ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆಃ ಕಳ್ಳತನ ಪ್ರಕರಣಗಳ ನಾಲ್ವರು ಆರೋಪಿಗಳ ಬಂಧನ

ವಿಜಯಪುರ, ಏ.16-ಪ್ರತ್ಯೇಕ ಎರಡು ಕಳ್ಳತನ ಪ್ರಕರಣ ಭೇದಿಸಿರುವ ಗೋಲಗುಮ್ಮಟ ಪೊಲೀಸರು, ಆರೋಪಿಗಳಿಂದ 14.75 ಲಕ್ಷ ರೂ. ಮೌಲ್ಯದ ಲಾರಿ ಹಾಗೂ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮೊದಲ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆಸಾರಗಲ್ಲಿ ನಿವಾಸಿ ಮಹಿಬೂಬ ಹುಸೇನ್ ಹವಾಲ್ದಾರ ಹಾಗೂ ಬಸವೇಶ್ವರ ಕಾಲೋನಿಯ ನಿವಾಸಿ ಮೊಹಮ್ಮದ ಆಸೀಫ್ ಶೇಖ್ ಎಂಬುವರಿಂದ ಎರಡು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಬಡಿಕಮಾನ ರಸ್ತೆಯಲ್ಲಿ ಲಾರಿ ಕಳ್ಳತನವಾದ ಬಗ್ಗೆ ವರದಿಯಾಗಿತ್ತು. ರಾತ್ರಿ ಗಸ್ತು ತಿರುಗುತ್ತಿದ್ದಾಗ ಅನುಮಾನಾಸ್ಪದವಾಗಿ ಲಾರಿ ನಿಂತಿತ್ತು. ಆರೋಪಿಗಳನ್ನು ಠಾಣೆಗೆ ಕರೆ ತಂದು ವಿಚಾರಣೆಗೆ ಒಳಪಡಿಸಿದಾಗ ಲಾರಿ ಕಳ್ಳತನ ಮಾಡಿದ್ದು ಒಪ್ಪಿಕೊಂಡರು. ಇದರ ಜತೆಗೆ ಈ ಹಿಂದೆ ಕಳ್ಳತನವಾಗಿದ್ದ ಲಾರಿಯನ್ನು ಸಹ ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ ಸುಮಾರು 7.25 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿಯೂ ಸಹ ಗೋಲಗುಮ್ಮಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ಗಳು ಕಳ್ಳತನವಾದ ದೂರು ಕೇಳಿ ಬಂದಿತ್ತು. ಪೊಲೀಸರು ಗಸ್ತು ತಿರುಗುವಾಗ ಚಡಚಣದ ನಿವರಗಿ ಗ್ರಾಮದ ಗಾಂಧಿ ಸದಾಶಿವ ಎಮ್ಮೆ ಹಾಗೂ ಅದೇ ಗ್ರಾಮದ ಗಂಗಾಧರ ತುಕಾರಾಮ ಬಗಲಿಯನ್ನು ಬಂಧಿಸಿ ಅವರಿಂದ 13 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ ಸುಮಾರು 7.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಪೊಲೀಸರ ಕಾರ್ಯಕ್ಕೆ ಎಸ್ಪಿ ಅನುಪಮ್ ಅಗರವಾಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.