ವಿಜಯ್ ಹಜಾರೆ ಟ್ರೋಫಿ: ಸಿದ್ದಾರ್ಥ ಭರ್ಜರಿ ಶತಕ- ಬಿಹಾರ ವಿರುದ್ದ ಕರ್ನಾಟಕಕ್ಕೆ ಜಯಭೇರಿ

ಬೆಂಗಳೂರು,ಫೆ.‌22- ನಾಯಕ ರವಿಕುಮಾರ್ ಸಮರ್ಥ ಅವರ ಅಜೇಯ 151 ರನ್ ಗಳಿಂದ ಬಿರುಸಿನ ಆಟದ ನೆರವಿನಿಂದ ವಿಜಯ್ ಹಜಾರೆ ಟ್ರೋಫಿಯ ಏಕದಿನ ಪಂದ್ಯದಲ್ಲಿ ಕರ್ನಾಟಕ, ಬಿಹಾರದ ವಿರುದ್ಧ 267 ರನ್ ಗಳ ಭಾರೀ ಅಂತರದಿಂದ ಜಯಭೇರಿ ಬಾರಿಸಿದೆ.
ಜಸ್ಟ್ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ, ನಿಗದಿತ ಐವತ್ತು ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 354 ರನ್ ಗಳ ಬೃಹತ್ ಪೇರಿಸಿತು.
ದೇವದತ್ ಪಡಿಕ್ಜಲ್ 97 ಹಾಗೂ ಕೃಷ್ಣಮೂರ್ತಿ ಸಿದ್ಧಾರ್ಥ್ 76 ರನ್ ಗಳ ಬಿರುಸಿನ ಆಟದ ನೆರವಿನಿಂದ 354 ರನ್ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸಮರ್ಥ ಹಾಗೂ ಪಣಿಕಲ್ 29.3 ಓವರ್ ಗಳಲ್ಲಿ 153 ಸೇರಿಸಿ ಉತ್ತರ ಅಡಿಪಾಯ ಹಾಕಿಕೊಟ್ಟರು.
ಕೇವಲ ಮೂರು ರನ್‌ಗಳಿಂದ ಶತಕ ವಂಚಿತರಾದ ಪಡಿಕ್ಕಲ್ 98 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 97 ರನ್ ಗಳಿಸಿದರು.
ಮತ್ತೊಂದೆಡೆ ಅಮೋಘ ಬ್ಯಾಟಿಂಗ್ ಮುಂದುವರಿಸಿದ ಸಮರ್ಥ್ ಆಕರ್ಷಕ ಶತಕ ಸಿಡಿಸಿದರು. ಅಲ್ಲದೆ ಎರಡನೇ ವಿಕೆಟ್‌ಗೆ ಸಿದ್ಧಾರ್ಥ್ ಜೊತೆಗೂ 171 ರನ್‌ಗಳ ಬೃಹತ್ ಜೊತೆಯಾಟದ ಕಾಣಿಕೆ ನೀಡಿದರು.
144 ಎಸೆತಗಳನ್ನು ಎದುರಿಸಿದ ಸಮರ್ಥ್ 15 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 158 ರನ್ ಗಳಿಸಿ ಅಜೇಯರಾಗುಳಿದರು.
55 ಎಸೆತಗಳನ್ನು ಎದುರಿಸಿದ ಸಿದ್ದಾರ್ಥ್ ಐದು ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 76 ರನ್ ಗಳಿಸಿದರು.
ಈ ಬೃಹತ್ ಮೊತ್ತದ ಸವಾಲಿನ ಬೆನ್ನುಹತ್ತಿದ ಬಿಹಾರ ಅಭಿಮನ್ಯು ಮಿಥುನ್ ಹಾಗೂ ಶ್ರೇಯಸ್ ಬೌಲಿಂಗ್ ದೂಳಿಪಟವಾಯಯಿತು. 27.2 ,ಓವರ್ ಗಳಲ್ಲಿ ಕೇವಲ 87 ರನ್ ಗಳಿಗೆ ಸರ್ವಪತನಗೊಂಡು ಹೀನಾಯ ಸೋಲು ಕರ್ನಾಟಕ ಪರ ಪ್ರಸಿದ್ಧ ಕೃಷ್ಣ ನಾಲ್ಕು ಮತ್ತು ಮಿಥುನ್ ಹಾಗೂ ಶ್ರೇಯಸ್ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು..