ವಿಜಯ ಸಂಕಲ್ಪ ಅಭಿಯಾನ ಉದ್ಘಾಟನೆ

ಸವದತ್ತಿ,ಜ21: ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆ ಹಾಗೂ ಕ್ಷೇತ್ರದಲ್ಲಿ ದಿ. ಆನಂದ ಮಾಮನಿಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನತೆ ತಿಳಿಸುವ ಮೂಲಕ ಅತ್ಯಧಿಕ ಮತದಾರರನ್ನು ಬಿಜೆಪಿ ಕಡೆ ಸೆಳೆಯಲು ಮತಕ್ಷೇತ್ರದಲ್ಲಿ ಜ21 ರಿಂದ 29 ರವರೆಗೆ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಅಭಿಯಾನದ ಉದ್ಘಾಟನೆಗೊಳಿಸಿ ಮಾತನಾಡಿ, ಈ ಅಭಿಯಾನದ ಮೂಲಕ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬಿಜೆಪಿ ಸಾಧನೆಗಳು ಜನಸಾಮಾನ್ಯರನ್ನು ತಲುಪಲಿದೆ. ಇದೊಂದು ಸರ್ವಸ್ಪರ್ಶಿ ಕಾರ್ಯಕ್ರಮವಾಗಿದ್ದು ಬಿಜೆಪಿಯನ್ನು ಗೆಲುವಿನ ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದರು.
ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ನೀತಿನ ಚೌಗಲೆ ಮಾತನಾಡಿ, ಜನ ಕಲ್ಯಾಣದೆಡೆಗೆ ಬಿಜೆಪಿಯ ಬದ್ಧತೆ ಸಾರಲು ಪ್ರತಿ ಬೂತ್ ದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕವೂ ನಮ್ಮ ಯೋಜನೆಗಳ ಯಶಸ್ಸನ್ನು ಸಾರಲಾಗುವುದು ಎಂದರು.
ಮಂಡಲ ಅಧ್ಯಕ್ಷ ಈರಣ್ಣ ಚಂದರಗಿ, ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿದರು.
ವೇದಿಕೆಯ ಮೇಲೆ ಜಿಲ್ಲಾ ಎಸ್ಟಿ ಎಸ್ಟಿ ಮೋರ್ಚಾ ಅಧ್ಯಕ್ಷ ಚಂದ್ರಶೇಖರ ಅಳಗೋಡಿ, ಶಂಕರಗೌಡ ಪಾಟೀಲ ಇದ್ದರು.
ಕಾರ್ಯಕ್ರಮದಲ್ಲಿ ಜಗದೀಶ್ ಕೌಜಗೇರಿ, ಜಗದೀಶ್ ಹನಸಿ, ಈರಣ್ಣ ವೀರಶೆಟ್ಟಿ, ಅಶೋಕ ಹುಜರತಿ, ಬಸವರಾಜ ಇಂಚಲ, ಸಿ.ವ್ಹಿ. ಸಂಬಯ್ಯನವರಮಠ,
ಮಹಾದೇವಿ ಮಠದ, ಚಂದ್ರಕಲಾ ಬಾರ್ಕಿ, ಶಿವಲಿಂಗಪ್ಪ ಅಕ್ಕಿಸಾಗರ, ಕಾಡಪ್ಪ ವೀರಶೆಟ್ಟಿ, ಸಿದ್ದು ಶಿವಬಸಣ್ಣವರ, ಗುರು ವಾಲಿ, ಬಾಬು ಭಜಂತ್ರಿ, ಆಯ್.ಬಿ.ಪಾಟೀಲ, ಸೋಮು ಬೂಮರೆಡ್ಡಿ ಸೇರಿದಂತೆ ಮುಂತಾದ ಪ್ರಮುಖ ಪದಾಧಿಕಾರಿಗಳು ಇದ್ದರು.