ವಿಜಯೇಂದ್ರ ಹಸ್ತಕ್ಷೇಪ ಬಿಎಸ್‍ವೈ ಪದತ್ಯಾಗಕ್ಕೆ ಕಾರಣ

ಮೈಸೂರು, ಜೂ.06: ವಿಜಯೇಂದ್ರ ಹಸ್ತಕ್ಷೇಪ ಮುಖ್ಯಮಂತ್ರಿ ಯಡಿಯೂರಪ್ಪ ಪದತ್ಯಾಗಕ್ಕೆ ಕಾರಣ ಎಂದು ಎಂಎಲ್‍ಸಿ ಮಾಜಿ ಸಚಿವ ಹೆಚ್.ವಿಶ್ವನಾಥ್ ತಿಳಿಸಿದರು.
ನಗರದಲ್ಲಿ ಇಂದು ಮಾತನಾಡಿದ ಅವರು, ಎಲ್ಲರನ್ನ ಪ್ರೀತಿಸುವ, ಒಟ್ಟಿಗೆ ಕೊಂಡೊಯ್ಯುವ ಸಾಮಾನ್ಯ ಜ್ಞಾನ ಇರುವವರೇ ಸಾಕು ರಾಜ್ಯವನ್ನ ಮುನ್ನಡೆಸಲು. ಕೈ, ಬಾಯಿ ಶುದ್ದಿ ಇರುವವರು ಬುದ್ದಿವಂತರು ಸಾಕು. ಒಂದೊಂದು ನಾಯಕತ್ವ ಕುಟುಂಬಗಳಿಂದಲೇ ಹೋಗಿದ್ದಾವೆ ಎಂದರು.
ಇದು ವಯಸ್ಸಿನ ಕಾರಣಕ್ಕೆ ಬದಲಾವಣೆ. ಬಿಜೆಪಿ ವಯಸ್ಸಿನ ಲಕ್ಷ್ಮಣರೇಖೆ ವಿಧಿಸಿಕೊಂಡಿದೆ. ಇದು ಅಡ್ವಾನಿ, ಜೋಷಿ ಎಲ್ಲರಿಗೂ ಅನ್ವಯ ಆಗಿದೆ. ಆದರೆ ಬಿಎಸ್‍ವೈಗೆ ವಿಶೇಷವಾಗಿ ಆಧ್ಯತೆ ಕೊಟ್ಟಿತ್ತು. ಸಿಎಂ ಪಕ್ಷವನ್ನ ಬಲಪಡಿಸುವ, ಎಲ್ಲರನ್ನ ಗಟ್ಟಿಗಳಿಕೊಳ್ಳಲು ಈ ನಿರ್ಧಾರಕ್ಕೆ ಬಂದಿದ್ದಾರೆ. ಬಿಎಸ್‍ವೈ ಅದಕ್ಷ, ಅಪ್ರಮಾಣಿಕ ಎಂದು ಹೇಳುತ್ತಿದ್ರು. ಬಿಎಸ್‍ವೈ ಮೇಲಿನ ವಿಶ್ಚಾಸಕ್ಕೆ ನಾವೆಲ್ಲಾ ಬಿಜೆಪಿಗೆ ಹೋದ್ವಿ. ಬಿಎಸ್‍ವೈ ವಯಸ್ಸಿನ ಆಧಾರದ ಮೇಲೆ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ. ಹೈಕಮಾಂಡ್ ಸೂಚನೆಯನ್ನ ಪಾಲಿಸುವುದು ನಾಯಕರ ಕರ್ತವ್ಯ. ರಾಜೀನಾಮೆ ಕೊಟ್ರು, ತಗೊಂಡ್ರು ಎನ್ನುವುದಕ್ಕಿಂತ ಹೈಕಮಾಂಡ್ ತೀರ್ಮಾನ ಮುಖ್ಯ ಎಂದಿದ್ದಾರೆ.
ರಾಜ್ಯದಲ್ಲಿ ಜನ, ರಾಜಕೀಯ ನಾಯಕರು ಬಹಳ ವಿಶ್ವಾಸ ಇಟ್ಟುಕೊಂಡು ಬಂದಿದ್ದಾರೆ. ಯಡಿಯೂರಪ್ಪ ಈಗಿನ ಪರಿಸ್ಥಿತಿಯಲ್ಲಿ ರಾಜ್ಯದ ಹಿತಕ್ಕಾಗಿ ದೆಹಲಿ ನಾಯಕರ ಮಾತು ಕೇಳಿ ಕೆಳಗಿಳಿಯುತ್ತೇನೆ ಎನ್ನುವುದು ಸ್ವಾಗತ ಮಾಡುವೆ. ಈ ಬೆಳವಣಿಗೆ ಬಹಳ ದಿನದಿಂದ ನಡೆಯುತ್ತಿತ್ತು ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ಬಹಳ ಕಷ್ಟಪಟ್ಟು ಪಕ್ಷ ಕಟ್ಟಿದ್ದರು. ಸೈನಿಕ ದೆಹಲಿಗೆ ಹೋಗಿ ಬಂದ್ರು ಅಂತ ಅವರು ರಾಜೀನಾಮೆ ಕೊಡುತ್ತಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ. ಆರ್ ಎಸ್ ಎಸ್ ಕೂಡ ಅವರ ಮನವೊಲಿಸಿದೆ.
ನಾಡಿನ ಹಿತದಿಂದ ಯಡಿಯೂರಪ್ಪ ರಾಜೀನಾಮೆ ಕೊಡುತ್ತೇನೆ ಎಂದಿರುವುದು ನಾಡಿನ ಜನ ಸ್ವಾಗತ ಮಾಡ್ತಾರೆ. ಯಾರೋ ಮಾತನಾಡಿದ್ರು ಅಂತ ಅವರು ರಾಜೀನಾಮೆ ಕೊಡುತ್ತಿಲ್ಲ. ಅವರಿಗೆ ವಯಸ್ಸಿನ ಕಾರಣ, ಆರೋಗ್ಯದ ಇದೆ. ಬಿಜೆಪಿಯಲ್ಲಿ ವಯಸ್ಸಿನ ಲಕ್ಷ್ಮಣ ರೇಖೆ ಇದೆ ಎಂದರು.