ವಿಜಯರಾಘವರೆಡ್ಡಿ ಕೆಹೆಚ್‌ಎಂಗೆ ಅಭಿನಂದನೆ

ಕೆಜಿಎಫ್,ಮೇ,೧೫:ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಮಾಜಿ ಸಚಿವ ಕೆ.ಎಚ್.ಮುನಿಯಪ್ಪರನ್ನು ಕೆಜಿಎಫ್ ತಾಲೂಕಿನ ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯರಾಘವರೆಡ್ಡಿ ದೇವನಹಳ್ಳಿ ತಾಲೂಕಿನ ಶಾಸಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಅಭಿನಂದಿಸಿದರು.
ಬೆಂಗಳೂರಿನ ನಿವಾಸದಲ್ಲಿ ಅಭಿನಂದಿಸಿ ಮಾತನಾಡಿ, ಕೋಲಾರ ಜಿಲ್ಲೆಯ ೭ ಬಾರಿ ಸಂಸದರು, ಸಚಿವರಾಗಿ ಅನೇಕ ಜನಪರ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೆಜಿಎಫ್ ತಾಲೂಕಿಗೆ ಅವರ ಕೊಡುಗೆ ಅನನ್ಯವಾದದ್ದು ಎಂದರು.
ಕೆಜಿಎಫ್ ತಾಲೂಕಿನ ಕೆ.ಎಚ್.ಪುತ್ರಿ ರೂಪಶಶಿಧರ್ ದಾಖಲೆ ಮತಗಳಿಂದ ಜಯಗಳಿಸಿದ ಹಿನ್ನಲೆಯಲ್ಲಿ ರಾಜಕೀಯ ಗೆಲವಿನ ಲೆಕ್ಕಾರಗಳ ಕುರಿತು ವಿವರಿಸಿದರು.
ಮಾಜಿ ಜಿಲ್ಲಾಪಂ, ಉಪಾಧ್ಯಕ್ಷರಾದ ಅಪ್ಪಿ ವೆಂಕಟರಾಮರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ೪ ತಾಲೂಕುಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಆಯ್ಕೆಯಾಗಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವು ಇನ್ನಷ್ಟು ಗಟ್ಟಿಗೊಂಡಿರುವುದಾಗಿ ಕೆಎಚ್.ಮುನಿಯಪ್ಪರಿಗೆ ತಿಳಿಸಿ, ನೂತನ ಸರಕಾರದಲ್ಲಿ ಅಪ್ಪ ಮತ್ತು ಮಗಳಿಗೆ ಇಬ್ಬರಿಗೂ ಸಚಿವ ಸ್ಥಾನ ಸಿಗಬೇಕೆಂದು ಇಂಗಿತವನ್ನು ಅಪ್ಪಿವೆಂಕಟರಾಮರೆಡ್ಡಿ ವ್ಯಕ್ತಪಡಿಸಿದರು. ಎಪಿಎಂಸಿ ಸದಸ್ಯ ಶ್ರೀನಿವಾಸರೆಡ್ಡಿ, ವಕೀಲ ಪದ್ಮನಾಭರೆಡ್ಡಿ ಇದ್ದರು.