ವಿಜಯಪುರ ಮಹಾನಗರ ಪಾಲಿಕೆಗೆ ಆಗಮಿಸಿದ ನೂತನ ಆಯುಕ್ತರಿಗೆ ಸನ್ಮಾನ

(ಸಂಜೆವಾಣಿ ವಾರ್ತೆ)
ವಿಜಯಪುರ : ಜು.11:ವಾರ್ಡ್ ನಂ. 21 ಗಣೇಶ ನಗರ ಮತ್ತು ಲಕ್ಷ್ಮೀ ನಗರ ಪ್ರಮುಖ ಮುಖಂಡರಿಂದ ನೂತನ ವಾಗಿ ವಿಜಯಪುರ ಮಹಾನಗರ ಪಾಲಿಕೆಗೆ ಆಗಮಿಸಿದ ಬದರುದಿನ ಅ. ಸೌದಾಗರ ಅವರಿಗೆ ಹೃದಯ ಪೂರ್ವಕ ಸನ್ಮಾನಿಸಿ ಶುಭ ಕೋರಲಾಯಿತು.
ವೀರಶೈವ ಲಿಂಗಾಯತ ಸೌಹಾರ್ದ ಸಹಕಾರಿ ಉಪಾದ್ಯಕ್ಷರಾದ ಚನ್ನಬಸಯ್ಯ ಹಿರೇಮಠ, ಜಿಲ್ಲಾ ಡಿ.ಎಸ್.ಎಸ್. ಸಂಘಟನಾ ಸಂಚಲಕರಾದ ಚೆನ್ನು ಕಟ್ಟಿಮನಿ, ಟಿ.ಎ.ಪಿ.ಎಮ್.ಎಸ್. ಉಪಾದ್ಯಕ್ಷರಾದ ಬಸವರಾಜ ಅಳ್ಳಿ, ಡಿ.ಎಸ್.ಎಸ್‍ಯುವ ಸಂಘಟಕ ಅರುಣ ದೊಡಮನಿ, ವಾರ್ಡ್ ನಂ. 21ರ ಯುವ ಕಾಂಗ್ರೇಶ್ ಮುಖಂಡ ಸಲೀಂ ಕಲಾದಗಿ, ಕಾಂಗ್ರೇಸ್ ಮುಖಂಡ ಅಶೋಕ ಭಜಂತ್ರಿ ಮುಂತಾದವರು ಸೇರಿ ಆಯುಕ್ತರಾದ ಬದರುದ್ದಿನ ಅವರಿಗೆ ಸ್ವಾಗತ ಕೋರಿದರು. ಹಾಗೂ ವಾರ್ಡಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಇಬ್ರಾಹಿಂಪುರ ವಾರ್ಡ್‍ನಲ್ಲಿ ಅತಿ ಕಡ ಬಡವರು ಇರುವಂತಹ ವಾಸಿಸುವ ಸ್ಥಳಗಳಿಗೆ ದಾಖಲೆಗಳಿರುವುದಿಲ್ಲ ಮಹಾನಗರ ಪಾಲಿಕೆಯಿಂದ ದಾಖಲೆ ನೀಡುವ ಬಗ್ಗೆ ಕುರಿತು ಹಾಗೂ ಕಾಮಗಾರಿ ಕೈಗೊಳ್ಳುವ ಬಗ್ಗೆ ಚರ್ಚಿಸಿದರು.
ಮನವಿ ಸ್ಪಂಧಿಸಿದ ಆಯುಕ್ತರು ಅತೀ ಶೀಘ್ರದಲ್ಲಿ ಸ್ಥಳ ಪರಿಶೀಲಿಸಿ ತಮ್ಮ ಬೇಡಿಕೆಗೆ ಸ್ಪಂಧಿಸುವೆ ಎಂದು ಭರವಸೆ ನೀಡಿದರು.