ವಿಜಯ ಬೂತ್ ಅಭಿಯಾನ ಕಾರ್ಯಕ್ರಮ

ರಾಯಚೂರು.ಜ.೦೫- ಇಂದು ಮಾನ್ವಿ ವಿಧಾನಸಭಾ ಕ್ಷೇತ್ರದ ಮ್ಯಾಕಲ್ ಅಯ್ಯಪ್ಪ ನಾಯಕ ಮಾನ್ವಿ ಪಟ್ಟಣದ ೧೮೬ ಬೂತ್ ನಂಬರ್ ಅಧ್ಯಕ್ಷರಾದ ತಾಯಣ್ಣ ಕಿನ್ನರಿ ಇವರ ಮನೆಯ ಮೇಲೆ ಬಿಜೆಪಿ ಧ್ವಜಾರೋಹಣ ಮಾಡುವುದರ ಮುಖಾಂತರ ವಿಜಯ ಬೂತ್ ಅಭಿಯಾನ ಕಾರ್ಯಕ್ರಮವನ್ನು ಜರಗಿಸಲಾಯಿತು.
ಇಂದು ಮಾನ್ವಿ ವಿಧಾನಸಭಾ ಕ್ಷೇತ್ರದ ಮ್ಯಾಕಲ್ ಅಯ್ಯಪ್ಪ ನಾಯಕ ಜಿಲ್ಲಾಧ್ಯಕ್ಷರು ಬಿಜೆಪಿ ಎಸ್ ಟಿ ಮೋರ್ಚ ರಾಯಚೂರು ಇವರ ನೇತೃತ್ವದಲ್ಲಿ ಮಾನ್ವಿ ಪಟ್ಟಣದ ೧೮೬ ಬೂತ್ ನಂಬರ್ ಅಧ್ಯಕ್ಷರಾದ ತಾಯಣ್ಣ ಕಿನ್ನರಿ ಇವರ ಮನೆಯ ಮೇಲೆ ಬಿಜೆಪಿ ಧ್ವಜವನ್ನು ಏರಿಸಿ ಮಾಡಿ ಪಟ್ಟಣದ ೫೦ ಬಿಜೆಪಿ ಕಾರ್ಯಕರ್ತರ ಮನೆ ಮೇಲೆ ಬಿಜೆಪಿ ವಿಜಯ ಬೂತ್ ಅಭಿಯಾನ ಕಾರ್ಯಕ್ರಮವನ್ನು ಜರಗಿಸಲಾಯಿತು. ಈ ಸಂದರ್ಭದಲ್ಲಿ ಗುರುಗೌಡ ಕಣ್ಣೂರ್ ಮಂಡಲ ಪ್ರಧಾನ ಕಾರ್ಯದರ್ಶಿಗಳು , ಮಂಜುನಾಥ್ ಜಾನೇಕಲ್ ಬಿಜೆಪಿ ಮಂಡಲ ಉಪಾಧ್ಯಕ್ಷರು, ಜಾವಿದ್ ಖಾನ್ ಜಿಲ್ಲಾ ಮೈನಾರಿಟಿ ಉಪಾಧ್ಯಕ್ಷರು, ಚಂದ್ರು ಮಾನ್ವಿ, ವೆಂಕಟೇಶ್ ಕೋನಾಪುರ ಪೇಟೆ, ಸೈಯದ್ ಉಸ್ಮಾನ್, ರಂಗನಾಥ್ ನಾಯಕ್ ಜಾಗೀರ ನನ್ನೂರು, ಗಂಗಾಧರ್ ರಾವ್ ಶಾಸ್ತ್ರಿ ಕ್ಯಾಂಪ್, ಲಕ್ಷ್ಮಣ ಮಾನ್ವಿ, ಸುನಿಲ್ ಬೆಟ್ಟದೂರು, ವೆಂಕಟೇಶ್ ಜಾನೇಕಲ್ ಉಪಸ್ಥಿತರಿದ್ದರು.