ವಿಜಯಪುರ ಸಮಗ್ರ ಅಭಿವೃದ್ಧಿಗೆ ವಾರ್ಡ್ ಸಮಿತಿ ರಚಿಸಿ: ನ್ಯಾಯವಾದಿ ದಾನೇಶ ಅವಟಿ

ವಿಜಯಪುರ:ಜ.11: ಐತಿಹಾಸಿಕ ವಿಜಯಪುರ ನಗರ ಸಮಗ್ರ ಅಭಿವೃದ್ಧಿಗೆ ಮಹಾನಗರ ಪಾಲಿಕೆಯ ವತಿಯಿಂದ ಪ್ರತಿ ವಾರ್ಡಿನಲ್ಲಿ ನಿಯಮಾನುಸಾರ ಕೂಡಲೇ ನಾಗರಿಕರ ವಾರ್ಡ್ ಸಮಿತಿ ರಚಿಸಿ ಎಂದು ನ್ಯಾಯವಾದಿ ದಾನೇಶ ಅವಟಿ ಆಗ್ರಹಿಸಿದರು.
ದಿನಾಂಕ 10-01-2023 ರಂದು ನಡೆದ ಮಹಾನಗರ ಪಾಲಿಕೆಯ ಬಜೆಟ್ ಪೂರ್ವ ಸಾರ್ವಜನಿಕ ಸಭೆಯಲ್ಲಿ ಮನವಿ ಅರ್ಪಿಸಿ ಮಾತನಾಡಿದ ಅವರು ಕೆ.ಎಂ.ಸಿ. ಕಾಯ್ದೆ ಮತ್ತು ರಾಜ್ಯಸರ್ಕಾರ ನಿರ್ದೇಶನದಂತೆ ಮಹಾನಗರ ಪಾಲಿಕೆಯ ವತಿಯಿಂದ ಶಾಸನಾತ್ಮಕ. ಸಂವಿಧನಾತ್ಮಕ ಮತ್ತು ಕಡ್ಡಾಯವಾಗಿ ನಗರ ಅಭವೃದ್ಧಿಗೆ ಪ್ರತಿ ವಾರ್ಡಿನಲ್ಲಿ ನಾಗರಿಕ ವಾರ್ಡ್ ಸಮಿತಿ ಅತ್ಯವಶ್ಯಕವಾಗಿದೆ. ಆದ ಕಾರಣ ವಿಜಯಪುರ ಮಹಾನಗರ ಪಾಲಿಕೆ ಮಾನ್ಯ ಆಯುಕ್ತರು ನಾಗರಿಕರ ಶಾಸನಾತ್ಮಕ ಹಕ್ಕನ್ನು ಸಂರಕ್ಷಿಸಲು ಅಧಿಸೂಚನೆ ಹೊರಡಿಸಿ.ವಾರ್ಡ್ ಸಮಿತಿ ಸದಸ್ಯರಾಗಲು ಅರ್ಜಿಗಳನ್ನು ಆಹ್ವಾನಿಸಿ ಸದಸ್ಯರನ್ನು ಆಯ್ಕೆ ಮಾಡಬೇಕೆಂದು ಸಮಸ್ತ ನಾಗರಿಕರ ಪರವಾಗಿ ಒತ್ತಾಯಿಸಿದರು.
ನ್ಯಾಯವಾದಿ ಬಾಬು ಹಿಪ್ಪರಗಿ ಮಾತನಾಡಿ ಈಗಾಗಲೇ ಬೃಹತ್ ಬೆಂಗಳೂರು.ಮಂಗಳೂರು. ಬಳ್ಳಾರಿ. ಕಲಬುರ್ಗಿ. ಶಿವಮೊಗ್ಗ. ಹುಬ್ಬಳ್ಳಿ ಧಾರವಾಡ ಮುಂತಾದ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಯುಕ್ತರು ನಾಗರಿಕರನ್ನು ಒಳಗೊಂಡ ವಾರ್ಡ್ ಸಮಿತಿಗಳನ್ನು ಆರ್ಜಿ ಆಹ್ವಾನಿಸಿ ಕ್ರಮ ಜರುಗಿಸಿ ಸಮಿತಿ ರಚಿಸಿರುವದು ಸ್ವಾಗತಾರ್ಹವಾಗಿದೆ ಎಂದರು.
ಬೆಂಗಳೂರು ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಎಂ.ಎನ್. ದೇಶಪಾಂಡೆ ಮಾತನಾಡಿ ಬ್ರಹತ್ ಬೆಂಗಳೂರು ನಗರದಲ್ಲಿ ಪ್ರತಿ ವಾರ್ಡಿನಲ್ಲಿ ನಾಗರಿಕ ವಾರ್ಡ್ ಸಮಿತಿಗಳು ಅತ್ಯಂತ ಕ್ರಿಯಾಶೀಲವಾಗಿ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಮಹಾನಗರಪಾಲಿಕೆ ಮತ್ತು ಪಾಲಿಕೆ ಸದಸ್ಯರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿವೆ.ಈ ಯೋಜನೆ ಅತ್ಯಂತ ಜನೋಪಯೋಗಿ ಆಗಿದ್ದು. ಸರ್ಕಾರದ ಯೋಜನೆಯ ಅನುಷ್ಠಾನದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಅತ್ಯಂತ ಅವಶ್ಯವಾಗಿದೆ. ವಿಜಯಪುರದಲ್ಲಿ ಕೂಡ ಈ ಯೋಜನೆ ಅನುಷ್ಠಾನಗೊಳಿಸಲು ಎಲ್ಲರೂ ಸಹಕರಿಸಿ ಮಾದರಿ ಮಹಾನಗರವಾಗಲು ಸಹಕರಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ವಿಜಯಕುಮಾರ ಅಲಗುಂಡಿ, ಎಂ.ಎನ್. ಕುಲಕರ್ಣಿ. ಮಹಾನಗರ ಪಾಲಿಕೆ ಹಿರಿಯ ಲೆಕ್ಕಾಧಿಕಾರಿ ಎಂ.ಎಸ್. ದೊಡ್ಡಮನಿ ಮತ್ತು ಅನೇಕ ಜನ ಪಾಲಿಕೆಯ ಸದಸ್ಯರು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹಾನಗರ ಪಾಲಿಕೆಯ ಉಪಆಯುಕ್ತ ಎಸ್.ಎ.ಮಹಾಜನ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಮಯದಲ್ಲಿ ಮುಖ್ಯ ಅತಿಥಗಳಾಗಿ ಎಂ.ಸಿ.ಮುಲ್ಲಾ (ಕರವೇ ಜಿಲ್ಲಾದ್ಯಕ್ಷ), ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಸಯ್ಯದ ನಿಡೋಣಿ, ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷರಾದ ಯಾಕೂಬ ಕೂಪರ, ದಸ್ತರ ಸಾಲೋಟಗಿ (ಜೆಡಿಎಸ್ ಧುರೀಣರ), ಡಾ. ಶಮಶದ ಅಲಿ ಮುಲ್ಲಾ, ಗೊಣಸಂಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಮೆಹಬೂಬ ಜತ್ತಿ, ಶಿವಣಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ರಿಯಾಜ ಅಹ್ಮದ ಚಟ್ಟರಕಿ, ಇನ್ನಿತರರು ಇದ್ದರು.