ವಿಜಯೇಂದ್ರ ಮುಂದಿನ ಸಿಎಂ ಎಂದು ಘೋಷಣೆ ಕೂಗಿ ಸಂಭ್ರಮ

ಕೆ.ಆರ್. ಪೇಟೆ, ನ.06: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸುಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ 45ನೇ ಹುಟ್ಟುಹಬ್ಬವನ್ನು ಬೂಕನಕೆರೆ ಗ್ರಾಮದೇವತೆ ಗೋಗಾಲಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.
ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ನಿಕಟಪೂರ್ವ ತಾಲ್ಲೂಕು ಬಿಜೆಪಿ ಅದ್ಯಕ್ಷ ಬೂಕಹಳ್ಳಿ ಮಂಜು ಮಾತನಾಡಿ ಬಿಜೆಪಿಯ ಬೇರುಗಳು ಆಲದಮರದ ರೀತಿ ತಾಲ್ಲೂಕಿನಲ್ಲಿ ಆಳವಾಗಿ ಬೇರೂರುತ್ತಿದ್ದು ಮುಂಬರುವ ಗ್ರಾ.ಪಂ, ತಾಪಂ, ಜಿಪಂ ಚುನಾವಣೆಯಲ್ಲಿ ಪಕ್ಷ ಅಧಿಕಾರ ಹಿಡಿಯಲಿದ್ದು ಪಕ್ಷವನ್ನು ನಂಬಿ ಬಂದಿರುವ ಕಾರ್ಯಕರ್ತರನ್ನು ಕೈಬಿಟ್ಟಿಲ್ಲ, ವಿಜಯೇಂದ್ರ ರವರಿಗೆ ಗೋಗಾಲಮ್ಮ ತಾಯಿ ಆಯಸ್ಸು, ಆರೋಗ್ಯ, ಎಲ್ಲವನ್ನೂ ಕರುಣಿಸಿ ಮುಂದಿನ ರಾಜಕೀಯ ಭವಿಷ್ಯ ಉಜ್ವಲವಾಗುವಂತೆ ಆಶೀರ್ವದಿಸಲಿ ಎಂದು ತಿಳಿಸಿದರು.
ಕೆ.ಆರ್.ಪೇಟೆ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.ಅಭಿಮಾನಿಗಳು
ರಾಜ್ಯದ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂಬ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಯಡಿಯೂರಪ್ಪ ಬಳಗದ ಜಿಲ್ಲಾಧ್ಯಕ್ಷ ಬಿ.ಕೆ.ಮಧುಸೂದನ್, ತಾಲೂಕು ಪಂಚಾಯಿತಿ ಸದಸ್ಯೆ ಮೀನಾಕ್ಷಿ ಪುಟ್ಟರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಾಸಲು ನಾಗೇಶ್, ಅಡಿಕೆ ಸ್ವಾಮಿಗೌಡ, ಸಾರಂಗಿ ಮಂಜುನಾಥಗೌಡ, ಓಬಿಸಿ ಮೋರ್ಚಾ ಅಧ್ಯಕ್ಷ ನಾಗರಾಜು. ಲಕ್ಷ್ಮೀಶ, ಸಚ್ಚಿನ್,ಸೇರಿದಂತೆ ಗ್ರಾಮದ ಮುಖಂಡರುಗಳು ಹಾಜರಿದ್ದರು.