ವಿಜಯಪುರ ಸಂಕ್ರಮಣ ಜಾತ್ರೆ: ನಂದಿಕೋಲ ಪೂಜೆ, ಮೆರವಣಿಗೆ

ಸಂಜೆವಾಣಿ ವಾರ್ತೆ,
ವಿಜಯಪುರ,ಜ.14:ಶ್ರೀ ಸಿದ್ಧೇಶ್ವರ ಸಂಕ್ರಮಣದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಸಿದ್ಧೇಶ್ವರ ದೇವಾಲಯದಲ್ಲಿ ನಮ್ಮೂರ ಜಾತ್ರೆಯ ನಂದಿಕೊಲ ಪೂಜೆಗಳನ್ನು ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ, ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ), ಪದಾಧಿಕಾರಿಗಳು ಮತ್ತು ಜಾತ್ರಾ ಸಮಿತಿಯ ಸದಸ್ಯರು ಹಾಗೂ ಭಕ್ತಾಧಿಗಳು ಸೇರಿ ನಂದಿಕೋಲಗಳಿಗೆ ವಿಶೇಷ ಪೂಜೆ ಮಾಡಿದರು.
ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಗಣಪತಿ ಚೌಕ, ಗಾಂಧಿ ಚೌಕ, ಕಿರಾಣಿ ಬಜಾರ, ಸರಾಫ ಬಜಾರ, 770 ಲಿಂಗದ ದೇವಾಲಯಗಳಿಗೆ ಹಾಗೂ ಶ್ರೀ ನೀಲಕಂಠೇಶ್ವರ ದೇವಾಲಯಕ್ಕ ಹೋಗಿ ಪೂಜೆ ಸಲ್ಲಿಸಿ ಮರಳಿ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ನಂದಿಕೋಲ ಉತ್ಸವ ತಲುಪಿತು.
ಈ ಉತ್ಸವದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸಂಗು ಸಜ್ಜನ, ಚೇರಮನ್ ಬಸಯ್ಯ ಹಿರೇಮಠ, ಕಾರ್ಯದರ್ಶಿಗಳಾದ ಸದಾನಂದ ದೇಸಾಯಿ, ಬಿ.ಎಸ್. ಸುಗೂರ, ಜಂಟಿ ಕಾರ್ಯದರ್ಶಿ ಎಂ.ಎಂ. ಸಜ್ಜನ, ಕೋಶ್ಯಾಧ್ಯಕ್ಷ ಶಿವಾನಂದ ನೀಲಾ, ಜಾತ್ರಾ ಸಮಿತಿಯ ಗುರು ಗಚ್ಚಿನಮಠ, ಅಮೃತ ತೋಸ್ನಿವಾಲ್, ಎಸ್. ಎಮ್. ಪಾಟೀಲ, ರಾಹುಲ್ ಜಾಧವ, ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ಎಸ್.ಸಿ. ಉಪ್ಪಿನ, ಸದಾಶಿವ ಗುಡ್ಡೋಡಗಿ, ಸುರೇಶ ಇಟ್ಟಗಿ, ಎಸ್.ಎಚ್. ನಾಡಗೌಡ, ಎಮ್.ಎಸ್. ಕರಡಿ, ಎಮ್.ಎನ್. ಗೋಲಾಯಿ, ಬಸವರಾಜ ಗಣಿ, ಸುಧೀರ ಚಿಂಚಲಿ, ರಮೇಶ ಹಳ್ಳದ, ಸಾಯಿಬಣ್ಣ ಭೋವಿ. ಮಲಕಪ್ಪ ಗಾಣಿಗೇರ, ನಾಗಪ್ಪ ಗುಗ್ಗರಿ, ಮಹಾದೇವ ಹತ್ತಿಕಾಳ, ಬಾಗಪ್ಪ ಕನ್ನೊಳ್ಳಿ, ಸುಧೀರ ಚಿಂಚಲಿ, ಶ್ರೀಮಂತ ಜಂಬಗಿ, ಪ್ರವೀಣ ಬಿಜ್ಜರಗಿ, ರಾಜು ಮಗಿಮಠ, ಈರಣ್ಣ ಪಾಟೀಲ, ದ್ಯಾಮಗೊಂಡ ಬೆನಕನಳ್ಳಿ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಬಸವರಾಜ ಗಣಿ, ಎಸ್. ಎಮ್. ಡಿಗಾವಿ, ಲಕ್ಷ್ಮಣ ಜಾಧವ, ಆನಂದಗೌಡ ಪಾಟೀಲ, ಬಸವರಾಜ ಬಿರಾದಾರ, ಪುಟ್ಟು ಸಾವಳಗಿ ಮುಂತಾದ ಪ್ರಮುಖರು ಹಾಗೂ ಭಕ್ತಾದಿಗಳು ಹಾಜರಿದ್ದರು.
ನಂದಿಕೋಲ ಪೂಜೆಯನ್ನು ಅರ್ಚಕರಾದ ಸಿದ್ದಯ್ಯ ಹಿರೇಮಠ, ಈರಯ್ಯಾ ಹಿರೇಮಠ, ನೀಲಕಂಠಯ್ಯಾ ಪೂಜಾರಿ, ಮುರಗಯ್ಯಾ ಗಚ್ಚಿನಮಠ ನೆರವೇರಿಸಿದರು.
ಸಜೆ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳ ಕುರಿತು “ನುಡಿ ನಮನ ಕಾರ್ಯಕ್ರಮ” ಶ್ರೀ ಸಿದ್ಧೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಘನ ಅಧ್ಯಕ್ಷತೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಜಾತ್ರಾ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಸಾದ ಸೇವೆ ಪುಟ್ಟು ಸಾವಳಗಿ ಇವರಿಂದ ನೆರವೇರಿತು ಹಾಗೂ ಭಾನುವಾರ ಅಕ್ಷತಾ ಹಾಗೂ ಭೋಗಿ ಕಾರ್ಯಕ್ರಮ ಜರುಗುವುದು.