ವಿಜಯಪುರ ನಗರ ಶಾಸಕರ ಕನಸಿನಂತೆ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳಾಗುತ್ತಿವೆಃ ರಾಮನಗೌಡ ಪಾಟೀಲ್ ಯತ್ನಾಳ

ವಿಜಯಪುರ, ಮಾ.25-ವಿಜಯಪುರ ನಗರ ಶಾಸಕರ ಕನಸಿನಂತೆ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳಾಗುತ್ತಿವೆ. ನಗರದ ರಸ್ತೆಗಳನ್ನು ಗುಣಮಟ್ಟದ ಸಿ.ಸಿ ರಸ್ತೆ, ಡ್ರೈನೇಜ, 24*7 ಕುಡಿಯುವ ನೀರಿನ ಪುರೈಕೆ ಯೋಜನೆ ಹಾಗೂ ನಗರದ ತುಂಬೆಲ್ಲ ಉದ್ಯಾನವನ ಅಭಿವೃದ್ಧಿ, ವಾಕಿಂಗ್ ಟ್ರ್ಯಾಕ, ಯೋಗಾ ಪ್ಲಾಟ್‍ಫಾರ್ಮ, ಹೈಮಾಸ್ಕ್, ಬೀದಿ ದೀಪ ಅಳವಡಿಕೆ, ಮತ್ತು ಸಿದ್ಧಸಿರಿ ಸೌಹಾರ್ದ ಸಹಕಾರಿಯಿಂದ ನಗರದ ಪ್ರಮುಖ ರಸ್ತೆಗಳ ಇಕ್ಕೆಗಲಕ್ಕೂ ಹಚ್ಚಲಾದ ಸಸಿಗಳಿಗೆ ಟ್ರೀ ಗಾರ್ಡ ನೀಡುವ ಮೂಲಕ ನಗರದ ಸೌಂದರ್ಯಕ್ಕೆ ಒತ್ತು ನೀಡುತ್ತಿದ್ದಾರೆ ಎಂದು ಸಿದ್ಧಸಿರಿ ಸೌಹಾರ್ಧ ಸಹಕಾರಿ ಯುವ ನಿರ್ದೇಶಕರಾದ ರಾಮನಗೌಡ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ನಗರ ಶಾಸಕ ಬಸನಗೌಡ ರಾ ಪಾಟೀಲ್ ಯತ್ನಾಳರವರು 2019-20 ನೇ ಸಾಲಿನ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿಯಲಿ ಮಂಜೂರಿಸಿದ 70.00 ಲಕ್ಷ ರೂ. ಮೊತ್ತದಲ್ಲಿ ತೊರವಿ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ಓ.ಹೆಚ್.ಟಿ (ನೀರಿನ ಟ್ಯಾಂಕ್) ನಿರ್ಮಾಣ ಹಾಗೂ ತೊರವಿ ಎಲ್ ಟಿ ನಂ.1 ರಿಂದ ತೊರವಿ ಗ್ರಾಮದ ವರೆಗೆ ಪೈಪಲೈನ್ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡುವ ಕಾಮಗಾರಿಗೆ ತೊರವಿ ಗ್ರಾಮದ ಸಾರ್ವಜನಿಕರ ಸಮ್ಮುಖದಲ್ಲಿ ನಡೆದ ಭೂಮಿ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ ನಗರದಲ್ಲಿ ಸಿದ್ಧಸಿರಿ ಸೌಹಾರ್ಧ ಸಹಕಾರಿಯಿಂದ ಸಾರ್ವಜನಿಕರಿಗಾಗಿ 22 ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಸಾರ್ವಜನಿಕರು ಇವುಗಳನ್ನು ಸದುಪಯೋಗ ಮಾಡಿಕೊಳ್ಳಲಿ ಎಂದರು.
ವಿಜಯಪುರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ನಗರದಲ್ಲಿ ಮಹಾಪುರುಷರ ಹೆಸರಿನ ರಸ್ತೆಗಳು, ವೃತ್ತಗಳು ಮತ್ತು ಪ್ರತಿಮೆಗಳ ಪ್ರತಿಷ್ಠಾಪನಾ ಕೆಲಸಗಳು ಪ್ರಾರಂಭಗೊಂಡಿವೆ ಅದರಂತೆ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ಹೊಸ ಪ್ರತಿಮೆ ಸ್ಥಾಪಿಸುವ ಮೂಲಕ ಆ ವೃತ್ತವನ್ನು ನವೀಕರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ ಮತ್ತು ಮೊದಲಿದ್ದ ಪ್ರತಿಮೆಯನ್ನು ಡಾ.ಬಾಬಾಸಾಹೆಬ ಅಂಬೇಡ್ಕರ ಹೆಸರಿನ ಕ್ರೀಡಾಂಗಣದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ವಿವರಿಸಿ ಹೇಳಿದರು.
ಸುಭಾಸಚಂದ್ರ ಬೋಸ್, ಅಹಿಲ್ಯಾಬಾಯಿ ಹೋಳ್ಕರ, ಡಾ.ಬಾಬು ಜಗಜೀವನರಾಮ್, ಎ.ಪಿ.ಜೆ ಕಲಾಂ ಮುಂತಾದ ಮಹಾಪುರುಷರ, ಸಂತರ, ದಾಸರ ವೃತ್ತಗಳ ಹಾಗೂ ಬೀದಿಗಳ ನಿರ್ಮಾಣ ಮಾಡಿದ್ದು ವಿಜಯಪುರ ನಗರ ಕಂಗೊಳಿಸುವಂತಾಗಿದೆ ಎಂದರು.
ಈ ಸಂಧರ್ಬದಲ್ಲಿ ತೊರವಿ ಗ್ರಾ.ಪಂ ಪಿ.ಡಿ.ಓ ಸುರೇಶ ಕಳ್ಳಿಮನಿ, ಮುಖಂಡರಾದ ದಾದಾಸಾಹೇಬ ಬಾಗಾಯತ್, ಪ್ರಕಾಶ ಚವ್ಹಾಣ, ರವಿ ಗರಸಂಗಿ, ಲಕ್ಕಪ್ಪ ಮಾಲಗಾರ, ಮಂಜು ನಡಗಡ್ಡಿ, ಲಾಲು ಗುಡಿಮನಿ, ರಾಜು ತೊರವಿ, ಲಕಾರಿ ಪೂಜಾರಿ, ಜಕ್ಕಪ್ಪ ಪೂಜಾರಿ, ಮಲಕಾರಿ ಪಾಣಿಗೇರಿ, ಶಿವು ಭಜಂತ್ರಿ, ಸುರೇಶ ಗಚ್ಚಿನಮನಿ, ಸೇರಿದಂತೆ ಗ್ರಾಮದ ಹಿರಿಯರು, ನಾಗರಿಕರು ಉಪಸ್ತಿತರಿದ್ದರು.