ವಿಜಯಪುರ, ಏ.18: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಾಮಪತ್ರ ಸಲ್ಲಿಸಲು ಮೂರನೇ ದಿನವಾದ ಏಪ್ರಿಲ್ 17ರ ಸೋಮವಾರÀದಂದು ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ 24 ಅಭ್ಯರ್ಥಿಗಳಿಂದ ಒಟ್ಟು 27 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.
26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಿಂದ 02, 27-ದೇವರಹಿಪ್ಪರಗಿ ಮತಕ್ಷೇತ್ರದಿಂದ 03, 28-ಬಸವನಬಾಗೇವಾಡಿ ಮತಕ್ಷೇತ್ರದಿಂದ 03, 29-ಬಬಲೇಶ್ವರ ಮತಕ್ಷೇತ್ರದಿಂದ 09, 30-ಬಿಜಾಪುರ ನಗರ ಮತಕ್ಷೇತ್ರದಿಂದ 03, 31-ನಾಗಠಾಣ (ಎಸ್‍ಸಿ) ಮತಕ್ಷೇತ್ರದಿಂದ 04, 32-ಇಂಡಿ ಮತಕ್ಷೇತ್ರದಿಂದ 03 ನಾಮಪತ್ರಗಳು ಸೇರಿದಂತೆ ಒಟ್ಟು 27 ನಾಮಪತ್ರಗಳು ಇಂದು ಸಲ್ಲಿಕೆಯಾಗಿವೆ. 33-ಸಿಂದಗಿ ಮತಕ್ಷೇತ್ರದಿಂದ ಇಂದು ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.
ಮುದ್ದೇಬಿಹಾಳ ಮತಕ್ಷೇತ್ರದಿಂದ ಅಮೀನಪ್ಪಗೌಡ ಪಾಟೀಲ (ಭಾರತೀಯ ಜನತಾ ಪಾರ್ಟಿ), ಅಪ್ಪಾಜಿ ಅಲಿಯಾಸ ಚನ್ನಬಸವರಾಜ ನಾಡಗೌಡ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್) ಅವರು ನಾಮಪತ್ರ ಸಲ್ಲಿಸಿದ್ದಾರೆ.
ದೇವರಹಿಪ್ಪರಗಿ ಮತಕ್ಷೇತ್ರದಿಂದ ಭೀಮನಗೌಡ (ರಾಜುಗೌಡ) ಬಸನಗೌಡ ಪಾಟೀಲ (ಜನತಾ ದಳ (ಜಾತ್ಯಾತೀತ)), ಸುಣಗಾರ ಶರಣಪ್ಪ ತಿಪ್ಪಣ್ಣ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್) ಹಾಗೂ ಸೋಮನಗೌಡ ಬಿ. ಪಾಟೀಲ (ಸಾಸನೂರ) ಭಾರತೀಯ ಜನತಾ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಬಸವನಬಾಗೇವಾಡಿ ಮತಕ್ಷೇತ್ರದಿಂದ ಶಂಕ್ರಪ್ಪ ಕಾಶಿನಾಥ ಅವಟಿ (ಉತ್ತಮ ಪ್ರಜಾಕೀಯ ಪಾರ್ಟಿ), ಲಕ್ಷ್ಮೀಬಾಯಿ ಗಂ.ಶಿವಪ್ಪ ಗುದ್ದಿ (ಪಕ್ಷೇತರ) ಹಾಗೂ ಸಂಗಪ್ಪ ಬೆಳ್ಳುಬ್ಬಿ (ಭಾರತೀಯ ಜನತಾ ಪಕ್ಷ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಬಬಲೇಶ್ವರ ಮತಕ್ಷೇತ್ರದಿಂದ ಮೋತಿರಾಂ ಧರ್ಮು ಚವ್ಹಾಣ (ಪಕ್ಷೇತರ), ವಿಜಯಕುಮಾರ ಪಾಟೀಲ (ಭಾರತೀಯ ಜನತಾ ಪಾರ್ಟಿ), ಡಾ.ಎಸ್.ಆರ್.ತಳೇವಾಡ (ಪಕ್ಷೇತರ), ಅಬ್ದುಲರಹಿಮಾನ ದುಂಡಸಿ (ಪಕ್ಷೇತರ), ಮಲ್ಲನಗೌಡ ಪಾಟೀಲ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್-2 ನಾಮಪತ್ರಗಳು), ಮಹೆಬೂಬ ಮಲಬೌಡಿ (ಪಕ್ಷೇತರ), ಸುನೀಲ ರಾಠೋಡ (ಕರ್ನಾಟಕ ರಾಷ್ಟ್ರ ಸಮಿತಿ) ಹಾಗೂ ಯಾಸೀನ ಜವಳಿ (ಪಕ್ಷೇತರ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಬಿಜಾಪುರ ನಗರ ಮತಕ್ಷೇತ್ರದಿಂದ ಮಲ್ಲಪ್ಪ ತಳವಾರ (ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಷ್ಠ)), ಅಬ್ದುಲಹಮೀದ್ ಮುಶ್ರೀಫ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್- 2 ನಾಮಪತ್ರಗಳು ) ಸಲ್ಲಿಸಿದ್ದಾರೆ.
ನಾಗಠಾಣ ಮತಕ್ಷೇತ್ರದಿಂದ ವಿಠ್ಠಲ ಕಟಕಧೋಂಡ (ರಾಷ್ಟ್ರೀಯ ಕಾಂಗ್ರೆಸ್ ಪಕ್ಷ), ಶಂಕರ ಚವ್ಹಾಣ (ಪಕ್ಷೇತರ), ದೇವಾನಂದ ಚವ್ಹಾಣ (ಜನತಾ ದಳ ಜಾತ್ಯಾತೀತ) ಹಾಗೂ ಕಲ್ಲಪ್ಪ ತೊರವಿ (ಬಹುಜನ ಸಮಾಜ ಪಕ್ಷ) ಅವರು ನಾಮಪತ್ರ ಸಲ್ಲಿಸಿದ್ದಾರೆ.
ಇಂಡಿ ಮತಕ್ಷೇತ್ರದಿಂದ ಕವಿತಾ ಎಸ್.ಕಟಕದೊಂಡ (ರಾಣಿ ಚೆನ್ನಮ್ಮ ಪಾರ್ಟಿ), ಯಶವಂತರಾಯಗೌಡ ಪಾಟೀಲ (ಇಂಡಿಯನ್ ನ್ಯಾಶನಲ್ ಕಾಂಗ್ರೆಸ್- 2 ನಾಮಪತ್ರಗಳು) ಅವರು ನಾಮಪತ್ರ ಸಲ್ಲಿಸಿದ್ದಾರೆ.