ವಿಜಯಪುರ ವಿಮಾನ ನಿಲ್ದಾಣ ದ್ವಿತೀಯ-ತೃತೀಯ ಹಂತದ ಕಾಮಗಾರಿ ಹೆಚ್ಚಿನ ಅನುದಾನಕ್ಕೆಪ್ರಯತ್ನ: ರಮೇಶ್ ಜಿಗಜಿಣಗಿ

ವಿಜಯಪುರ, ಏ.17-ನಗರ ಸಮೀಪ ಸುಮಾರು 95 ಕೋಟಿ ರೂ ವೆಚ್ಚದಲ್ಲಿ ಪ್ರಥಮ ಹಂತದ ವಿಮಾನ ನಿಲ್ಧಾಣ ಕಾಮಗಾರಿಗಳು ಭರದಿಂದ ಸಾಗಿದ್ದು, 125 ಕೋಟಿ ರೂ ವೆಚ್ಚದ ಎರಡನೇ ಹಂತದ ಹಾಗೂ 80 ರಿಂದ 90 ಕೋಟಿ ರೂ ವೆಚ್ಚದ ಮೂರನೇ ಹಂತದ ವಿಸ್ತರಣಾ ಕಾಮಗಾರಿಗಾಗಿ ಕೇಂದ್ರ ಸರ್ಕಾರ ಇಲ್ಲವೇ ರಾಜ್ಯದ ಮುಖ್ಯಮಂತ್ರಿಗಳಿಗೆ ಕೋರಲಾಗುವುದು ಎಂದು ಸಂಸದ ಶ್ರೀ ರಮೇಶ ಜಿಗಜಿಣಗಿ ಅವರು ತಿಳಿಸಿದರು.
ಜಿಲ್ಲೆಯ ಬುರಣಾಪುರ ಹಾಗೂ ಮದಭಾವಿ ಗ್ರಾಮದ ವ್ಯಾಪ್ತಿಯಲ್ಲಿ ಇಂದು ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ಕಾಮಗಾರಿಯನ್ನು ಎ.ಟಿ.ಆರ್-72 ವಿಮಾನಗಳ ಹಾರಾಟಕ್ಕಾಗಿ ನಿರ್ಮಿಸಲಾಗಿದ್ದು, ಮುಂದೆ ಅದನ್ನು ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಾದ ಲಿಂಬೆ, ದ್ರಾಕ್ಷಿ, ದಾಳಿಂಬೆ ಹಾಗೂ ಇತರೆ ಬೆಳೆಗಳ ರಫ್ತಿಗಾಗಿ ವಾಣಿಜ್ಯೋದ್ಯಮ ಏರ್‍ಬಸ್-320 ಗಳ ಹಾರಾಟಕ್ಕೂ ವಿಸ್ತರಿಸುವುದು ಅತ್ಯವಶ್ಯವಾಗಿದೆ ಹಾಗೂ ರೈತರಿಗೂ ಪೆÇ್ರೀತ್ಸಾಹಿಸಿದಂತಾಗುತ್ತದೆ ಎಂದು ಅವರು ಹೇಳಿದರು.
ವಿಮಾನ ನಿಲ್ದಾಣದ ಕಾರ್ಯಾಚರಣೆ ಗಮನದಲ್ಲಿಟ್ಟುಕೊಂಡು ಕಾಮಗಾರಿಗಳು ಶೀಘ್ರಗತಿಯಲ್ಲಿ ನಡೆಯುತ್ತಿದ್ದು, ಕಾಮಗಾರಿಗಳನ್ನು ಸಹ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ತಿಳಿಸಲಾಗಿದೆ. ಕಾಮಗಾರಿಗಳು ಸಹ ಹಗಲು-ರಾತ್ರಿವೇಳೆಯಲ್ಲಿ ನಡೆಯುತ್ತಿದ್ದು 10ತಿಂಗಳಲ್ಲಿ ಪೂರ್ಣಗೊಳ್ಳುವ ವಿಸ್ವಾಸ ಇದೆ ಎಂದು ಅವರು ಹೇಳಿದರು.
ವಿಮಾನ ನಿಲ್ದಾಣ ಅಭಿವೃದ್ಧಿಗೊಳಿಸುವ ಕನಸು ವಿಜಯಪುರ ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿದ್ದು, ಕನಸಾಗಿ ಉಳಿದಿತ್ತು. ಸುಮಾರು 95 ಕೋಟಿ ರೂ ವೆಚ್ಚದಲ್ಲಿ ಪ್ರಥಮ ಹಂತದ ಕಾಮಗಾರಿಗಳಾದ ರನ್‍ವೇ, ಟ್ಯಾಕ್ಸಿವೇ,ಏಪ್ರಾನ್ ಐಸೋಲೆಶನ್ ಬೇ, ಪಾಕಿರ್ಂಗ್, ವಿಮಾನ ನಿಲ್ಧಾಣ ಆವರಣದಲ್ಲಿ ಕೂಡು ರಸ್ತೆ ಹಾಗೂ ಒಳ ರಸ್ತೆಗಳು, ಫೆರಿಪಫೆರಲ್ ರಸ್ತೆ ಹಾಗೂ ಇತರ ಕಾಮಗಾರಿಗಳು ಭರದಿಂದ ನಡೆಯುತ್ತಿವೆ.
ಎರಡನೇ ಹಂತದ ಕಾಮಗಾರಿಗಾಗಿ ಸುಮಾರು 125 ಕೋಟಿ ರೂ ವೆಚ್ಚದಲ್ಲಿ ಟರ್ಮಿನಲ್ ಕಟ್ಟಡ, ಎ.ಟಿ.ಸಿ ಟವರ್, ಸಿ.ಎಫ್.ಆರ್ ಕಟ್ಟಡ, ಸುತ್ತಲೂ ಕಂಪೌಂಡ ಗೋಡೆ ನಿರ್ಮಾಣ, ನೀರು ಸರಬರಾಜು ಮತ್ತು ನೈರ್ಮಲ್ಯ, ಎಕ್ಸಟರನಲ್ ವಾಟರ ಸಪ್ಲೈ ಹಾಗೂ ರೇನ್ ವಾಟರ ಹಾರವೆಸ್ಟಿಂಗ್ ಮೇಲ್ಮಟ್ಟು ನೀರು ಸಂಗ್ರಹಾಲಯ, ಪಂಪ ಹೌಸ ಮತ್ತು ಕೆಳಮಟ್ಟದ ನೀರು ಸಂಗ್ರಹಾಲಯ, ಚರಂಡಿ ವ್ಯವಸ್ಥೆ, ಏರ್ ಪೆÇೀರ್ಟ್ ಸೆಕ್ಯೂರಿಟಿ ಇಕ್ಯೂಪಮೆಂಟ್, ಅಪೆÇ್ರೀಚರಸ್ತೆ ಜಿಲ್ಲಾ ಮುಖ್ಯ ರಸ್ತದಿಂದ ವಿಮಾನ ನಿಲ್ಧಾಣದ ಗಡಿಯವರೆಗೆ, ವಿದ್ಯುತ್ತೀಕರಣ, ಕೇಬಲ ಹಾಗೂ ಇತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಲೋಕೋಪಯೊಗಿ ಇಲಾಖೆ ಕಾರ್ಯನಿರ್ವಹಾಕ ಅಭಿಯಂತರ ಬಿ.ಬಿ. ಪಾಟೀಲ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್.ಕೆ.ಮುಜುಮದಾರ್, ಆಯ್ಡೆಕ್ ಟೀಮ ಲೀಡರ್ ಪ್ರಕಾಶ್, ಗೋಪಾಲ ಘಟಕಾಂಬಳೆ, ಭೀಮಾಶಂಕರ್ ಹದನೂರ್, ಚಿದಾನಂದ ಚಲುವಾದಿ, ವಿಜಯ ಜೋಶಿ, ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ಎಸ್ ಆಲೂರ, ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.