ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಅತೀ ಶೀಘ್ರವೇ ಶಂಕುಸ್ಶಾಪನೆಃ ಸತೀಶ ಭಾವಿ

ವಿಜಯಪುರ, ಜ.10-ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಅತೀ ಶೀಘ್ರವೇ ಶಂಕುಸ್ಶಾಪನೆಯಾಗಲಿದೆ ಎಂದು ವಿಮಾನ ನಿಲ್ದಾಣ ಹೋರಾಟ ಸಮಿತಿಯ ಅಧ್ಯಕ್ಷ ಸತೀಶ ವಿಶ್ವನಾಥ ಭಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಮಾನ ನಿಲ್ದಾಣ ಕಾಮಗಾರಿಗೆ ಸಂಕ್ರಾಂತಿ ಬಳಿಕ ಅತೀ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಬಿ.ಎಸ್. ಯಡಯೂರಪ್ಪನವರಿಂದ ಶಂಕುಸ್ಥಾಪನೆಯಾಗಲಿದೆ ಎಂದು ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳರವರು ನಿನ್ನೆಯ ದಿವಸ ಮುಧೋಳ ಪ್ರವಾಸಿ ಮಂದಿರದಲ್ಲಿ ನಮ್ಮ ವಿಮಾನ ನಿಲ್ದಾಣ ಹೋರಾಟ ಸಮಿತಿಯು ನಿಲ್ಧಾಣದ ಶಂಕುಸ್ಥಾಪನೆಯ ಬಗ್ಗೆ ಭೇಟಿಯಾಗಲು ಹೋದಾಗ ಈ ವಿಷಯ ತಿಳಿಸಿದರು ಎಂದು ಹೇಳಿದ್ದಾರೆ.
ಟೆಂಡರ ಕೊಡುವ ಮುಂಚೆ ಅವರ ಹಿನ್ನೆಲೆ ಹಾಗೂ ಅವರ ಸಾಮರ್ಥವನ್ನು ಸರಕಾರವು ಪರಿಶೀಲಿಸಿ ಟೆಂಡರನ್ನು ನೀಡಬೇಕು, ಟೆಂಡರ ಪಡೆದು ಅರ್ಧಕ್ಕೆ ನಿಲ್ಲುವ ಕೆಲಸ ಆಗಬಾರದು. ಯಾಕೆಂದರೆ ಕಳೆದ 10 ವರ್ಷದ ಹಿಂದೆ ನಡೆದ ಟೆಂಡರ್ ಪ್ರಕ್ರಿಯೆ ಪುನಃ ಮರುಕಳಿಸಬಾರದು. ಇಷ್ಟು ವರ್ಷ ವಿಜಯಪುರ ಜನತೆ ವಿಮಾನ ನಿಲ್ದಾಣದಿಂದ ವಂಚಿತರಾಗಿದ್ದಾರೆ ವಿಮಾನ ನಿಲ್ದಾಣವನ್ನು ಅಧುನಿಕವಾಗಿ ಹಾಗೂ ಆಕರ್ಷಕವಾಗಿ ನಿರ್ಮಾಣವಾಗಬೇಕೆಂದು ಮನವಿ ಮಾಡಿಕೊಂಡರು.
ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳರಿಗೆ ಸಮಿತಿಯ ಅಧ್ಯಕ್ಷ ಸತೀಶ ವಿಶ್ವನಾಥ ಭಾವಿ ಹಾಗೂ ಕಾರ್ಯದರ್ಶಿ ಈರಣ್ಣ ಅಳ್ಳಗಿ ಇವರು ಸಚಿವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಈರಣ್ಣ ಅಳ್ಳಗಿ, ಸಾಗರ ಮೊಗಲಿ, ಬಸಯ್ಯ ಎಮ್ಮಿಮಠ, ಅಂಬಾದಾಸ ಜೋಶಿ, ಮಹೇಶ ಭಾವಿ, ಮಹೇಶ ಜಾಲವಾದಿ ಇನ್ನಿತರರು ಉಪಸ್ಥಿತರಿದ್ದರು.