ವಿಜಯ ಸಂಕಲ್ಪ ಯಾತ್ರೆ: ಕಿತ್ತೂರಿನಲ್ಲಿ ಭರ್ಜರಿ ರೋಡ್ ಶೋ

ಚನ್ನಮ್ಮನ ಕಿತ್ತೂರು,ಮಾ. : 3, ಪಟ್ಟಣದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು.
ಚನ್ನಮ್ಮನ ವೃತ್ತದಿಂದ ಗುರುವಾರ ಪೇಟೆ ಅರಳಿಕಟ್ಟಿ ಮಾರ್ಗವಾಗಿ ಸೋಮವಾರ ಪೇಟೆ ಚನ್ನಮ್ಮನ ಕೂಟ ವರೆಗೆ ಭರ್ಜರಿ ರೋಡ್ ಶೋ ಜರುಗಿತು.
ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮತದಾರರನ್ನುದ್ದೆತ್ಸಿ ಮಾತನಾಡಿ 2023ರ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರನ್ನು ಬೆಂಬಲಿಸಬೇಕು. 2018 ರ ವಿಧಾನ ಸಭೆ ಚುನಾವಣೆಯಲ್ಲಿ 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ. ಈ ಬಾರಿ ಸಹ 50 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಹೇಳಿದರು. ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಮಾತನಾಡಿದರು.
ಸುಡು ಬಿಸಿಲು ಲೆಕ್ಕಿಸದೇ ಕಾರ್ಯಕರ್ತರು ಮತ್ತು ಸಾರ್ವಜನಿಕರು ರೋಡ್ ಶೋನಲ್ಲಿ ಭಾಗಿಯಾಗಿದ್ದರು. ರೋಡ ಶೋದಲ್ಲಿ ಶಾಸಕ ಮಹಾಂತೇಶ ದೊಡ್ಡಗೌಡರ ಪರ ಘೋಷಣೆ ಕೇಳಿಬರುತ್ತಿತ್ತು. ಪಟ್ಟಣ ಕೇಸರಿಮಯವಾಗಿತ್ತು.
ಕೇಂದ್ರ ರಕ್ಷಣಾ ಸಚಿವರ ಕಾರ್ಯಕ್ರಮಕ್ಕೆ ಪಟ್ಟಣದೆಲ್ಲೆಡೆಯೂ ಪೆÇಲೀಸ್ ಸರ್ಪಗಾವಲಿತ್ತು, ಬೆಳಿಗ್ಗೆಯಿಂದಲೇ ಇಡೀ ಪಟ್ಟಣವನ್ನು ಸುತ್ತುವರೆದಿದ್ದ ಪೆÇಲೀಸರು ಎಲ್ಲಡೆಯೂ ಬ್ಯಾರಿಕೇಡ್ ಹಾಕುವ ಮೂಲಕ ಸೂಕ್ತ ಭದ್ರತೆ ಕಲ್ಪಿಸಿದ್ದರು,
ಚನ್ನಮ್ಮಾಜಿಯ ವರ್ತುಳದಲ್ಲಿ ಕಣ್ಣು ಹಾಯಿಸಿದಲೆಲ್ಲ ಪೆÇಲೀಸರೇ ಕಂಡು ಬಂದರು. ಎಸ್ಪಿ ಸಂಜೀವ ಪಾಟೀಲ ಉಸ್ತುವಾರಿಯಲ್ಲಿ ಭದ್ರತಾ ಕಾರ್ಯ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವೆ ಶಶಿಕಲಾ ಜೊಲ್ಲೆ, ಸಂಸದೆ ಮಂಗಲಾ ಅಂಗಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮುರಗೇಶ ನಿರಾಣಿ, ನಳಿನಕುಮಾರ ಕಟೀಲ, ಅನಿಲ್ ಬೆನಕೆ, ಮಂಡಲ ಅಧ್ಯಕ್ಷ ಬಸವರಾಜ ಪರವಣ್ಣವರ, ಅರುಣ ಶಹಾಪೂರ, ಉಳವಪ್ಪ ಉಳ್ಳೆಗಡ್ಡಿ, ಸಂದೀಪ ದೇಶಪಾಂಡೆ, ಬಸವರಾಜ ಮಾತನವರ, ರವಿಕುಮಾರ, ಪ.ಪಂ. ಸದಸ್ಯರು, ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಇತರರು ರ್ಯಾಲಿಯಲ್ಲಿದ್ದರು.