ವಿಜಯಲಕ್ಷ್ಮಿ ವರ್ಗಾವಣೆಗೆ ಜೆಡಿಎಸ್ ಮುಖಂಡರು ಸಚಿವರಿಗೆ ಮನವಿ

ಲಿಂಗಸುಗೂರು.ಜೂ.೦೪-ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ರವರು ಕೋವಿಡ್ ಹೆಸರಿನಲ್ಲಿ ವಾರ್ಡ್ ಗಳಲ್ಲಿ ಸ್ವಚ್ಚತೆ ಇಲ್ಲದೆ ಇರುವುದು ಕಂಡುಬಂದಿದೆ ಇದರಿಂದಾಗಿ ಪಟ್ಟಣದ ತುಂಬೆಲ್ಲ ಕಲುಷಿತಗೊಂಡ ವಾತಾವರಣ ನಿರ್ಮಾಣವಾಗಿದೆ ಪುರಸಭೆ ಸ್ಥಳೀಯ ಸರ್ವಾಧಿಕಾರ ರಿತಿಯಲ್ಲಿ ವರ್ತನೆ ಮಾಡುವ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ವಿರುದ್ಧ ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವ ಡಿಸಿಎಂ ಲಕ್ಷ್ಮಣ ಸವದಿ ಇವರಿಗೆ ಜೆಡಿಎಸ್ ಪಕ್ಷದ ನಿಯೋಗ ಮುಖ್ಯಾಧಿಕಾರಿ ವರ್ಗಾವಣೆ ಮಾಡಲು ಜೆಡಿಎಸ್ ಮುಖಂಡರು ಮನವಿ ಸಲ್ಲಿಸಿದರು
ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ರವರು ಈ ಹಿಂದೆ ಸಮುದಾಯ ಸಂಘಟನೆ ಅಧಿಕಾರಿಗಳಾಗಿ ಕರ್ತವ್ಯವನ್ನು ನಿರ್ವಹಣೆ ಮಾಡಿದ್ದಾರೆ ಆದರೆ ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ಹುದ್ದೆ ಅಲಂಕರಿಸಿದ್ದಾರೆ.
ಈ ಮುಖ್ಯಾಧಿಕಾರಿಗಳು ಸಾರ್ವಜನಿಕರಿಗೆ ಸದಸ್ಯರಿಗೆ ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಮ್ಮ ಮನಸ್ಸಿಗೆ ಬಂದಂತೆ ಈ ಮಹಿಳಾ ಅದಿಕಾರಿ ವರ್ತನೆ ಮಾಡುತ್ತಿದ್ದಾರೆ ಹಾಗೂ ಈ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ವಿರುದ್ಧ ಸಿರುಗುಪ್ಪ ಪುರಸಭೆ ಕಚೇರಿಯಲ್ಲಿ ಲೋಕಾಯುಕ್ತ ದೂರು ದಾಖಲಾಗಿದೆ ಮತ್ತು ಮಾನ್ವಿ ತಾಲೂಕಿನ ಪುರಸಭೆ ಕಚೇರಿಯಲ್ಲಿ ಭ್ರಷ್ಟಾಚಾರ ಮಾಡಿದ ಆರೋಪವೂ ಕೂಡ ಇದೆ ಆದರೂ ಇಷ್ಟೇಲ್ಲಾ ಆರೋಪ ಇದ್ದರು ಕೂಡ ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ಇವರು ರಾಜಕೀಯ ಪ್ರಭಾವ ಬಳಸಿಕೊಂಡು ತಮ್ಮ ಅಕ್ರಮ ಅವ್ಯವಹಾರ ಮುಚ್ಚಿ ಹಾಕಲು ಸ್ಥಳೀಯ ರಾಜಕೀಯ ನಾಯಕರ ಬೆಂಬಲ ಪಡೆದು ಅಕ್ರಮ ಚಟುವಟಿಕೆ ನಡೆಸಿದ್ದಾರೆ ಕೂಡಲೇ ಇಂತಹ ಅಧಿಕಾರಿಗಳನ್ನು ಅಮಾನತು ಮಾಡಿ ಅಥವಾ ವರ್ಗಾವಣೆ ಮಾಡಿ ಆದೇಶ ಹೋರಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಿಸಿಎಂ ಲಕ್ಷ್ಮಣ್ ಸವದಿ ಅವರಿಗೆ ಒತ್ತಾಯಿಸಿದರು ಸಚಿವರು ಭರವಸೆ ನೀಡಿ ಸ್ಥಳದಲ್ಲಿ ಇದ್ದ ಲಿಂಗಸುಗೂರು ತಾಲ್ಲೂಕಿನ ಸಾಹಾಯಕ ಆಯುಕ್ತರಾದ ರಾಜಶೇಖರ ಡಂಬಳ ಇವರಿಗೆ ಜೆಡಿಎಸ್ ಪಕ್ಷದ ಮುಖಂಡರು ಸಲ್ಲಿಸಿದ ಮನವಿ ಪರಿಸಿಲಿಸಿ ಶಿಘಗ್ರದಲ್ಲಿ ವರದಿ ಸಲ್ಲಿಸುವಂತೆ ಸಚಿವರು ಸಾಹಾಯಕ ಆಯುಕ್ತರಾದ ರಾಜಶೇಖರ ಡಂಬಳರಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಸಿದ್ಧು ಬಂಡಿ ತಾಲೂಕು ಅಧ್ಯಕ್ಷ ನಾಗಭೂಷಣ ಯುವ ಘಟಕದ ಅಧ್ಯಕ್ಷ ಇಮಿತಿಯಾಜ ಪಾಶ ಸಿದ್ಧು ಬಡಿಗೇರ ಯಮನೂರ ಬೋವಿ ಪರುಶುರಾಮ ಕೆಂಭಾವಿ ಜಂಬಣ್ಣ ದೊಡ್ಡಮನಿ ಸೇರಿದಂತೆ ಇತರರು ಜೆಡಿಎಸ್ ಮುಖಂಡರು ಇದ್ದರು.