ವಿಜಯಲಕ್ಷ್ಮೀ ಫೌಂಡೇಶನ್ ನಿಂದ ಯಶಸ್ವಿಯಾಗಿ ನಡೆದ ರಕ್ತದಾನಶಿಬಿರ 

ಹುಬ್ಬಳ್ಳಿ.ಜ.17; ವಿಜಯಲಕ್ಷ್ಮೀ ಫೌಂಡೇಶನ್, ಹುಬ್ಬಳ್ಳಿ ಹಾಗೂ ಡಾ. ರಾಮಚಂದ್ರ ಕಾರಟಗಿ ಅಭಿಮಾನಿಗಳ ಸಂಘ ಸಹಯೋಗದಲ್ಲಿ   ಹುಬ್ಬಳ್ಳಿಯ ನೇತಾಜಿ ಕಾಲೋನಿಯಲ್ಲಿರುವ ಕಾರಟಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಯಶಸ್ವಿಯಾಗಿ ಜರುಗಿತು.ಈ ಶಿಬಿರವನ್ನು ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟೋತ್ಥಾನ ರಕ್ತಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿತ್ತು.ಶಿಬಿರದಲ್ಲಿ ಸುಮಾರು 50 ಹೆಚ್ಚು ಜನರು ರಕ್ತದಾನದ ಮಹತ್ವದ ಕಾರ್ಯದಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಕಾರಟಗಿ ಆಸ್ಪತ್ರೆಯ ಸಂಸ್ಥಾಪಕರಾದ ಡಾ.ರಾಮಚಂದ್ರ ಕಾರಟಗಿಯವರ ಜನ್ಮದಿನವನ್ನು ಆಚರಿಸಲಾಯಿತು.ಈ ವೇಳೆ‌ರಾಷ್ಟ್ರೋತ್ಥಾನ ರಕ್ತಕೇಂದ್ರದ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ,ಕಿರಣ್ ಗಡ್,ಶ್ರೇಯ ಜನಸೇವಾ ಫೌಂಡೇಶನ್ ನ ವಿ.ಜಿ ಪಾಟೀಲ್,ಕಿಮ್ಸ್ ಆಸ್ಪತ್ರೆಯ ವೈದ್ಯರಾದ ಡಾ.ವೀಣಾ ಕಾರಟಗಿ,ಕನಕದಾಸ  ಶಿಕ್ಷಣ ಸಂಸ್ಥೆಯ ಶಾಂತಣ್ಣ ಕಡಿವಾಳ್, ಗೋಕುಲ್ ರಸ್ತೆಯ ಪೋಲಿಸ್ ಇನ್ಸ್ ಪೆಕ್ಟರ್ ಕಾಲಿಮಿರ್ಚಿ, ,ರೇಷ್ಮಾ ಫರ್ನಾಂಡಿಸ್,ಕಾರಟಗಿ ಆಸ್ಪತ್ರೆಯ ಆಡಳಿತಾಧಿಕಾರಿ ದಿನೇಶ್ ಜೈನ್  ಹಾಗೂ ಸಿಬ್ಬಂದಿ ವರ್ಗದವರು‌ ಉಪಸ್ಥಿತರಿದ್ದರು.