ವಿಜಯ ಕುಮಾರ ಅಮಾನತಿಗೆ ಒತ್ತಾಯಿಸಿ ಪ್ರತಿಭಟನೆ

ರಾಯಚೂರು, ಸೆ.೧೨-ಸಿರವಾರ ತಾಲೂಕಿನ ಮಾಡಗಿರಿ ಗಾಮ ಪಂಚಾಯತಿ ಪ್ರಭಾರಿ ಪಿಡಿಒ ವಿಜಯ ಕುಮಾರ ಇವರನ್ನು ಅಮಾನತಿಗೆ ಒತ್ತಾಯಿಸಿ ಕರ್ನಾಟಕ ಜಾಗೃತ ರೈತ ಸಂಘ ಪದಾಧಿಕಾರಿಗಳು ನಗರದ ಟಿಪ್ಪುಸುಲ್ತಾನ್ ಗಾರ್ಡನ್ ನಲ್ಲಿ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.
ಸಿರವಾರ ತಾಲೂಕಿನ ಮಾಡಗಿರಿ ಗ್ರಾಮ ಪಂಚಾಯತಿಯ ಪ್ರಭಾರಿ ಅಭಿವೃದ್ಧಿ ಅಧಿಕಾರಿಯಾದ ವಿಜಯ ಕುಮಾರ ಇವರು ೧೫ನೇ ಹಣಕಾಸು ಯೋಜನೆಯಡಿಯಲ್ಲಿ ಕಾಮಗಾರಿ ನಿರ್ವಹಿಸದೆ ಬೋಗಸ್ ಬಿಲ್ ಎತ್ತುವಳಿ ಮಾಡಿ ಕರ ವಸೂಲಿ ಹಣವನ್ನು ಕೂಡ ವಸೂಲಿ ಮಾಡಿ ಯಾವುದೇ ಕಾಮಗಾರಿಗಳನ್ನು ಮಾಡದೇ ಪಂಚಾಯತಿಯ ಅನುದಾನವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳು ಸಮಗ್ರ ತನಿಖೆ ಮಾಡಿ ಅಮಾನತ್ತುಗೊಳಿಸುವಂತೆ ಒತ್ತಾಯಿಸಿದರು. ಸಿರವಾರ ತಾಲೂಕಿನ ಅತ್ತನೂರು ಗ್ರಾಮ ಪಂಚಾಯತಿಯಲ್ಲಿ ಮೂಲತಃ ಇವರು ಲೆಕ್ಕ ಸಹಾಕವಾಗಿದ್ದು, ಸದ್ಯ ಮಾಡಗಿರಿ ಪಂಚಾಯತಿಯ ಪ್ರಭಾರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ನಿಯಮಬಾಹಿರವಾಗಿ ಕಾನೂನು ಉಲ್ಲ೦ಘಿಸಿರುವ ಇವರಿಗೆ ತಾಲೂಕಿನ ಯಾವುದೇ ಗ್ರಾಮ ಪಂಚಾಯತಿಯಲ್ಲಿ ಪ್ರಭಾರಿ ಅಭಿವೃದ್ಧಿ ಅಧಿಕಾರಿ ಎಂದು ನೇಮಕ ಮಾಡಬಾರದು. ೧೫ ಹಣಕಾಸು ಯೋಜನೆಯಡಿಯಲ್ಲಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು ಸ೦ಪೂರ್ಣ ತನಿಖೆಗೆ ಒಳಪಡಿಸಬೇಕು.
ಕರವಸೂಲಿ ಮಾಡಿರುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದು ಸಂಪೂರ್ಣ ತನಿಖೆಗೆ
ಒಳಪಡಿಸಬೇಕು. ಮಾಡಗಿರಿ ಗ್ರಾಮ ಪಂಚಾಯತಿ ನರೇಗಾ ಯೋಜನೆಯಲ್ಲಿ ಬಾಕಿ ಮೊತ್ತವನ್ನು ತಕ್ಷಣವೇ ಬಿಡುಗಡೆ ಮಾಡಬೇಕು.
ಇದುವರೆಗೆ ಕೂಲಿಕಾರರಿಗೆ ಪೇಮೆಂಟ್ ನೀಡಿರುವುದಿಲ್ಲ, ಈ ಕೂಡಲೇ ಪೇಮೆಂಟ್ ಬಿಡುಗಡೆ ಮಾಡಬೇಕು.
ಈ ಸಂದರ್ಭದಲ್ಲಿ ಲಿಂಗಣ್ಣ, ಪ್ರಶಾಂತ ಮಾಡಗಿರಿ ಹಾಗೂ ರಾಜರತ್ನ ಸಿರವಾರ ಸೇರಿದಂತೆ ಉಪಸ್ಥಿತರಿದ್ದರು.