ವಿಜಯ ಸಂಕಲ್ಪ ಅಭಿಯಾನಕ್ಕೆ ಇಂದು ಚಾಲನೆ

ಚಿಂಚೋಳಿ,ಜ.21- ಪ್ರತಿ ವಿಧಾನಸಭಾ ಮತ ಕ್ಷೇತ್ರದಲ್ಲಿ
ಭಾರತೀಯ ಜನತಾ ಪಾರ್ಟಿ ರಾಜ್ಯಾದ್ಯಂತ ಹಮ್ಮಿಕೊಂಡ “ವಿಜಯ ಸಂಕಲ್ಪ ಅಭಿಯಾನ” ಹಿನ್ನೆಲೆ ಚಿಂಚೋಳಿ ಮಂಡಲದಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಗುವುದು.
ಕ್ಷೇತ್ರದ ಎಲ್ಲಾ ಮಹಾಶಕ್ತಿಕೇಂದ್ರ, ಶಕ್ತಿಕೇಂದ್ರ, ಬೂತಗಳಲ್ಲಿ ಮನೆಮನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಹಾಗೂ ಕ್ಷೇತ್ರದಲ್ಲಿನ ಅಭಿವೃದ್ಧಿಗಳ ಕರಪತ್ರ ವಿತರಣೆ, ಸ್ಟಿಕ್ಕರ ಅಂಟಿಸುವುದು, ಗೋಡೆಬರಹ, ಮತ್ತು “ಸದಸ್ಯತ್ವ ಅಭಿಯಾನ” ನಡೆಯಲಿದೆ.
ಈ ಅಭಿಯಾನದಲ್ಲಿ ಶಾಸಕರಾದ ಡಾ.ಅವಿನಾಶ ಉಮೇಶ ಜಾಧವ, ಪಕ್ಷದ ಪ್ರಮುಖ ಮುಖಂಡರು, ಮಹಾಶಕ್ತಿಕೇಂದ್ರ ಅದ್ಯಕ್ಷರು, ಶಕ್ತಿಕೇಂದ್ರ ಪ್ರಮುಖರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಭಾರತೀಯ ಜನತಾ ಪಾರ್ಟಿ ಎಲ್ಲಾ ಸ್ಥರದ ಪದಾಧಿಕಾರಿಗಳು, ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು ಅವರ ಬೂತಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಗಡಂತಿ, ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ