ವಿಜಯಪುರ: ಸಿಡಿಲಿಗೆ ಇಬ್ಬರು ಬಲಿ

ವಿಜಯಪುರ, ಏ.12:ಸಿಡಿಲು ಬಡಿದು ಓರ್ವ ಬಾಲಕ ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಪ್ರತ್ಯೇಕ ಕಡೆ ಸಂಭವಿಸಿದೆ.
ಇಂಡಿ ಪಟ್ಟಣದ ಬೀರಪ್ಪ ನಿಂಗಪ್ಪ ಅವರಾದಿ (15), ಮಸಳಿ ಬಿಕೆ ಗ್ರಾಮದ ಸೋಮಶೇಖರ ಕಾಶಿನಾಥ ಪಟ್ಟಣಶೆಟ್ಟಿ (45) ಮೃತಪಟ್ಟ ನತದೃಷ್ಟರು.
ಇಂಡಿ ಪಟ್ಟಣದ ಬಾಲಕ ಗುರುವಾರ ಸಂಜೆ ಮಳೆ ಬರುವ ವೇಳೆ ಇಂಡಿ ಪಟ್ಟಣದಲ್ಲಿಯೇ ಆತನ ಮೇಲೆ ಸಿಡಿಲು ಬಿದ್ದು ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ.
ಮಸಳಿ ಬಿಕೆ ಗ್ರಾಮದಲ್ಲಿ ಜಮೀನಿನಲ್ಲಿದ್ದ ಸೋಮಶೇಖರ ಅವರಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.