ವಿಜಯಮ್ಮ ಕುಟುಂಬಕ್ಕೆ ಜನಾಶ್ರಯ ಟ್ರಸ್ಟ್‍ನಿಂದ ಆರ್ಥಿಕ ನೆರವು

ಹನೂರು, ನ.6: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟ ಗ್ರಾ.ಪಂ. ವ್ಯಾಪ್ತಿಯ ಪುದುರು ಗ್ರಾಮದ ನಿವಾಸಿ ವಿಜಯಮ್ಮ ಇತ್ತೀಚಿಗೆ ನಿಧನ ಹೊಂದಿದ ಹಿನ್ನಲೆಯಲ್ಲಿ ಅವರ ಕುಟುಂಬಕ್ಕೆ ಜನಾಶ್ರಯ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷ ಜನಧ್ವನಿ ಬಿ.ವೆಂಕಟೇಶ್ ಅವರ ಅಭಿಮಾನಿಗಳ ಮುಖೇನಾ ಆರ್ಥಿಕ ನೆರವನ್ನು ನೀಡಿ ಸಾಂತ್ವನ ತಿಳಿಸಿದ್ದಾರೆ.
ಈ ಬಗ್ಗೆ ಬಿ.ವೆಂಕಟೇಶ್ ಅಭಿಮಾನಿಯಾದ ಜಯಂತ್ ಮಾತನಾಡಿ, ಮನೆಯ ಜವಬ್ದಾರಿ ಹೊತ್ತು ಜೀವನ ಸಾಗಿಸುತ್ತಿದ್ದ ವಿಜಯಮ್ಮ ನಿಧನರಾಗಿರುವುದರಿಂದ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ. ಈ ವಿಚಾರವನ್ನು ಬಿ.ವೆಂಕಟೇಶ್‍ರವರು ತಿಳಿದು ಬಡ ಕುಟುಂಬಕ್ಕೆ ಆರ್ಥಿಕ ನೆರವನ್ನು ನಮ್ಮ ಮೂಲಕ ತಲುಪಿಸಲು ತಿಳಿಸಿದ ಹಿನ್ನಲೆಯಲ್ಲಿ ನಾವುಗಳು ಆರ್ಥಿಕ ನೆರವನ್ನು ನೀಡಿದ್ದೇವೆ. ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಿರುವ ಜನಧ್ವನಿ ಬಿ.ವೆಂಕಟೇಶ್ ಅಣ್ಣನವರಿಗೆ ಅಭಿನಂದನೆಗಳನ್ನು ಗ್ರಾಮಸ್ಥರ ಪರವಾಗಿ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜನಾಶ್ರಯ ಟ್ರಸ್ಟ್‍ನ ಪದಾಧಿಕಾರಿಗಳು, ಬಿ.ವೆಂಕಟೇಶ್ ಅಭಿಮಾನಿಗಳು ಗ್ರಾಮಸ್ಥರು ಇದ್ದರು.