ವಿಜಯ್ -ರಶ್ಮಿಕಾ ಡೇಟಿಂಗ್

ಹೈದರಾಬಾದ್, ಏ. ೭- ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್‌ನಲ್ಲಿದ್ದಾರೆ ಎಂದು ಕೆಲವು ಸಮಯದಿಂದ ಸುದ್ದಿ ಹರಿದಾಡುತ್ತಲೇ ಇದೆ.
ದಕ್ಷಿಣ ಭಾರತದ ಮುದ್ದಿನ ಜೋಡಿಗಳಲ್ಲಿ ಇವರು ಒಬ್ಬರು. ಈಗ ಇವರಿಬ್ಬರು ಡೇಟಿಂಗ್ ಮಾಡುವುದಕ್ಕೆ ಹೊಸ ಸಾಕ್ಷಿ ಸಿಕ್ಕಿದೆ.
ಇದೀಗ ರಶ್ಮಿಕಾ ನಿನ್ನೆ ತಮ್ಮ ಬರ್ತ್ ಡೇ ಸಂದರ್ಭದಲ್ಲಿ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಲು ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದರು. ಈ ವೇಳೆ ರಶ್ಮಿಕಾ ಇರುವ ಮನೆಯ ತಾರಸಿ ಹಾಗೂ ಕೆಲವು ದಿನಗಳ ಮೊದಲು ವಿಜಯ್ ದೇವರಕೊಂಡ ಪೋಸ್ ಕೊಟ್ಟಿದ್ದ ಮನೆಯ ತಾರಸಿಯೂ ಒಂದೇ ರೀತಿಯಿತ್ತು. ಜೊತೆಗೆ ರಶ್ಮಿಕಾ ಬೆರಳಲ್ಲಿ ಉಂಗುರವೊಂದು ಇದ್ದು, ಇದನ್ನು ವಿಜಯ್ ಗಿಫ್ಟ್ ಮಾಡಿರಬೇಕು ಎಂದು ನೆಟ್ಟಿಗರು ಹೇಳಿದ್ದಾರೆ.
ಜಯ್ ದೇವರಕೊಂಡ ಇದ್ದಂತಹ ಅದೇ ಸ್ಥಳದಲ್ಲಿ ರಶ್ಮಿಕಾ ಅವರೂ ಇದ್ದರು. ಆದರೆ ವ್ಯತ್ಯಾಸ ಏನಂದ್ರೆ ರಶ್ಮಿಕಾ ಡೇ ಟೈಮ್ ವಿಡಿಯೋ ಮಾಡಿದ್ರೆ ವಿಜಯ್ ರಾತ್ರಿ ಹೊತ್ತಲ್ಲಿ ಫೋಟೋ ತೆಗೆಸಿಕೊಂಡಿದ್ದರು.
ಇದಕ್ಕೆ ಉತ್ತರಿಸಿರುವ ರಶ್ಮಿಕಾ ಅಯ್ಯೋ.. ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಬಾಬೂ..’ ಎಂದಿದ್ದಾರೆ. ಕೆಲವು ದಿನಗಳ ಮೊದಲು ರಶ್ಮಿಕಾ ಮಾಲ್ಡೀವ್ಸ್ ಗೆ ಪ್ರವಾಸ ಮಾಡಿದ್ದಾಗಲೂ ವಿಜಯ್ ಜೊತೆಗಿದ್ದರು ಎಂಬುದನ್ನು ನೆಟ್ಟಿಗರು ಫೋಟೋ ನೋಡಿ ಗುರುತಿಸಿದ್ದರು.
ಸರಿಯಾಗಿ ಗಮನಿಸಿ ನೋಡಿದರೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರು ಒಂದೇ ಮನೆಯಲ್ಲಿ ಇರುವುದು. ಈ ಫೋಟೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಅಂತೂ ನಾವು ಡೇಟ್ ಮಾಡ್ತಿಲ್ಲ ಎನ್ನುತ್ತಲೇ ಒಟ್ಟಿಗೆ ವಾಸಿಸುತ್ತಿದ್ದೀರಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.