ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ

ಧಾರವಾಡ,ಜ22: ಬಿಜೆಪಿ ಬೂತ್ ವಿಜಯ ಸಂಕಲ್ಪ ಅಭಿಯಾನಕ್ಕೆ ಶನಿವಾರ ನಗರದ ಲಕ್ಷ್ಮೀ ಸಿಂಗನಕೆರಿ ಹಾಗೂ ಕಲ್ಯಾಣ ನಗರದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಚಾಲನೆ ನೀಡಿದರು.
ಅಭಿಯಾನದ ಅಂಗವಾಗಿ ಮನೆ ಮನೆಗೆ ಗೋಡೆ ಬರಹ, ಭಿತ್ತಿ ಪತ್ರ ಆಟಿಸುವುದು ಹಾಗೂ ಕರ್ನಾಟಕ ಸರ್ಕಾರದ ಸಾಧನೆಯ ಕರಪತ್ರ ಹಂಚುವ ಕಾರ್ಯ ಆರಂಭಗೊಂಡಿತು. ಈ ಸಂದರ್ಭದಲ್ಲಿ ವಾರ್ಡ ಸಂಖ್ಯೆ 19ರಲ್ಲಿ ಮನೆ ಮನೆಗೆ ತೆರಳಿ ಸಾರ್ವಜನಿಕರಿಗೆ ಸರ್ಕಾರದ ಸಾಧನೆ ಕುರಿತು ತಿಳಿಸಲಾಯಿತು. ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಬೆಂಬಲಿಸಲು ಕೋರಿದರು.
ಈ ಸಂಧರ್ಭದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಸಂಜಯ ಕಪಟಕರ, ಪಾಲಿಕೆ ಸದಸ್ಯರಾದ ಜ್ಯೋತಿ ಪಾಟೀಲ, ವಿಜಯಾನಂದ ಶಟ್ಟಿ, ಬಸವರಾಜ ಗರಗ, ಪಾಲಿಕೆ ಸದಸ್ಯರಾದ ಸುರೇಶ ಬೆದರೆ, ಮೋಹನ ರಾಮದುರ್ಗ. ವಿಷ್ಟು ಕೊರ್ಲಳ್ಳಿ, ಅಮೀತ್ ಪಾಟೀಲ, ಸುರೇಶ ಜಾದವ, ಅರವಿಂದ ಆಳದಕಟ್ಟಿ, ಯಲ್ಲಪ್ಪ ವಡ್ಡರ, ಬಸವರಾಜ ಪಾಟೀಲ, ವಿನಯ ಪಾಟೀಲ, ಗೀರಿಶ ಮುಸ್ದದ್ದಿ, ಭೀಮಸಿ ನೇಮಿಕಲ್, ಈರಣ್ಣ ಬಡಿಗೇರ ಇದ್ದರು.