ವಿಜಯೇಂದ್ರಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ

ಮಸಿ ಏ.೪- ಬಿವೈ.ವಿಜಯೇಂದ್ರ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಅವರು ಶಾಸಕರು ಅಲ್ಲ ಕನಿಷ್ಟ ಗ್ರಾಮ ಪಂಚಾಯಿತಿ ಸದಸ್ಯರು ಅಲ್ಲ ಸಿಎಂ. ಪುತ್ರ ಅನ್ನುವುದು ಬಿಟ್ಟರೆ ಬೇರೆ ಏನು ಇಲ್ಲ ವಿಜಯೇಂದ್ರ ಅವರು ಮೊದಲಿಗೆ ಅವರ ಪಕ್ಷದ ಹಿರಿಯ ಶಾಸಕ ಬಸನಗೌಡ ಯತ್ನಾಳ ಮಾಡಿರುವ ಆರೋಪಗಳಿಗೆ ಮೊದಲು ಉತ್ತರ ಕೊಟ್ಟ ನಂತರ ಕಾಂಗ್ರೆಸ್ ಬಗ್ಗೆ ಟೀಕೆ ಮಾಡಲಿ ಎಂದು ಮಾಜಿ ಸಂಸದ ಧ್ರುವ ನಾರಯಣ ಹೇಳಿದರು.
ಇಲ್ಲಿಯ ಬಸವೇಶ್ವರ ನಗರ ಬಳಿಯ ಕಾಂಗ್ರೆಸ್ ಕಚೇರಿ ಯಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಶನಿವಾರ ಮಾತನಾಡಿದರು ಹಿರಿಯ ಸಚಿವ ಈಶ್ವರಪ್ಪ, ಶಾಸಕ ಬಸನಗೌಡ ಯತ್ನಾಳ ಸಿಎಂ. ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ದ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ ವಿಜಯೇಂದ್ರ ಅವರು ಮೊದಲು ಅವರ ಪಕ್ಷದ ಮನೆ ಸರಿ ಪಡಿಸಿ ಕೊಂಡು ಬೇರೆ ಯವರಿಗೆ ಬುದ್ದಿ ಹೇಳವುದು ಸೂಕ್ತ ಎಂದು ಧ್ರುವ ನಾರಯಣ ವಿಜಯೇಂದ್ರ ಗೆ ಟಾಂಗ್ ಕೊಟ್ಟರು. ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಶಾಸಕ ನಾಗಿದ್ದ ವೇಳೆ ಅಭಿವೃದ್ದಿ ಕೆಲಸಗಳನ್ನು ಮಾಡದ ಕಾರಣ ಚುನಾವಣೆ ಪ್ರಚಾರ ಸಭೆ ಗಳಲ್ಲಿ ಜನರ ವಿರೋಧ ಎದುರಿಸುತ್ತಿದ್ದಾರೆ ಕೆಲ ಗ್ರಾಮಗಳಲ್ಲಿ ಪ್ರತಾಪಗೌಡರಿಗೆ ಮಾತನಾಡಲು ಬಿಡುತ್ತಿಲ್ಲ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಪರ ಅನುಕಂಪದ ಅಲೆ ಎದ್ದಿದೆ ಎಂದು ಧ್ರುವ ನಾರಯಣ ಹೇಳಿದರು ವಿಧಾನ ಪರಿಷತ್ ಮಾಜಿ ಸದಸ್ಯ ಶರಣಪ್ಪ ಮಟ್ಟೂರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿವಿ. ನಾಯಕ, ಜಿಪಂ. ಮಾಜಿ ಸದಸ್ಯ ಎಚ್ ಬಿ. ಮುರಾರಿ ಇದ್ದರು.