ವಿಜಯಪುರÀದಲ್ಲಿ ಸೈಕ್ಲಿಸ್ಟ್ ಗಳಿಗಾಗಿಯೇ ಸಿದ್ಧವಾಗಲಿದೆ ಪ್ರತ್ಯೇಕ ಸೈಕ್ಲಿಂಗ್ ಟ್ರ್ಯಾಕ್

ವಿಜಯಪುರ,ಎ.5-ನಗರದ ಗೊಳಗುಮ್ಮಟದಿಂದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದವರೆಗೆ 13+13 ಒಟ್ಟು 26 ಕಿ.ಮೀ ಪ್ರತ್ಯೇಕ ಸೈಕ್ಲಿಂಗ್ ಟ್ರ್ಯಾಕ್ ನಿರ್ಮಾಣ ಮಾಡುವ ಯೋಜನೆ ಸಿದ್ಧವಾಗಿದೆ, ಸೈಕ್ಲಿಸ್ಟ್ ಗಳಿಗೆ ಇದು ಸಂತೋಷದ ವಿಷಯವಾಗಿದೆ ಎಂದು ಶಾಸಕರಾದ ಶ್ರೀ ಬಸನಗೌಡ ರಾ ಪಾಟೀಲ ಯತ್ನಾಳ ಎಂದು ಹೇಳಿದರು.
ನಗರದ ಸೋಲಾಪುರ ರಸ್ತೆಯ ಎನ್.ಸಿ.ಸಿ. ಕಚೇರಿ ಎದುರಿನ ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾ ಶಾಲೆ/ವಸತಿ ನಿಲಯಕ್ಕೆ ಶನಿವಾರ ಭೇಟಿ ನೀಡಿ ಸೈಕ್ಲಿಂಗ್ ನಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ನಗರದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂತ್ಯೇಟಿಕ್ ಟ್ರ್ಯಾಕ್, ವಾಲಿಬಾಲ್, ಪುಟ್ ಬಾಲ್, ಬಾಸ್ಕೆಟ್ ಬಾಲ್ ಗ್ರೌಂಡ್ ಸೇರಿದಂತೆ ವಿವಿಧ ಕ್ರೀಡೆಗೆ ಅನಕೂಲವಾಗುವಂತೆ ಅತ್ಯಂತ ಗುಣಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಜಿಲ್ಲೆಯ ಕ್ರೀಡಾ ಪಟುಗಳು ಇದರ ಸದುಪಯೋಗ ಪಡೆಸಿಕೊಂಡು ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ, ಅತ್ಯತ್ತಮ ಸಾಧಕರಾಗಿ ಹೊರಹೊಮ್ಮಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿ.ಡಿ ಅಧ್ಯಕ್ಷರಾದ ಶ್ರೀ ಶ್ರೀಹರಿ ಗೋಳಸಂಗಿ, ಸದಸ್ಯರಾದ ಶ್ರೀ ಲಕ್ಷ್ಮಣ ಜಾಧವ್, ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಹರ್ಷ ಶೆಟ್ಟಿ, ವಿ.ಡಿ.ಎ.ಆಯುಕ್ತರಾದ ಶ್ರೀ ಸುರೇಶಕುಮಾರ ಆಜೂರ, ಶ್ರೀ ಚಂದ್ರು ಚೌಧರಿ, ಶ್ರೀ ರಾಹುಲ್ ಜಾಧವ್, ವಿಜಯಪುರ ಜಿಲ್ಲಾ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷರಾದ ಶ್ರೀ ರಾಜು ಬಿರಾದಾರ, ಜಿಲ್ಲಾ ಕ್ರೀಡಾಂಗಣ ಸಮಿತಿ ನಾಮ ನಿರ್ದೇಶಿತ ಸದಸ್ಯರಾದ ಶ್ರೀ ಬಸವರಾಜ ಗೊಳಸಂಗಿ, ಶ್ರೀ ಪ್ರಶಾಂತ ಹಜೇರಿ, ಶ್ರೀ ಭೀಮಸೇನ ಕೋಕರೆ, ಶ್ರೀ ರಾಚಪ್ಪ ಬಿರಾದಾರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀ ಎಸ್.ಜಿ. ಲೋಣಿ, ವಕೀಲರಾದ ಶ್ರೀ ಸೂರ್ಯವಂಶಿ, ಶ್ರೀ ರಾಜಶೇಖರ ಭಜಂತ್ರಿ, ಶ್ರೀ ನಾಗರಾಜ ಮುಳವಾಡ ಸೇರಿದಂತೆ ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯ ಪದಾಧಿಕಾರಿಗಳು, ಕ್ರೀಡಾಭಿಮಾನಿಗಳು, ಇಲಾಖೆಯ ತರಬೇತಿದಾರರು, ವಿದ್ಯಾರ್ಥಿಗಳು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು