.28: ಚುನಾವಣೆ ಕೆಲವೇ ದಿನಗಳಲ್ಲಿ ಬರುವದರಿಂದ ಪಕ್ಷವು ನಿಗದಿ ಮಾಡುವ ಎಲ್ಲಾ ಯಾತ್ರೆ ಹಾಗೂ ಅಭಿಯಾನಗಳನ್ನು ಸಂಪೂರ್ಣವಾಗಿ ಯಶಸ್ವಿ ಮಾಡುವ ಹೊಣೆ ಪ್ರತಿಯೊಬ್ಬ ಪದಾಧಿಕಾರಿ ಹಾಗೂ ಎಲ್ಲಾ ಮೋರ್ಚಾ ಕಾರ್ಯಕರ್ತರು, ಪದಾಧಿಕಾರಿಗಳು ಶ್ರಮವಹಿಸಿ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ಭಾರತೀಯ ಜನತಾ ಪಾರ್ಟಿಯ  ಕಾರ್ಯಾಲಯದಲ್ಲಿ ವಿಜಯ ಸಂಕಲ್ಪ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಜನರಿಗೆ ತಲುಪಿಸಲು ವಿವಿಧ ಹಂತರ ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದು, ಕಾರ್ಯಕರ್ತರು ಪದಾಧಿಗಳು ಶ್ರಮವಹಿಸಿ ಯಾತ್ರೆಯನ್ನು ಯಶ್ವಸಿಗೊಳಿಸಬೇಕು ಎಂದರು.
ಸಂಕಲ್ಪ ಯಾತ್ರೆಯ ಜಿಲ್ಲಾ ಸಂಚಾಲಕರಾದ ನವೀನ್ ಗುಳಗಣ್ಣನವರ್ ಮಾತನಾಡಿ ಯಾತ್ರೆಯು ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದಾಗ ಕಾರ್ಯಕರ್ತರ ಜವಾಬ್ದಾರಿ ಕುರಿತು ಸಂಪೂರ್ಣ ಮಾಹಿತಿ ನೀಡಿವ ಕೆಲಸಗಳ ಬಗ್ಗೆ ತಿಳಿಸಿದರು.
ಈ ವೇಳೆ ಪ್ರಮುಖರಾದ ಸಂತೋಷ ಕೆಲೋಜಿ, ನೆಕ್ಕಂಟಿ ಸೂರಿಬಾಬು, ಜೋಗದ ಹನುಮಂತಪ್ಪ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ರಾವ್ ಕುಲಕರ್ಣಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಶ್ರೇಷ್ಠಿ, ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ಶಿವು ಅರಿಕೇರಿ, ಜಿಲ್ಲಾ ಒಬಿಸಿ ಮೋರ್ಚ ಅಧ್ಯಕ್ಷ ಅಮರಜ್ಯೋತಿ ವೆಂಕಟೇಶ, ಚಂದ್ರಶೇಖರ ಅಕ್ಕಿ, ಜಿಲ್ಲಾ ಕಾರ್ಯದರ್ಶಿ ರಾಧ ಉಮೇಶ, ನಗರ ಮಂಡಲ‌ ಅಧ್ಯಕ್ಷ ಕಾಶಿನಾಥ ಚಿತ್ರಗಾರ, ಗ್ರಾಮೀಣ ಮಂಡಲ ಅಧ್ಯಕ್ಷ ಚನ್ನಪ್ಪ ಮಳಗಿ ವಕೀಲರು ಹಾಗೂ ನಗರ, ಗ್ರಾಮೀಣ ಮಂಡಲದ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.