ವಿಜಯಾನಂದ ಟ್ರೈಲರ್  ಬಿಡುಗಡೆ

* ಚಿ.ಗೋ ರಮೇಶ್

ಜೀವನಾಧರಿತ ಚಿತ್ರ “ವಿಜಯಾನಂದ” ಟ್ರೈಲರ್ ಬಿಡುಗಡೆಯಾಗಿದೆ.ಕನ್ನಡ, ತೆಲುಗು, ತಮಿಳು,ಮಲೆಯಾಳಂ ಹಾಗು ಹಿಂದಿ ಭಾಷೆಯಲ್ಲಿ ಮುಂದಿನ ತಿಂಗಳು ತೆರೆಗೆ ಬರಲಿದೆ. ಟ್ರೈಲರ್ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಜಯ್ ಸಂಕೇಶ್ವರ್ ಯಾರು ಮಾಡಬೇಡಿ ಅನ್ನುತ್ತಾರೋ ಅದನ್ನು ಮಾಡುವ ವ್ಯಕ್ತಿತ್ವದವರು.ಈ ಚಿತ್ರ ಯಾವುದೇ ಸಿನಿಮಾಗೆ ಕಡಿಮೆ ಇಲ್ಲ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.

ವಿಜಯ್ ಸಂಕೇಶ್ವರ್ ಮಾತನಾಡಿ, ಒಮ್ಮೆ ನಿರ್ದೇಶಕಿ ರಿಷಿಕಾ ಶರ್ಮಾ ನಿಮ್ಮ ಸಿನಿಮಾ ಮಾಡಬೇಕು ಅಂದುಕೊಂಡಿದ್ದೇನೆ ಅನುಮತಿ ನೀಡಿ.ನಿಮ್ಮ ಸಾಧನೆ ಇತರಿಗೆ ಸ್ಪೂರ್ತಿ ಹಲವು ವರ್ಷಗಳಿಂದ ನಿಮ್ಮನ್ನು ಗಮನಿಸಿದ್ದೇನೆ ಎಂದರು. ಕಥೆ ಕೇಳಿ ಪುತ್ರ ಆನಂದ್ ನಿರ್ಮಾಣ ಮಾಡಲು ಮುಂದಾದರು ಎನ್ನುವ ಮಾಹಿತಿ ನೀಡಿದರು.

ಮಕ್ಕಳಿಗೆ ಶಿಕ್ಷಣ ಮುಖ್ಯ. ಒಳ್ಳೆಯ ಶಿಕ್ಷಣ ಕೊಡಿಸಿ ಜೀವನ ಪ್ರತಿಯೊಂದು ಕ್ಷಣದ ಬಗ್ಗೆ ಅವರಿಗೆ ಮಾಹಿತಿ ಕೊಟ್ಟು ಈಗಿನಿಂದಲೇ ಸಜ್ಜುಗೊಳಿಸಬೇಕು ಎಂದರು. ರಾಷ್ಟ್ರೀಯ ಹಿತಾಸಕ್ತಿ ಕುರಿತು ಚಿತ್ರ ಮಾಡಲು ಮಗನಿಗೆ ಹೇಳಿದ್ದೇನೆ .ಹಳೆಯದನ್ನು ಬೇರುಗಳನ್ನು ಸ್ನೇಹಿತರು, ಕುಟುಂದದೊಂದಿಗೆ ಬೆರೆಯುವುದನ್ನು ಮರೆಯಬೇಡಿ ಎಂದು ಸಲಹೆ ನೀಡಿದರು.

ನಿರ್ಮಾಪಕ ಆನಂದ್ ಸಂಕೇಶ್ವರ್, ನನ್ನಪ್ಪ ನನಗೆ ನಿಜವಾದ ನಾಯಕ ಎಂದು ತಂದೆ ಮೇಲಿನ ಪ್ರೀತಿ ತೋರಿದರು.

ನಾಯಕ ನಿಹಾಲ್ ಮಾತನಾಡಿ ಮೂರು ವರ್ಷದ ಕಠಿಣ ಶ್ರಮ ಇಲ್ಲಿದೆ. ಚಿತ್ರ ಚೆನ್ನಾಗಿ ಬಂದಿದೆ ಸಹಕಾರವಿರಲಿ ಎಂದರೆ ನಿರ್ದೇಶಕಿ ರಿಷಿಕಾ ಶರ್ಮಾ ಚಿತ್ರ ಎಲ್ಲರಿಗೂ ಕನೆಕ್ಟ್ ಆಗಲಿದೆ. ನಿರ್ಮಾಣ ಮಾಡಲು ಅವಕಾಶ ಮಾಡಿಕೊಟ್ಟ ಆನಂದ್ ಸಂಕೇಶ್ವರ್ ಮತ್ತವರ ಕುಟುಂಬಕ್ಕೆ ಚಿರಋಣಿ ಮುಂದಿನ ತಿಂಗಳು 9ರಂದು ಚಿತ್ರ ತೆರೆಗೆ ಬರಲಿದೆ ಎಂದರು.

ಕಲಾವಿದರಾದ ವಿನಯ್ ಪ್ರಸಾದ್, ಭರತ್ ಬೋಪಣ್ಣ, ಸಿರಿ ಪ್ರಹ್ಲಾದ್ ಮಾಹಿತಿ ಹಂಚಿಕೊಂಡರು.